ಪಿ. ಐ ಮಂಜುನಾಥ ಅನುಚಿತ ವರ್ತನೆ, ಶಿಸ್ತು ಕ್ರಮಕ್ಕೆ ರೈತ ಸಂಘ ಆಗ್ರಹ
ತುಳಿತಕ್ಕೆ ಒಳಗಾದ ನೊಂದ ಜನರು ಹಾಗೂ ಅಸಹಾಯಕ ಜನತೆ ಪೊಲೀಸ್ ಠಾಣೆಗೆ ದೂರು ನೀಡಲು ಹೋದಾಗ ಅವರೊಂದಿಗೆ ಅನುಚಿತವಾಗಿ ವರ್ತನೆ ಹಾಗೂ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದಾರೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ಪದಾಧಿಕಾರಿಗಳು ಆರೋಪಿಸಿದ್ದಾರೆ.
ರೈತ ಸಂಘಟನೆ ಪಟ್ಟಣದಲ್ಲಿ ಸುದ್ದಿಗೋಷ್ಠಿ ನಡೆಸಿ ಡಿ.17 ರಂದು ಮಂಗಳವಾರ ಮಹಿಳೆಗೆ ಅನ್ಯಾಯವಾಗಿದೆ ಎಂಬ ಕಾರಣಕ್ಕೆ ಪೊಲೀಸ್ ಠಾಣೆ ದೂರು ನೀಡಲು ಹೋದರೆ ಪೊಲೀಸ್ ಠಾಣೆಯ ಪಿ ಐ ಮಂಜುನಾಥ ಬಾಯಿಗೆ ಬಂದಂತೆ ಬೈದು , ನಿಂದಿಸಿದ್ದಲ್ಲದೆ , ಠಾಣೆಗೆ ಬಂದರೆ ಹುಷಾರು ಎಂದು ಬೆದರಿಸಿದ್ದಾರೆ ಎಂದರು.
ಪೊಲೀಸರು ಜನರ ಸಮಸ್ಯೆಗೆ ಜನತೆಯ ಸ್ನೇಹ ಜೀವಿಗಳಾಗಿ ಕರ್ತವ್ಯ ಪಾಲನೆ ಮಾಡಬೇಕು , ಅವರ ದೂರುಗಳನ್ನು ಸ್ವೀಕರಿಸಬೇಕು ,ಇಂತಹ ಪೊಲೀಸ್ ಅಧಿಕಾರಿ ದುರಹಂಕಾರದಿಂದ ವರ್ತನೆ ಮಾಡುತ್ತಿದ್ದಾರೆ ಎಂದು ದೂರಿದರು.
ಪೋಲಿಸ್ ಅಧಿಕಾರಿ ಮಂಜುನಾಥ ಅವರು ಬಂದಾಗ ಪಟ್ಟಣದಲ್ಲಿ ಅಕ್ರಮ ದಂದೆಗಳು ಜೋರಾಗಿ ನಡೆಯುತ್ತಿವೆ, ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕದೆ ಹಾಗೂ ಜನತೆಯೊಂದಿಗೆ ಅನುಚಿತವಾಗಿ ವರ್ತಿಸುತ್ತಿರುವ ಅಧಿಕಾರಿಯ ವಿರುದ್ಧ ಮೇಲಾಧಿಕಾರಿಗಳು ಶಿಸ್ತು ಕ್ರಮ ಜರುಗಿಸಬೇಕು ಎಂದು ಅಗ್ರಹಿಸಿದರು.
ಈ ವೇಳೆ ಮರೀಲಿಂಗ ಪಾಟೀಲ್, ವೆಂಕನಗೌಡ ನಾಯಕ ವಕೀಲ, ತಮ್ಮನಗೌಡ, ಮಲ್ಲೇಶ ನಾಯಕ,ಬಸವರಾಜ ಹಿರೇಮಠ, ಮಾರುತಿ ನಾಯಕ, ಶರಣ ಬಸವ, ಚಂದ್ರು ನಾಯಕ, ನಾಗರಾಜ, ರಮೇಶ್, ವೆಂಕಟೇಶ್, ಹನುಮಂತ್ರಾಯ ಇದ್ದರು.