ರಾಯಚೂರು | ಹೊಂಡದಲ್ಲಿ ಬಿದ್ದು ಬಾಲಕ ಮೃತ್ಯು

ರಾಯಚೂರು : ದೇವದುರ್ಗ ತಾಲೂಕಿನ ಕಾಕರಗಲ್ ಗ್ರಾಮದ ಹೊರವಲಯದಲ್ಲಿ ರಸ್ತೆ ಕಾಮಗಾರಿಗೆ ತೋಡಿದ್ದ ಹೊಂಡದಲ್ಲಿ ವಿದ್ಯಾರ್ಥಿಯೊರ್ವ ಬಿದ್ದು ಮೃತಪಟ್ಟಿರುವ ಘಟನೆ ಇಂದು ನಡೆದಿದೆ.
ಮೃತಪಟ್ಟ ವಿದ್ಯಾರ್ಥಿ ಮಂಜುನಾಥ ಕಾಶೀನಾಥ ಎಂದು ಗುರುತಿಸಲಾಗಿದೆ.
ಗ್ರಾಮದ ಸರಕಾರಿ ಶಾಲೆಯಲ್ಲಿ 9 ನೇ ತರಗತಿಯಲ್ಲಿ ಓದುತಿದ್ದ ಎಂದು ಹೇಳಲಾಗಿದೆ. ಈಜಾಡಲು ಹೊಂಡದಲ್ಲಿ ಇಳಿದ ಮತ್ತೆ ಮೇಲಕ್ಕೆ ಬರದೆ ಮೃತಪಟ್ಟಿದ್ದಾನೆ ಎಂದು ಹೇಳಲಾಗಿದೆ.
ಕುಟುಂಬಸ್ಥರು ಗ್ರಾಮದಲ್ಲಿ ಹುಡುಕಿದರೂ ಬಾಲಕ ಸಿಗಲಿಲ್ಲ, ಕೊನೆಗೂ ನೀರಿನ ಹೊಂಡದ ಬಳಿ ಬಂದರೆ ಹೊಂಡದ ದಂಡೆಯಲ್ಲಿ ಬಟ್ಟೆ ,ತಂಬಿಗೆ ಕಂಡು ಬಂದಿದೆ. ಅನುಮಾನ ಪಟ್ಟು ಹೊಂಡದ ನೀರು ಖಾಲಿಮಾಡಿದಾಗ ವಿದ್ಯಾರ್ಥಿಯ ಮೃತದೇಹ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.
ದೇವದುರ್ಗ ತಾಲ್ಲೂಕಾಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆದಿದೆ. ಘಟನೆಯು ಗಬ್ಬೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ.
Next Story