ರಾಯಚೂರು | ವಿದ್ಯುತ್ ಉಪಕೇಂದ್ರ ದುರಸ್ತಿ ಕಾರ್ಯ ವೇಳೆ ಅವಘಡ : ಸಿಬ್ಬಂದಿಗೆ ಗಾಯ

ರಾಯಚೂರು : ನಗರದ ಹೊರವಲಯದ 110 ಕೆ.ವಿ ವಡವಟ್ಟಿ ವಿದ್ಯುತ್ ಉಪಕೇಂದ್ರದ ದುರಸ್ತಿ ಕಾರ್ಯ ಮಾಡುವ ವೇಳೆ ಜೆಸ್ಕಾಂ ಸಿಬ್ಬಂದಿ ವಿದ್ಯುತ್ ಶಾಕ್ ಹೊಡೆದು ಗಾಯಗೊಂಡ ಘಟನೆ ಇಂದು ಸಂಜೆ ನಡೆದಿದೆ.
ಗಾಯಗೊಂಡ ಜೆಸ್ಕಾಂ ಸಿಬ್ಬಂದಿ( ಕಿರಿಯ ಮಾರ್ಗದಾಳು) ವೀರೇಶ ಎಂದು ಗುರುತಿಸಲಾಗಿದೆ.
ನಗರದ ಗದ್ವಾಲ್ ರಸ್ತೆಯ ದೇವಿನಗರ, ಎನ್ ಜಿಒ ಕಾಲೋನಿ, ಬಸವನ ಬಾವಿ, ನೀರಭಾವಿಕುಂಟಾ ಬಡಾವಣೆಗಳಿಗೆ ಸಂಪರ್ಕ ಕಲ್ಪಿಸುವ ವಿದ್ಯುತ್ ಉಪ ಕೇಂದ್ರದ ದುರಸ್ತಿ ಮಾಡುವಾಗ ಒಂದೇ ಕಂಬಕ್ಕೆ ಬೇರೆ ಬೇರೆ ಶಾಖೆಯ ವಿದ್ಯುತ್ ಲೈನ್ ಎಳೆದಿರುವುದು ಈ ಅವಘಡಕ್ಕೆ ಕಾರಣ ಎಂದು ಸಿಬ್ಬಂದಿ ತಿಳಿಸಿದ್ದಾರೆ.
ವಿದ್ಯುತ್ ಅವಘಡಕ್ಕೀಡಾದ ವೀರೇಶ ಹೊಟ್ಟೆ, ಕಾಲಿನ ಭಾಗ ಸುಟ್ಟಿದ್ದು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
Next Story