ರಾಯಚೂರು: ಗೂಡ್ಸ್ ವಾಹನದ ಟಯರ್ ಸ್ಫೋಟ; 20 ಮಂದಿಗೆ ಗಾಯ

ಸಿಂಧನೂರು ಏ 19: ಗೂಡ್ಸ್ ವಾಹನದ ಟೈಯರ್ ಬ್ಲಾಸ್ಟ್ ಆಗಿ 20 ಮಂದಿ ಗಾಯಗೊಂಡ ಘಟನೆ ತಾಲೂಕಿನ ಕಲ್ಮಂಗಿ ಗ್ರಾಮದ ಹತ್ತಿರ ನಡೆದಿದೆ.
ತಾವರಗೇರಾ ಪಟ್ಟಣದಿಂದ ಮದುವೆ ಮುಗಿಸಿಕೊಂಡು ಸಿಂಧನೂರು ತಾಲೂಕಿನ ಅರಗಿನಮರ ಕ್ಯಾಂಪಿನ ಕಡೆಗೆ ತೆರುಳುತ್ತಿದ್ದ ಗೂಡ್ಸ್ ವಾಹನದ ಹಿಂಬದಿಯ ಟೈಯರ್ ಬ್ಲಾಸ್ಟ್ ಆಗಿದೆ. ಕೂಡಲೇ ಗಾಯಾಳುಗಳನ್ನು ತಾಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.
Next Story