ರಾಯಚೂರು: ಗುಂಪು ಹಲ್ಲೆ ಆರೋಪ; ವ್ಯಕ್ತಿ ಮೃತ್ಯು
ರಾಯಚೂರು: ಒಬ್ಬ ವ್ಯಕ್ತಿಯನ್ನು 7 ಜನರ ಗುಂಪು ಹಲ್ಲೆ ನಡೆಸಿ ಕೊಲೆ ಮಾಡಿರುವ ಘಟನೆ ಜಿಲ್ಲೆಯ ಮಸ್ಕಿ ತಾಲ್ಲೂಕಿನ ಸೊಸೈಟಿ ಕ್ಯಾಂಪ್ ನಲ್ಲಿ ಶುಕ್ರವಾರ ನಡೆದಿರುವ ಬಗ್ಗೆ ವರದಿಯಾಗಿದೆ.
ಸೊಸೈಟಿ ಕ್ಯಾಂಪ್ ನಿವಾಸಿ ರಾಜಪ್ಪ (41) ಕೊಲೆಯಾದ ವ್ಯಕ್ತಿ. ಅದೇ ಕ್ಯಾಂಪ್ ನ ಏಳು ಜನರು ಜಮೀನಿನಲ್ಲಿ ಜಗಳ ಮಾಡಿ ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ತೀವ್ರ ಗಾಯಗೊಂಡಿದ್ದ ರಾಜಪ್ಪ ಅವರನ್ನು ರಾಯಚೂರಿನ ರಿಮ್ಸ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಕವಿತಾಳ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
Next Story