ಕೇಂದ್ರ ಸಚಿವ ನಿತಿನ್ ಗಡ್ಕರಿಯನ್ನು ಭೇಟಿಯಾದ ಸಂಸದ ಜಿ.ಕುಮಾರ ನಾಯಕ್
ಬೆಳಗಾವಿ-ಹುನಗುಂದ-ರಾಯಚೂರು ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ಕುರಿತು ಚರ್ಚೆ

ರಾಯಚೂರು : ದೆಹಲಿಯಲ್ಲಿ ಕೇಂದ್ರ ರಸ್ತೆ, ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರ್ ಅವರನ್ನು ರಾಯಚೂರು-ಯಾದಗಿರಿ ಲೋಕಸಭಾ ಕ್ಷೇತ್ರದ ಸಂಸದ ಜಿ.ಕುಮಾರ ನಾಯಕ್ ಭೇಟಿಯಾಗಿ ಬೆಳಗಾವಿ-ಹುನಗುಂದ-ರಾಯಚೂರು ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯ ಕುರಿತು ಚರ್ಚೆ ನಡೆಸಿದರು.
ಪ್ಯಾಕೇಜ್ 1ರಿಂದ 7 ರಲ್ಲಿ ಪ್ಯಾಕೇಜ್ 5 ಮತ್ತು 6 ರಾಯಚೂರು ಜಿಲ್ಲೆಯಲ್ಲಿ ಇದ್ದು, ಈ ಎರಡು ಪ್ಯಾಕೇಜ್ ಕಾಮಗಾರಿ ಪೂರ್ಣಗೊಳ್ಳುವ ಹಂತದಲ್ಲಿ ಇದ್ದು, ಪ್ಯಾಕೇಜ್ 5 ಮತ್ತು 6 ಎರಡು ಬದಿಗಳಲ್ಲಿ ತಡೆಗೋಡೆಯನ್ನು ನಿರ್ಮಾಣ ಮಾಡಿದ್ದು, ಇದರಿಂದ ರೈತರಿಗೆ ದಿನನಿತ್ಯ ತಮ್ಮ ಚಟುವಟಿಕೆಗಳಿಗೆ ಹಾಗೂ ತಮ್ಮ ಹೊಲಗಳಿಗೆ ಪ್ರವೇಶಿಸಲು ತುಂಬಾ ತೊಂದರೆ ಉಂಟಾಗುತ್ತಿದೆ.
ಈ ತಡೆಗೋಡೆಗಳ ಬಗ್ಗೆ ಸ್ಥಳೀಯ ಗ್ರಾಮಸ್ಥರಿಂದ ಹಾಗೂ ರೈತರಿಂದ ತೀವ್ರ ವಿರೋಧವಿದೆ. ಪ್ಯಾಕೇಜ್ 7 ಸಿರವಾರ ಯಿಂದ ರಾಯಚೂರುವರಗೆ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯನ್ನು ಆದಷ್ಟು ಶೀಘ್ರವೇ ಪ್ರಾರಂಭಿಸಬೇಕು ಎಂದು ಸಚಿವರಿಗೆ ಮನವಿ ಮಾಡಿದ್ದಾರೆ.
Next Story