ರಾಯಚೂರು | ಬಸ್ ವ್ಯವಸ್ಥೆ ಕಲ್ಪಿಸುವಂತೆ ಆಗ್ರಹಿಸಿ ವಿದ್ಯಾರ್ಥಿಗಳಿಂದ ಪ್ರತಿಭಟನೆ
ರಾಯಚೂರು : ಸರಿಯಾದ ಸಮಯಕ್ಕೆ ಬಸ್ ವ್ಯವಸ್ಥೆ ಇಲ್ಲದ ಕಾರಣಕ್ಕೆ ವಿದ್ಯಾರ್ಥಿಗಳು ಸಿರವಾರ ತಾಲ್ಲೂಕಿನಲ್ಲಿ ರಸ್ತೆ ತಡೆದು ಪ್ರತಿಭಟನೆ ನಡೆಸಿದರು.
ದಿನನಿತ್ಯ ನೂರಾರು ವಿದ್ಯಾರ್ಥಿಗಳು ಹೆಚ್ಚಿನ ವ್ಯಾಸಂಗಕ್ಕೆ ತಾಲ್ಲೂಕಿನಿಂದ ಜಿಲ್ಲಾ ಕೇಂದ್ರಕ್ಕೆ ತೆರಳುತ್ತಾರೆ. ಸರಿಯಾದ ಸಮಯಕ್ಕೆ ಬಸ್ ಇಲ್ಲದ ಕಾರಣ ನಿತ್ಯ ಸರಿಯಾದ ವೇಳೆಗೆ ತಲುಪಲು ಸಾಧ್ಯವಾಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಿರವಾರ ತಾಲ್ಲೂಕು ಭಾಗದಿಂದ ಸುತ್ತಮುತ್ತ ಹಳ್ಳಿಗಳಿಂದ ಸುಮಾರು 500 ,600ಕ್ಕೂ ಹೆಚ್ಚು ವಿದ್ಯಾರ್ಥಿಗಳು ರಾಯಚೂರಿಗೆ ತೆರಳುತ್ತಾರೆ. ಜಿಲ್ಲೆಯ ಗಡಿಭಾಗ ಜಿಲ್ಲಾಯಾದ್ದರಿಂದ ಬೇರೆ ರಾಜ್ಯಕ್ಕೆ ತೆರಳುವ ಬಸ್ಗಳು ಇದ್ದರೂ ಇಲ್ಲದಂತೆ ಆಗಿದೆ ಎಂದರು.
ಗಡಿ ಭಾಗ ಆಂಧ್ರಕ್ಕೆ ಹೋಗುವ ಕೆಲವು ಬಸ್ ಗಳು ನಿಲ್ಲಿಸದೇ ನಿರ್ಲಕ್ಷ ಮಾಡಲಾಗುತ್ತಿದ್ದು, ಕೂಡಲೇ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಸಮಸ್ಯೆ ಪರಿಹರಿಸಬೇಕು ಎಂದು ಆಗ್ರಹಿಸಿದರು.
Next Story