ರಾಯಚೂರು | ಅಂಗವಿಕಲರ ಶೌಚಾಲಯ ದುರಸ್ತಿಗೊಳಿಸಲು ಒತ್ತಾಯ
ರಾಯಚೂರು : ರೈಲ್ವೆ ನಿಲ್ದಾಣದಲ್ಲಿರುವ ಅಂಗವಿಕಲರ ಶೌಚಾಲಯ ದುರಸ್ತಿಗೊಳಿಸಿ, ನೀರು, ವಿದ್ಯುತ್ ಸೌಕರ್ಯ ಒದಗಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ಅಕ್ಸೆಸಿಬಿಲಿಟಿ ಟಾಸ್ಕ್ ಫೋರ್ಸ್ ವತಿಯಿಂದ ಜಿಲ್ಲಾಡಳಿತಕ್ಕೆ ಬುಧವಾರ ಮನವಿ ಸಲ್ಲಿಸಲಾಯಿತು.
ರೈಲ್ವೆ ನಿಲ್ದಾಣದಲ್ಲಿರುವ ವಿಕಲಚೇತನರ ಶೌಚಾಲಯವನ್ನು ಅವ್ಯವಸ್ಥೆಯಲ್ಲಿದ್ದು, ಅಂಗವಿಕಲರ ಸ್ನೇಹಿಯಾಗಿ ಪರಿವರ್ತಿಸಬೇಕು. ರೈಲ್ವೆ ನಿಲ್ದಾಣದಲ್ಲಿರುವ ಬ್ಯಾಟರಿ ಚಾಲಿತ ವಾಹನಗಳಿಗೆ ಚಾಲಕರನ್ನು ನೇಮಕ ಮಾಡಬೇಕು ಎಂದು ಮನವಿ ಮಾಡಿದರು.
ರೈಲ್ವೆ ನಿಲ್ದಾಣದಲ್ಲಿ ಅಂಗವಿಕಲರಿಗಾಗಿ 5 ವ್ಹೀಲ್ ಚೇರ್ ಗಳ ವ್ಯವಸ್ಥೆ ಮಾಡಬೇಕು. ರೈಲ್ವೆ ನಿಲ್ದಾಣದಲ್ಲಿರುವ ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಅನುಕೂಲಕ್ಕಾಗಿ ಅಗತ್ಯ ಮೂಲಸೌಕರ್ಯ ಕಲ್ಪಿಸಬೇಕು ಎಂದು ಆಗ್ರಹಿಸಿದರು.
ತಾಲ್ಲೂಕು ಘಟಕದ ಅಧ್ಯಕ್ಷ ಹನುಮೇಶ, ವೆಂಕಟೇಶ, ಗುಂಡಪ್ಪ ಗೌಡ, ಹೊನ್ನೂರಯ್ಯ, ನರಸಪ್ಪ, ಲಕ್ಷ್ಮಣ, ರಾಮಪ್ಪ ಉಪಸ್ಥಿತರಿದ್ದರು.
Next Story