ರಾಯಚೂರು | ಅದಾನಿ ಕಂಪನಿಗಳ ವಿರುದ್ಧ ರಾಷ್ಟ್ರೀಯ ಆಂದೋಲನ : ಎಸ್.ಆರ್.ಹಿರೇಮಠ
ರಾಯಚೂರು : ಅದಾನಿ ಮತ್ತು ಅವನ ಕಂಪನಿಗಳೂ ನಡೆಸುತ್ತಿರುವ ಅಪರಾಧಿ ಚಟುವಟಿಕೆಗಳ ವಿರುದ್ದ ಎಫ್ಡಿ, ಜೆಎಂಎಂ ಹಾಗೂ ಇತರ ಸಮಾನ ಮನಸ್ಕ ಸಂಘಗಳು ಮತ್ತು ಸಂಘಟನೆಗಳು ಜಂಟಿಯಾಗಿ ರಾಷ್ಟ್ರೀಯ ಆಂದೋಲನವನ್ನು ನಡೆಸಲು ನಿರ್ಧಾರಿಸಲಾಗಿದೆ ಎಂದು ಸಿಟಿಜನ್ ಫಾರ್ ಡೆಮೊಕ್ರಸಿ ಅಧ್ಯಕ್ಷರಾದ ಎಸ್.ಆರ್. ಹಿರೇಮಠ ಹೇಳಿದ್ದಾರೆ.
ನಗರದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಟಿಜನ್ ಫಾರ್ ಡೆಮೊಕ್ರಸಿ (ಸಿಎಫ್ಡಿ) ಸಂಸ್ಥೆಯ 50ನೇ ವರ್ಷದ ಸಂಭ್ರಮಾಚರಣೆ ಭಾಗವಾಗಿ ಈ ಆಂದೋಲನ ನಡೆಸಲಾಗುತ್ತಿದೆ. ಆದಾನಿ ಮತ್ತು ಅವನ ಸಂಭಂದಿಸಿದ ಕಂಪನಿಗಳೊಂದಿಗೆ ಅಮೇರಿಕಾದಲ್ಲಿ ನಡೆಸಿದ ಭ್ರಷ್ಠಾಚಾರ ಮತ್ತು ಶೇರುಗಳ ಅವ್ಯಹಾರದ ಬಗ್ಗೆ ಅಮೇರಿಕ ಆರೋಪ ಮಾಡಿದೆ. ದೇಶಲ್ಲಿಯೂ ಅಧಿಕಾರಿಗಳಿಗೆ ಲಂಚಾ ನೀಡಿದ ಬಗ್ಗೆ ಹಾಗೂ ಬಂಡವಾಳ ಹೂಡಿಕೆದಾರರಿಗೆ ತಪ್ಪು ಮಾಹತಿ ನೀಡಲಾಗಿದೆ ಎಂದು ಆರೋಪವನ್ನು ಮಾಡಲಾಗಿದೆ. ಎಲ್ಲಾ ಹಗರಣಗಳನ್ನು ಜನರ ಬಳಿಗೆ ಒಯ್ಯಲು ನಿರ್ಧರಿಸಲಾಗಿದೆ. ದುಷ್ಟ ಬಂಡವಾಳಶಾಹಿ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳಲು ಒತ್ತಾಯಿಸಲಾಗುವುದೆಂದರು.
ಪ್ರಧಾನ ಮಂತ್ರಿ ಮೋದಿ ಮತ್ತು ಆದಾನಿ ನಡುವಿನ ಅಪವಿತ್ರ ಮೈತ್ರಿಯನ್ನು ಸಾರ್ವಜನಿಕರ ಮುಂದಿಡಲು ಆಂದೋಲನ ನಡೆಲಾಗುವುದೆಂದರು. ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಪರಿಣಾಮಕಾರಿ ಕ್ರಮ ಕೈಗೊಳ್ಳಲಾಗುವುದೆಂದರು.
ರೈತರ ಆಂದೋಲನವನ್ನು ಸರ್ಕಾರಗಳು ಗೌರವದಿಂದ ಕಾಣಬೇಕೆಂದು ಒತ್ತಾಯಿಸಿದರು. ದೆಹಲಿ ಗಡಿಗಳಿಂದ ದೆಹಲಿಯನ್ನು ಪ್ರವೇಶಿಸುವುದಕ್ಕೆ ಅನುಮತಿ ನೀಡಬೇಕು ಹಾಗೂ ಹರಿಯಾಣ ಮತ್ತು ಪಂಜಾಬ್ ಗಡಿಗಳಲ್ಲಿ ಅವರ ಮೇಲೆ ಆಶ್ರುವಾಯು ಮತ್ತು ಇತರೆ ಅಸ್ತ್ರಗಳನ್ನು ಪ್ರಯೋಗಿಸಿ ಹಿಂಸೆ ನೀಡಬಾರದೆಂದು ಒತ್ತಾಯಿಸಿದರು.
ಸಂಸತ್ತಿನಲ್ಲಿ ರೈತ-ವಿರೋಧಿ ಮತ್ತು ಕಾರ್ಪೋರೆಟ್ ಪರವಾದ ಮೂರು ಕರಾಳ ಕೃಷಿ ಕಾನೂನುಗಳನ್ನು ಹಿಂತೆಗೆದುಕೊಳ್ಳುವ ಸಂದರ್ಭದಲ್ಲಿ ರೈತರಿಗೆ ನೀಡಿದ ಆಶ್ವಾಸನೆಗಳನ್ನು ಪೂರೈಸುವಂತೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ರವಿಕೃಷ್ಣ ರೆಡ್ಡಿ, ಜಾನ್ವೆಸ್ಲಿ, ಖಾಜಾ ಅಹ್ಮದ್ ಅಸ್ಲಂ ಉಪಸ್ಥಿತರಿದ್ದರು.