ರಾಯಚೂರು | ಕಾರು-ಬೈಕ್ ಢಿಕ್ಕಿ; ಸವಾರ ಗಂಭೀರ ಗಾಯ

ರಾಯಚೂರು : ಜಿಲ್ಲೆಯ ದೇವದುರ್ಗ ತಾಲೂಕಿನ ಮಿಯಾಪುರ ಕ್ರಾಸ್ ಬಳಿ ಜೆಡಿಎಸ್ ಶಾಸಕಿ ಕರೆಮ್ಮ ನಾಯಕ ಅವರ ಪುತ್ರಿ ಬೈಕ್ ಸವಾರನಿಗೆ ಕಾರಿನಲ್ಲಿ ಢಿಕ್ಕಿ ಹೊಡೆದ ಘಟನೆ ನಡೆದಿದೆ.
ಅತಿವೇಗದಿಂದ ಕಾರು ಚಾಲನೆ ಮಾಡುತ್ತಿದ್ದ ಶಾಸಕಿಯ ಪುತ್ರಿ ಗೌರಿ ನಾಯಕ ಆಂಧ್ರಪ್ರದೇಶದ ಮೂಲದ ಕೋಮಿಶೆಟ್ಟಿ ಕೃಷ್ಣ ಎಂಬುವವರ ಬೈಕ್ ಗೆ ಢಿಕ್ಕಿ ಹೊಡೆದಿದ್ದಾರೆ ಎನ್ನಲಾಗಿದೆ.
ಬೈಕ್ ಸವಾರನಿಗೆ ತೀವ್ರ ಕಾಲಿಗೆ ಮತ್ತು ಮೆದುಳಿಗೆ ಪೆಟ್ಟು ಬಿದ್ದಿದ್ದು, ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದು ಬಂದಿದೆ.
ದೇವದುರ್ಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
Next Story