ರಾಯಚೂರು | ಪ್ರವೀಣ್ ಪಗಡಾಲ್ ಕೊಲೆ ಪ್ರಕರಣವನ್ನು ಸಿಬಿಐ ತನಿಖೆಗೆ ಒತ್ತಾಯಿಸಿ ಪ್ರತಿಭಟನೆ

ರಾಯಚೂರು :ಗುರುವಾರ ಕಲ್ವರಿ ಫಾಸ್ಟರ್ಸ್ ಅಸೋಸಿಯೇಷನ್‍ನ ಪ್ರವೀಣ್ ಪಗಡಾಲ್ ಕೊಲೆ ಪ್ರಕರಣ ಸಿಬಿಐ ತನಿಖೆಗೆ ಒತ್ತಾಯಿಸಿ ಪ್ರತಿಭಟನಾ ರ್‍ಯಾಲಿ ನಡೆಯಿತು.
ಗುರುವಾರ ಕಲ್ವರಿ ಫಾಸ್ಟರ್ಸ್ ಅಸೋಸಿಯೇಷನ್‍ನ ಪದಾಧಿಕಾರಿಗಳು ಹಾಗೂ ಸದಸ್ಯರು ನಗರದ ರೈಲ್ವೆ ನಿಲ್ದಾಣ ವೃತ್ತದಿಂದ ಅಂಬೇಡ್ಕರ್ ವೃತ್ತದವರೆಗೆ ಬೃಹತ್ ಮೆರವಣಿಗೆ ನಡೆಸಿದರು.
ಹೈದರಾಬಾದ್‍ನಿಂದ ರಾಜಮಂಡ್ರಿಗೆ ಬೈಕ್ ಮೇಲೆ ತೆರಳುತ್ತಿದ್ದಾಗ ರಸ್ತೆ ಅಪಘಾತವಾಗಿದೆ ಎಂದು ಸುಳ್ಳು ವರದಿ ದಾಖಲಿಸಿದ್ದಾರೆ. ಪ್ರವೀಣ ಪಗಡಾಲ್ ಅವರ ಮೈ ಮೇಲೆ ಹಲ್ಲೆ ನಡೆಸಿದ ಗಾಯಗಳಾಗಿದ್ದು, ಇದು ಕೊಲೆಯ ಸಂಚು ಆಗಿದ್ದು, ಅಪಘಾತ ಎಂದು ಬಿಂಬಿಸಲಾಗಿದೆ, ಇದು ಅಪಘಾತವಲ್ಲ ಕೊಲೆ ಮಾಡಲಾಗಿದೆ ಎಂದು ಪ್ರತಿಭಟನಾನಿರತರು ಆರೋಪಿಸಿದರು.
ಪ್ರವೀಣ್ ಪಗಡಾಲ್ ಅವರನ್ನು ಯಾರೋ ಅಪರಿಚಿತರು ಕೊಲೆ ಮಾಡಿದ್ದಾರೆ. ಕೊಲೆ ಪ್ರಕರಣದ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಬೇಕು, ಕೊಲೆ ಮಾಡಿದ ಆರೋಪಿಗಳಿಗೆ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆ ಯಲ್ಲಿ ಅಸೋಸಿಯೇಷನ್ ಅಧ್ಯಕ್ಷ ಫಾದರ್ ಜಾನವೆಸ್ಲಿ, ಫಾಸ್ಟರ್ ವಿಲ್ಸನ್ ರವಿಕುಮಾರ, ಸಿ.ಪ್ರಭಾಕರ, ಜೆಮ್ಸ್‍ಸ್ಟರ್, ಮಾರ್ಟಿನ್, ರಾಜೇಶ, ದೇವದಾಸ, ರುಬಿನ್, ಶಿವುಕುಮಾರ, ಅವಿಲ್ ಕುಮಾರ ಸೇರಿದಂತೆ ಅನೇಕರು ಇದ್ದರು.