ರಾಯಚೂರು | ಅಪಘಾತ ತಡೆಗೆ ಸಾರ್ವಜನಿಕರ ಸಹಕಾರ ಅಗತ್ಯ : ಎಸ್ಪಿ ಪುಟ್ಟಮಾದಯ್ಯ
ರಾಯಚೂರು : ಅಪಘಾತಗಳ ತಡೆಗೆ ಸಾರ್ವಜನಿಕರು ಸಂಚಾರಿ ನಿಯಮಗಳನ್ನು ಪಾಲಿಸಬೇಕು ಎಂದು ರಾಯಚೂರು ಎಸ್ಪಿ ಎಂ.ಪುಟ್ಟಮಾದಯ್ಯ ಹೇಳಿದರು.
ಜಿಲ್ಲೆಯ ಮುದಗಲ್ ಪಟ್ಟಣ ಸಮೀಪದ ಛತ್ತರ ಗ್ರಾಮದ ಮುಖ್ಯ ರಸ್ತೆಯಲ್ಲಿ ನಡೆದ ಅಪಘಾತದ ಸ್ಥಳ ಪರಿಶೀಲನೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಲಾಖೆಯಿಂದ ವಿವಿಧ ಜಾಗೃತಿ ಮೂಡಿಲಾಗುತ್ತಿದೆ. ಇದರ ಜತೆಗೆ ಸಾರ್ವಜನಿಕರು ಕೈ ಜೋಡಿಸಿದರೆ ಅಪಘಾತಗಳನ್ನು ತಡೆಯಬಹುದು ಎಂದರು.
ನಾಗರಾಳ ಗ್ರಾಮದಲ್ಲಿ ಹೊರಠಾಣೆ ನಿರ್ಮಿಸಲು ಮುಂದಿನ ದಿನಗಳಲ್ಲಿ ಪರಿಶೀಲನೆ ಮಾಡಲಾಗುವುದು. ಠಾಣೆಯಲ್ಲಿ ಸಿಬ್ಬಂದಿ ಕೊರತೆ ನೀಗಿಸಲು ಗೃಹರಕ್ಷಕ ದಳದ ಸಿಬ್ಬಂದಿ ನೇಮಿಸಿಕೊಳ್ಳಿ ಎಂದು ಸೂಚಿಸಿದರು.
ಪಿಎಸ್ಐ ವೆಂಕಟೇಶ್ ಮಾಡಗಿರಿ, ಅಪರಾಧ ಪಿಎಸ್ಐ ಛತ್ರಪ್ಪ, ರಾಠೋಡ, ಮಂಜುನಾಥ ವೀರಭದ್ರಪ್ಪ, ಅನಿಲ್ ಕುಮಾರ ಉಪಸ್ಥಿತರಿದ್ದರು.
Next Story