ರಾಯಚೂರು | ಬಾಬಾ ಸಾಹೇಬ್ ಅಂಬೇಡ್ಕರ್, ಫೆಲೆಸ್ತೀನ್ ಕುರಿತು ಪುಸ್ತಕ ಬಿಡುಗಡೆ
ಫ್ಯಾಸಿಸ್ಟ್ ದಾಳಿಯ ವಿರುದ್ಧ ಇಂಡಿಯಾವನ್ನು ಉಳಿಸಲು ಸಂಘರ್ಷ ತೀವ್ರಗೊಳಿಸೋಣ : ಪಿ.ಜೆ.ಜೇಮ್ಸ್
ರಾಯಚೂರು : ಜಿಲ್ಲೆಯ ಲಿಂಗಸಗೂರಿನ ಗುರುಭವನದಲ್ಲಿ ನಡೆದ ಡಾ.ಬಿ.ಆರ್.ಅಂಬೇಡ್ಕರ್ ಕ್ರಾಂತಿಕಾರಿ ಕಮ್ಯುನಿಸ್ಟ್ ದೃಷ್ಟಿಕೋನ ಹಾಗೂ ಫೆಲೆಸ್ತೀನ್ ಪ್ರಶ್ನೆ ಎಡ ಪ್ರಜಾಪ್ರಭುತ್ವ ದೃಷ್ಟಿಕೋನ ಇಂಗ್ಲಿಷ್ ಅವತರಣಿಕೆ ಪುಸ್ತಕಗಳನ್ನು ಬಿಡುಗಡೆ ಮಾಡಲಾಯಿತು.
ಸಿಪಿಐಎಂಎಲ್ ರೆಡ್ ಸ್ಟಾರ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪಿ.ಜೆ.ಜೇಮ್ಸ್ ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಕೇಂದ್ರದ ಸಂಘಪರಿವಾರ ನೇತೃತ್ವದ ಬಿಜೆಪಿ ಸರ್ಕಾರ ನೂತನ ದಾಳಿಗಳ ವಿರುದ್ಧ ಡಾ.ಬಿ.ಆರ್.ಅಂಬೇಡ್ಕರ್ ರವರು ಸ್ವಾತಂತ್ರ್ಯ ಪೂರ್ವದಲ್ಲಿಯೇ ಮನುವಾದಿ ಸಿದ್ಧಾಂತದ ಪುಸ್ತಕ(ಮನಸ್ಮೃತಿ)ವನ್ನು ರಾಮಲೀಲಾ ಮೈದಾನದಲ್ಲಿ ಸುಟ್ಟು ಹಾಕಿದ್ದರು. ಆದರೆ ಈಚೆಗೆ ಅನೇಕರು ಮನಸ್ಮೃತಿಯ ಸಿದ್ಧಾಂತದಡಿ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಈ ನೆಲಗಟ್ಟಿನ ಮೇಲೆ ಕೇಂದ್ರ ಸಮಿತಿಯ ಮೂರು ಸಂಗಾತಿಗಳು ಒಳಗೊಂಡು ಈ ಇಂಗ್ಲಿಷ್ ಅವತರಣಿಕೆ ಪುಸ್ತಕ ಸಿಪಿಐ ಎಂಎಲ್ ರೆಡ್ ಸ್ಟಾರ್ ಹೊರ ತಂದಿದೆ. ಇದು ಭಾರತ ದೇಶದ ಎಲ್ಲಾ ಜನ ವಿಭಾಗಕ್ಕೆ ಮಾರ್ಗದರ್ಶಕ ಕೈಪಿಡಿಯಾಗಿದೆ, ಹಿಂದೂ ಮಹಾಸಭಾ ಅಂಬೇಡ್ಕರ್ ಸಂವಿಧಾನ ಬರಹ ಸಂದರ್ಭದಲ್ಲಿ ವಿರೋಧಿಸಿ ಮನುಸ್ಮೃತಿಯನ್ನೇ ಈ ದೇಶದ ಸಂವಿಧಾನ ಆಗಬೇಕು ಎನ್ನುವ ದಾಖಲೆಗಳು ಆರ್ ಎಸ್ ಎಸ್ ಮುಖವಾಣಿ ಪತ್ರಿಕೆಯಲ್ಲಿ ಪ್ರಕಟಿಸಲಾಯಿತು. ಹಿಂದೂರಾಷ್ಟ್ರ ಮಾಡಲು ಹೊರಟ ಮನುವಾದಿ ಆರ್ ಎಸ್ ಎಸ್ ಫ್ಯಾಸಿಸ್ಟ್ ದಾಳಿಯ ವಿರುದ್ಧ ಇಂಡಿಯಾವನ್ನು ಉಳಿಸಲು ಸಂಘರ್ಷ ತೀವ್ರಗೊಳಿಸೋಣ ಎಂದರು.
ಅಂಬೇಡ್ಕರ್ ಪುಸ್ತಕವನ್ನು ಜನಕವಿಸಿ ದಾನಪ್ಪ ನಿಲೋಗಲ್ ಇವರು ಖಾಲಿದ್ ಚಾವುಸ್ ಅವರಿಗೆ ಪುಸ್ತಕ ನೀಡುವುದರ ಮೂಲಕ ಬಿಡುಗಡೆ ಮಾಡಲಾಯಿತು.
ಎರಡನೇ ಪುಸ್ತಕವಾದ ಫೆಲೆಸ್ತೀನ್ ಪ್ರಶ್ನೆ ಎಡ ಪ್ರಜಾಪ್ರಭುತ್ವದ ದೃಷ್ಟಿಕೋನದ ಪುಸ್ತಕ ಲಿಂಗಪ್ಪ ಪರಂಗಿ ಇವರು ವೀರಭದ್ರಪ್ಪ ಅಧ್ಯಕ್ಷರು ಕರ್ನಾಟಕ ರೈತ ಸಂಘ ಇವರಿಗೆ ನೀಡುವುದರ ಮೂಲಕ ಬಿಡುಗಡೆ ಮಾಡಲಾಯಿತು.
ಫೆಲೆಸ್ತೀನ್ ನ ಜನಪರ ಸಂಘಟನೆಯಾದ ಹಮಾಸನ್ನು (ಹಮಾಸ್) ಉಗ್ರವಾದಿ ಸಂಘಟನೆ ಎಂದು ಅಮೆರಿಕ ಸಾಮ್ರಾಜ್ಯಶಾಹಿ ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಚೋದಿಸುತ್ತದೆ. ಇದರ ವಿರುದ್ಧವಾಗಿ ದೇಶ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ, ನೈಜ ಫೆಲೆಸ್ತೀನ್ ವಿದ್ಯಮಾನವನ್ನು ಬಹಿರಂಗಪಡಿಸುವ ಪುಸ್ತಕ ಇದಾಗಿದೆ ಎಂದು ಫೆಲೆಸ್ತೀನ್ ಪುಸ್ತಕದ ಬರಹಗಾರ ಕಬೀರ್ ಕೇರಳ ವಿವರಿಸಿದರು.
ಪಕ್ಷದ ಹಿರಿಯರಾದ ಕೆ.ಎನ್.ರಾಮಚಂದ್ರನ್, ಸಿಪಿಐಎಂಎಲ್ ರೆಡ್ ಸ್ಟಾರ್ ಪಕ್ಷದ ಪಾಲಿಟ್ ಬ್ಯುರೋ ಸದಸ್ಯರಾದ, ಶಂಕರ್ ಪಶ್ಚಿಮ್ ಬಂಗಾಳ, ವಿಜಯ ಮಧ್ಯಪ್ರದೇಶ, ಆರ್.ಮಾನಸಯ್ಯ ಮಾತನಾಡಿದರು.
ಪಕ್ಷದ ರಾಜ್ಯ ಕಾರ್ಯದರ್ಶಿಯಾದ ಬಿ.ರುದ್ರಯ್ಯ ಅಧ್ಯಕ್ಷತೆ ವಹಿಸಿದ್ದರು. ಮುಖಂಡರಾದ ಹನುಮಂತಪ್ಪ ಕುಣೆಕೆಲ್ಲೂರ್, ಚಿನ್ನಪ್ಪ ಕೊಟ್ರಿಕಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.
ಕ್ರಾಂತಿಕಾರಿ ಸಾಂಸ್ಕೃತಿಕ ವೇದಿಕೆ(RCF)ಯ ಆದೇಶ ನಗನೂರು, ಚಿದಾನಂದ ಕಸಬಾ ಲಿಂಗಸುಗೂರು, ರಮೇಶ್ ಹಿರೇ ಹೆಸರೂರು, ಡಿ.ಕೆ.ಲಿಂಗಸಗೂರು ಅಂಬೇಡ್ಕರ್ ಕುರಿತು ಕ್ರಾಂತಿಗೀತೆಗಳನ್ನು ಹಾಡಿದರು. ಕಾರ್ಯಕ್ರಮವನ್ನು ಆರ್ ಸಿಎಪ್ ನ ಎಂ.ಗಂಗಾಧರ ನಿರೂಪಿಸಿದರು.