ಹೊಸ ಮದ್ಯದಂಗಡಿ ಅನುಮತಿ ನೀಡುವ ಪ್ರಶ್ನೆಯೇ ಇಲ್ಲ: ಸಚಿವ ಆರ್.ಬಿ ತಿಮ್ಮಾಪುರ
ರಾಯಚೂರು: ‘ಮದ್ಯದ ಬೆಲೆ ಏರಿಕೆಯಿಂದ ಮದ್ಯ ಸೇವಿಸುವವರ ಸಂಖ್ಯೆ ಕಡಿಮೆಯಾಗಲಿದೆ’ ಎಂದು ಅಬಕಾರಿ ಸಚಿವ ಆರ್.ಬಿ.ತಿಮ್ಮಾಪೂರ್, ಬಜೆಟ್‍ನಲ್ಲಿ ಮದ್ಯ ಬೆಲೆ ಏರಿಕೆ ಸಾಧ್ಯತೆ ಇದೆ ಎಂದು ಪರೋಕ್ಷವಾಗಿ ಮುನ್ಸೂಚನೆ ನೀಡಿದ್ದಾರೆ.
ಮಂಗಳವಾರ ಜಿಲ್ಲೆಯ ಸಿಂಧನೂರು ತಾಲೂಕಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಮದ್ಯದ ದರ ಹೆಚ್ಚಳವಾದರೆ ನಷ್ಟವೇನು ಇಲ್ಲ. ಮದ್ಯ ಸೇವಿಸುವವರ ಸಂಖ್ಯೆ ಕಡಿಮೆ ಆಗುತ್ತದೆ. ರಾಜ್ಯದಲ್ಲಿ ಹೊಸ ಮದ್ಯದಂಗಡಿಗಳಿಗೆ ಅನುಮತಿ ನೀಡುವ ಪ್ರಶ್ನೆ ಇಲ್ಲ ಎಂದು ಸ್ಪಷ್ಟಣೆ ನೀಡಿದರು.
ಚುನಾವಣೆಗಳು ಬಂದಾಗ ಕೆಲ ಪಕ್ಷಗಳು ಉದ್ದೇಶಪೂರಕವಾಗಿ ಕೋಮುವಾದಕ್ಕೆ ಉತ್ತೇಜನ ನೀಡುತ್ತವೆ. ಹೀಗಾಗಿ ಮಂಡ್ಯದಲ್ಲಿ ಧ್ವಜದ ವಿಚಾರಕ್ಕೆ ವಿವಾದ ಉಂಟಾಗಿದೆ. ರಾಷ್ಟ್ರಧ್ವಜಕ್ಕೆ ಅಗೌರವ ಸರಿಯಲ್ಲ ಎಂದು ಅವರು ಆಕ್ಷೇಪಿಸಿದರು.
Next Story