ರಾಯಚೂರು | ಬೈಕ್ಗೆ ಆಟೋ ಢಿಕ್ಕಿ: ನಾಲ್ಕು ವರ್ಷದ ಮಗು ಸೇರಿ ಇಬ್ಬರು ಮೃತ್ಯು
ಸಾಂದರ್ಭಿಕ ಚಿತ್ರ
ರಾಯಚೂರು : ಬೈಕ್ಗೆ ಆಟೋ ಢಿಕ್ಕಿ ಹೊಡೆದು ನಾಲ್ಕು ವರ್ಷದ ಮಗು ಮತ್ತು ವೃದ್ಧ ಮೃತಪಟ್ಟಿರುವ ಘಟನೆ ದೇವದುರ್ಗ ತಾಲ್ಲೂಕಿನ ಸೋಮನಮರಡಿ ಗ್ರಾಮದ ರಸ್ತೆಯಲ್ಲಿ ನಡೆದಿದೆ.
ನಿಂಗಮ್ಮ ತಿಪ್ಪಣ್ಣ ವಡುವಾಟಿ (60) ಮತ್ತು ಶಿವಾನಿ ನರಸಣ್ಣ ಮುಂಡರಗಿ (4) ಮೃತಪಟ್ಟಿರುವವರು ಎಂದು ತಿಳಿದುಬಂದಿದೆ. ಪ್ರಯಾಣಿಕರಾದ ನರಸಣ್ಣ, ಮಲ್ಲಣ್ಣ ಮುಂಡರಗಿ ಹಾಗೂ ಉಮಾದೇವಿ ಸಾಬಣ್ಣ ತೀವ್ರವಾಗಿ ಗಾಯಗೊಂಡಿದ್ದು, ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.
ಘಟನೆಯ ಕುರಿತು ಜಾಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story