ಮುದಗಲ್ ತಾಲೂಕು ರಚನೆಗೆ ಸರ್ಕಾರದ ಮೇಲೆ ಒತ್ತಡ : ಶಾಸಕ ಮಾನಪ್ಪ ವಜ್ಜಲ್
ರಾಯಚೂರು: ಜಿಲ್ಲೆಯ ಲಿಂಗಸೂಗೂರು ತಾಲೂಕು ವ್ಯಾಪ್ತಿಗೆ ಬರುವ ಮುದಗಲ್ ಪಟ್ಟಣವನ್ನು'ಮುದಗಲ್ ತಾಲ್ಲೂಕು ಘೋಷಣೆಗೆ ಸರ್ಕಾರದ ಮೇಲೆ ಒತ್ತಡ ಹಾಕಿದ್ದೇನೆ' ಎಂದು ಶಾಸಕ ಮಾನಪ್ಪ ವಜ್ಜಲ ಹೇಳಿದರು.
ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ, 'ಸಿಎಂ ಹೊಸ ರಚನೆ ಮಾಡುವುದಿಲ್ಲ ತಾಲ್ಲೂಕು ಎಂದು ಹೇಳಿದ್ದಾರೆ. ಆದರೂ ಪ್ರಯತ್ನ ಮಾಡುತ್ತೇನೆ. ನಂದವಾಡಗಿ ಏತ ನೀರಾವರಿ ಯೋಜನೆಯಲ್ಲಿ ಕೈಬಿಟ್ಟ 30 ಗ್ರಾಮಗಳನ್ನು ಮತ್ತೆ ಸೇರ್ಪಡೆ ಮಾಡುತ್ತೇನೆ' ಎಂದರು.
ಪಟ್ಟಣಕ್ಕೆ ನಿರಂತರ ಕುಡಿಯುವ ನೀರಿನ ಯೋಜನೆಗೆ ಮರು ಟೆಂಡರ್ ಕರೆಯಲು ಸರ್ಕಾರದ ಮೇಲೆ ಒತ್ತಡ ಹಾಕಿದ್ದೇನೆ. ಮುದಗಲ್ ಉತ್ಸವ ಮಾಡಲು ಜಿಲ್ಲಾಧಿಕಾರಿಗೆ ವರದಿ ಬಂದಿದೆ. ಮುದಗಲ್ ಪತ್ರಿಕಾ ಭವನ ನಿರ್ಮಾಣಕ್ಕೆ 15 ಲಕ್ಷ ಅನುದಾನ ನೀಡುತ್ತೇನೆ. ಪೊಲೀಸ್ ಠಾಣೆಗೆ ವಾಹನ ನೀಡಲು ಪ್ರಯತ್ನಿಸುತ್ತೇನೆ ಎಂದು ಭರವಸೆ ನೀಡಿದರು.
Next Story