ರಾಯಚೂರು | ರಸ್ತೆ ಒತ್ತುವರಿ ಮಾಡಿದ ಶೆಡ್, ಡಬ್ಬಿ ತೆರವಿಗೆ ಸೂಚನೆ
ಗುರುಸಿದ್ದಯ್ಯ ಹಿರೇಮಠ
ರಾಯಚೂರು : ಇಲ್ಲಿನ ಜಿಲ್ಲಾಧಿಕಾರಿಗಳ ವಸತಿ ಗೃಹ ರಸ್ತೆಯಿಂದ ಸಾತ್ ಮೈಲ್ ರಸ್ತೆಯವರೆಗೂ ಸ್ಟೇಟ್ ಹೈವೇ-30 ಮತ್ತು ನ್ಯಾಷನಲ್ ಹೈವೇ 150-ಎ ರಲ್ಲಿನ ರಸ್ತೆ ಗಡಿಗಳನ್ನು ಒತ್ತುವರಿ ಮಾಡಿ ಶೆಡ್ ಮತ್ತು ಡಾಬಾಗಳನ್ನು ಹಾಕಿಕೊಂಡಿರುವ ವ್ಯಾಪಾರಸ್ಥರು ತಮ್ಮ ಸ್ವಂತ ಖರ್ಚಿನಲ್ಲಿ ಕೂಡಲೇ ತಮ್ಮ ಡಬ್ಬಿ ಮತ್ತು ಶೆಡ್ ಅಂಗಡಿಗಳನ್ನು ಅತ್ಯಂತ ತುರ್ತಾಗಿ ತೆರವುಗೊಳಿಸಬೇಕೆಂದು ರಾಯಚೂರು ಮಹಾನಗರ ಪಾಲಿಕೆಯ ಪೌರಾಯುಕ್ತರು ಸೂಚಿಸಿದ್ದಾರೆ.
ಒಂದು ವೇಳೆ ನಾವು ತೆರವುಗೊಳಿಸುವ ಸಂದರ್ಭದಲ್ಲಿ ತಮ್ಮ ಯಾವುದೇ ಡಬ್ಬಿಗಳು ಶೆಡ್ಗಳು, ಸರಕುಗಳು ಜಖಂಗೊಂಡಲ್ಲಿ ಈ ಕಚೇರಿಯು ಜವಾಬ್ದಾರರಾಗಿರುವುದಿಲ್ಲ. ಹಾಗೂ ಯಾವುದೇ ನಷ್ಟ ಪರಿಹಾರವನ್ನು ಕೊಡಲಾಗುವುದಿಲ್ಲವೆಂದು ಸಾರ್ವಜನಿಕರಿಗೆ ಈ ಪ್ರಕಟಣೆಯ ಮೂಲಕ ಒತ್ತುವರಿದಾರರಿಗೆ ತಿಳಿಸಲಾಗಿದೆ ಎಂದು ರಾಯಚೂರು ಮಹಾನಗರ ಪಾಲಿಕೆಯ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Next Story