ರಾಯಚೂರು: ಸಿರವಾರ ತಾಲೂಕಿನಲ್ಲಿ ನಕಲಿ ನೋಟುಗಳ ಹಾವಳಿ
ರಾಯಚೂರು: ಇಲ್ಲಿನ ಸಿರವಾರ ತಾಲೂಕಿನ ಹಲವು ಗ್ರಾಮಗಳಲ್ಲಿ ಕಳೆದ ಕೆಲ ತಿಂಗಳುಗಳಿಂದ ಖೋಟಾ ನೋಟು ಚಲಾವಣೆಯಾಗುತ್ತಿರುವ ಘಟನೆ ಬೆಳಕಿಗೆ ಬಂದಿದೆ.
ಹಿರೇಹಣಗಿ ಗ್ರಾಮದ ಪೆಟ್ರೋಲ್ ಬಂಕಿನಲ್ಲಿ 500 ಮುಖಬೆಲೆಯ 2 ನೋಟುಗಳು ಹಾಗೂ ಅದೇ ಗ್ರಾಮದ ಪಾನ್ ಶಾಪ್ ಅಂಗಡಿಯಲ್ಲೂ ಒಂದು ನೋಟು ಕಂಡುಬಂದಿದೆ.
ಸಿರವಾರ ತಾಲೂಕಿನ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಅಂಗಡಿಗಳು ಮತ್ತು ವ್ಯಾಪಾರಸ್ಥರಲ್ಲಿ 500 ಮುಖಬೆಲೆಯ ನಕಲಿ ನೋಟು ಚಲಾವಣೆಯಲ್ಲಿದೆ. ಅಲ್ಲದೇ ಲಿಂಗಸೂಗೂರು ತಾಲ್ಲೂಕಿನ ಹಟ್ಟಿ, ಕೋಠ, ಮುದಗಲ್ ಮತ್ತಿತರ ಕಡೆಯೂ ಖೋಟಾ ನೋಟುಗಳ ಹಾವಳಿ ಹೆಚ್ಚಾಗಿದೆ ಎನ್ನಲಾಗುತ್ತಿದೆ.
ಅನೇಕರು ಈ ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಿದ್ದಾರೆ ಎಂದು ಆರೋಪಿಸಿರುವ ಸ್ಥಳೀಯರು, ಜಿಲ್ಲಾ ಪೊಲೀಸ್ ಇಲಾಖೆ ಕೂಡಲೇ ಎಚ್ಚೆತ್ತು ಇದಕ್ಕೆ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿದ್ದಾರೆ.
Next Story