ರಾಯಚೂರು | ಜ.17ರಂದು ಕ್ಯಾನ್ಸರ್ ಉಚಿತ ತಪಾಸಣಾ ಶಿಬಿರ
ರಾಯಚೂರು : ಕಲಬುರಗಿಯ ಎಚ್ಸಿಜಿ ಕ್ಯಾನ್ಸರ್ ಸೆಂಟರ್ ನಿಂದ ಜ.17ರಂದು ಬೆಳಗ್ಗೆ 10 ರಿಂದ ಸಂಜೆ 4 ವರೆಗೆ ನಗರದ ನವೀನ್ ಆಸ್ಪತ್ರೆಯಲ್ಲಿ ಕ್ಯಾನ್ಸರ್ ಉಚಿತ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿದೆ ಎಂದು ಕೇಂದ್ರದ ಮಾರುಕಟ್ಟೆ ವ್ಯವಸ್ಥಾಪಕ ವಿನೋದ ಕುಮಾರ ಕಲಕರ್ಣಿ ತಿಳಿಸಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ತ್ರೀಯರಿಗೆ ಸ್ತನ, ಬ್ಲಡ್, ಥೈರಾಯ್ಡ್, ಬಾಯಿ, ಗರ್ಭಕೋಶ, ಪುಷ್ಪಸದ, ಮೂತ್ರಪಿಂಡ, ತಲೆ ಮತ್ತು ಕುತ್ತಿಗೆ, ಪುರುಷ ಗ್ರಂಥಿಯ ಸೇರಿ ಮೊದಲಾದ ಕ್ಯಾನ್ಸರ್ ಗಳಿಗೆ ಸಂಬಂಧಿಸಿದಂತೆ ತಜ್ಞರಿಂದ ಸಮಾಲೋಚನೆ ನಡೆಸಲಾಗುವುದು, ಇದರ ಜೊತೆಗೆ ಸ್ತ್ರೀಯರಿಗೆ ವಿಶೇಷವಾಗಿ ಕಾಯಿಲೆ ಪತ್ತೆಹಚ್ಚಲು ಪ್ಯಾಪ್ ಸ್ಮಿಯರ್ ಮತ್ತು ಮ್ಯಾಮೋಗ್ರಫಿ ಪರೀಕ್ಷೆಗಳನ್ನು ಮಾಡಲಾಗುವುದು ಎಂದರು.
ಬಿಪಿಎಲ್ ಸೇರಿದಂತೆ ಸರ್ಕಾರದ ಆರೋಗ್ಯ ಯೋಜನೆಯಡಿಯಲ್ಲಿ ಕೇಂದ್ರದಿಂದ ಅಗತ್ಯ ಚಿಕಿತ್ಸೆಯನ್ನು ಒದಗಿಸಿಕೊಡಲಾಗುವುದು ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಶಿಬಿರದ ಸಂಚಾಲಕ ರಮೇಶ ಪಾಟೀಲ್ ಇದ್ದರು.
Next Story