ರಾಯಚೂರು | ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಎಲ್ಐಸಿ ನೌಕರರ ಪ್ರತಿಭಟನೆ
ರಾಯಚೂರು : ಕಮೀಷನ್ ಹಿಂಪಡೆಯುವ ಕ್ಯಾಬ್ಯಾಕ್ ಪದ್ಧತಿ ತಕ್ಷಣ ವಾಪಸ್ ಪಡೆಯಬೇಕು. ಪ್ರತಿನಿಧಿಗಳ ಮೊದಲ ವರ್ಷದ ಕಮೀಷನ್ ಪದ್ಧತಿ ಈ ಹಿಂದಿನಂತೆ ಮುಂದುವರೆಸಬೇಕು ಎಂದು ಆಗ್ರಹಿಸಿ ಎಲ್ ಐಸಿ ಏಜೆಂಟ್ಸ್ ಆರ್ಗನೈಜೇಷನ್ ಆಫ್ ಇಂಡಿಯಾ ವತಿಯಿಂದ ನಗರದ ಎಲ್ಐಸಿ ವಿಭಾಗೀಯ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಯಿತು.
ಹೊಸ ಪಾಲಿಸಿ ಪಡೆಯಲು ವಯೋ ಮಿತಿ ಶೇ.55 ಕ್ಕಿಂತ ಹೆಚ್ಚಿಸಬೇಕು. ಈಗ ಹಾಕಿರುವ ನಿರ್ಬಂಧ ತಕ್ಷಣ ವಾಪಸ್ ಪಡೆಯಬೇಕು. ಪಾಲಿಸಿದಾರರ ಬೋನಸ್ ಹೆಚ್ಚಿಸಬೇಕು. ಸಂಸ್ಥೆಯ ಹೂಡಿಕೆಯು ಲಾಭದಾಯಕವಾಗಿರಬೇಕು. ವಿಮಾ ಕಂತಿನ ಮೇಲೆ ಹಾಕಿರುವ ಜಿಎಸ್ಟಿ ಸಂಪೂರ್ಣವಾಗಿ ವಾಪಸ್ ತೆಗಯಬೇಕು ಎಂದು ಮನವಿ ಮಾಡಿದರು.
ಪ್ರತಿಭಟನೆಯಲ್ಲಿ ಸಂಘಟನೆ ರಾಷ್ಟ್ರೀಯ ಕಾರ್ಯಾಧ್ಯಕ್ಷ ಎಲ್.ಮಂಜುನಾಥ, ರಾಜ್ಯಾಧ್ಯಕ್ಷ ಲೋಕೇಶ ಶೆಟ್ಟಿ, ವಿಭಾಗೀಯ ಅಧ್ಯಕ್ಷ ಜಿ. ಶ್ರೀನಿವಾಸ, ಪ್ರಧಾನ ಕಾರ್ಯದರ್ಶಿ ಬಿ.ಎಸ್. ಸಿದ್ದಣ್ಣ, ಸ್ಥಳೀಯ ಕಾರ್ಯದರ್ಶಿ ಶಿವರಾಜ ಪತ್ತೆಪೂರು, ಖಜಾಂಚಿ ವಲಿ ಮೋಹಿನುದೀನ್, ಚೆನ್ನಾರೆಡ್ಡಿ, ವಿ.ಎಸ್.ಪಾಟೀಲ, ಬಿ.ಎಸ್. ಮುನಿರೆಡ್ಡಿ, ಲಕ್ಷ್ಮಣ, ಬಸವರಾಜ ಪಾಟೀಲ, ಎಂ.ರವಿ ಭಾಗವಹಿಸಿದ್ದರು.