ರಾಯಚೂರು | ಸಿಡಿಲು ಬಡಿದು ಬೊಲೆರೊ ವಾಹನ ಬೆಂಕಿಗಾಹುತಿ

ರಾಯಚೂರು: ಜಿಲ್ಲೆಯಲ್ಲಿ ಗುಡುಗು-ಸಿಡಿಲು ಸಹಿತ ಸುರಿದ ಮಳೆಯಿಂದಾಗಿ ದೇವದುರ್ಗ ತಾಲೂಕಿನ ಗಾಣಧಾಳ ಗ್ರಾಮದ ಜಮೀನಿನನೊಂದರಲ್ಲಿ ತೆಂಗಿನ ಮರದ ಕೆಳಗೆ ನಿಲ್ಲಿಸಿದ್ದ ಬೊಲೆರೊ ವಾಹನವೊಂದು ಬೆಂಕಿಗೆ ಆಹುತಿಯಾಗಿದೆ.
ಸೋಮನಮರಡಿ ಗ್ರಾಮದ ಹನುಮಂತ್ರಾಯ ಗಣಜಲಿ ಎಂಬುವವರಿಗೆ ಸೇರಿದ ವಾಹನಕ್ಕೆ ಬೆಂಕಿಬಿದ್ದಿದೆ. ತೆಂಗಿನ ಮರಕ್ಕೆ ಸಿಡಿಲು ಬಡಿದಿದ್ದರಿಂದ ಅದರ ಕೆಳಗೆ ನಿಲ್ಲಿಸಿದ್ದ ಬೊಲೆರೊ ವಾಹನಕ್ಕೆ ಬೆಂಕಿಯ ಕಿಡಿ ತಗುಲಿದೆ. ಪರಿಣಾಮ ವಾಹನ ಬೆಂಕಿಗಾಹುತಿಯಾಗಿದೆ.
ಈ ಕುರಿತು ದೇವದುರ್ಗ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
Next Story