ರಾಯಚೂರು: ಅಬಕಾರಿ ಅಧಿಕಾರಿಗಳ ದಾಳಿ; 630ಲೀಟರ್ ಕಲಬೆರಕೆ ಸೇಂದಿ ವಶ
ರಾಯಚೂರು: ನಗರದ ಗದ್ವಾಲ ರಸ್ತೆಯಲ್ಲಿರುವ ವೀರಾಂಜನೇಯ ದೇವಸ್ಥಾನದ ಬಳಿ ಅಕ್ರಮ ಕಲಬೆರಕೆ ಸೇಂದಿ ಮಾರಾಟ ಮಾಡುತ್ತಿದ್ದ ಮನೆ ಮೇಲೆ ಅಬಕಾರಿ ಇಲಾಖೆಯ ಅಧಿಕಾರಿಗಳು ದಾಳಿ ಮಾಡಿ 630 ಲೀಟರ್ ಕಲಬೆರಕೆ ಸೇಂದಿ ವಶಪಡಿಸಿಕೊಂಡಿದ್ದಾರೆ.
ಗಜ್ಜಿ ವೀರೇಶ ಎಂಬವನ ಮನೆಯ ಮೇಲೆ ಶೋಧ ನಡೆಸಿದಾಗ ಅಕ್ರಮವಾಗಿ 630 ಲೀಟರ್ ಸೇ೦ದಿಯನ್ನು ಮಾರಾಟಕ್ಕಾಗಿ ಶೇಖರಣೆ ಮಾಡಿಟ್ಟಿರುವುದು ಕಂಡು ಬಂದಿದೆ. ಒಟ್ಟು 22,520 ರೂಪಾಯಿ ನಗದು ಜಪ್ತಿ ಪಡಿಸಿಕೊಂಡ ಅಧಿಕಾರಿಗಳು ಗಜ್ಜಿ ವೀರೇಶ್, ಉರುಕುಂದಮ್ಮ ಹಾಗೂ ಮನೆಯ ಮಾಲೀಕನ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಅಬಕಾರಿ ಇಲಾಖೆಯ ರಾಯಚೂರು ವಲಯ ಉಪ ನಿರೀಕ್ಷಕ ಸಣ್ಣ ಮಾರುತಿ ಹಾಗೂ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಇದ್ದರು.
Next Story