ರಾಯಚೂರು | ಕಾಲುವೆಗೆ ಹಾರಿ ಮಹಿಳೆ ಆತ್ಮಹತ್ಯೆ
ಸಾಂದರ್ಭಿಕ ಚಿತ್ರ
ರಾಯಚೂರು : ಮಹಿಳೆಯೊಬ್ಬರು ತುಂಗಭದ್ರಾ ಎಡದಂಡೆ ಕಾಲುವೆಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಸ್ಕಿ ತಾಲ್ಲೂಕಿನ ಗ್ರಾಮದಲ್ಲಿ ನಡೆದಿದೆ.
ಗುಡಿಹಾಳ ಗ್ರಾಮದ ಲಕ್ಷ್ಮೀ ಕೃಷ್ಣಪ್ಪ (38) ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಅವರಿಗೆ ಪತಿ, ಪುತ್ರ ಮತ್ತು ಪುತ್ರಿ ಇದ್ದಾರೆ. ಆತ್ಮಹತ್ಯೆ ಕಾರಣ ಇನ್ನೂ ತಿಳಿದು ಬಂದಿಲ್ಲ. ಗುಡಿಹಾಳ ಹತ್ತಿರ ಮುಖ್ಯ ಕಾಲುವೆಗೆ ಬಿದ್ದಿದ್ದು, ಇಲ್ಲಿನ ಸಮೀಪದ ಗೂಗೆಬಾಳ ಸೇತುವೆ ಬಳಿ ಭಾನುವಾರ ಮೃತದೇಹ ಪತ್ತೆಯಾಗಿದೆ.
ಈ ಕುರಿತು ಕವಿತಾಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story