ರಾಯಚೂರು | ಅಡ್ಡಾದಿಡ್ಡಿ ವಾಹನ ನಿಲ್ಲಿಸುವವರಿಗೆ ಪೊಲೀಸರಿಂದ ಶಾಕ್ !

ರಾಯಚೂರು : ನಗರದಲ್ಲಿ ಅಡ್ಡಾದಿಡ್ಡಿ ವಾಹನಗಳ ನಿಲುಗಡೆಯನ್ನು ತಪ್ಪಿಸಲು ನಗರ ಸಂಚಾರಿ ಪೊಲೀಸರು ಮುಂದಾಗಿದ್ದು, ರಸ್ತೆ ಬದಿಯಲ್ಲಿ ಅಡ್ಡಾದಿಡ್ಡಿಯಾಗಿ ಹಾಗೂ ಓಡಾಡುವ ವಾಹನಗಳಿಗೆ ತೊಂದರೆಯಾಗುವಂತೆ ವಾಹನಗಳನ್ನು ನಿಲ್ಲಿಸಿದ್ದಲ್ಲಿ ವಾಹನಗಳ ಚಕ್ರಗಳಿಗೆ ಪೊಲೀಸರು ಲಾಕ್ ಅಳವಡಿಸುತ್ತಿದ್ದಾರೆ.
ನಗರದಲ್ಲಿ ಸುವ್ಯಸ್ಥಿತವಾಗಿ ಸಂಚಾರ ಹಾಗೂ ಪಾರ್ಕಿಂಗ್ ವ್ಯವಸ್ಥೆಯನ್ನು ಅನುಸರಿಸಲು ಸಾರ್ವಜನಿಕರು ಸಹಕರಿಸಬೇಕು ಎಂದು ಪೊಲೀಸರು ಮನವಿ ಮಾಡಿದ್ದು, ಮನಸೋ ಇಚ್ಚೆ ಪಾರ್ಕಿಂಗ್ ಮಾಡಿದಲ್ಲಿ ಸಾರ್ವಜನಿಕರ ವಾಹನಗಳ ಚಕ್ರಗಳಿಗೆ ಲಾಕ್ ಬೀಳಲಿದೆ ಪೊಲೀಸರು ತಿಳಿಸಿದ್ದಾರೆ.
Next Story