ರಾಯಚೂರು | ಮೃತ ವಾರಸುದಾರರ ಪತ್ತೆಗೆ ರೈಲ್ವೇ ಪೊಲೀಸರಿಂದ ಮನವಿ

ರಾಯಚೂರು : ಯಾದಗಿರಿ ರೈಲ್ವೇ ನಿಲ್ದಾಣದ ಪ್ಲಾಟ್ ಫಾರ್ಮ್ ನಂಬರ್ 1ರಲ್ಲಿ ಮಾ.13ರಂದು ಸುಮಾರು 50 ವರ್ಷದ ಅಪರಿಚಿತ ವ್ಯಕ್ತಿಯ ಮೃತದೇಹ ದೊರಕಿದ್ದು, ಈ ಕುರಿತು ರಾಯಚೂರು ರೈಲ್ವೇ ಪೊಲೀಸ್ ಠಾಣೆಯ ಯುಡಿಆರ್ ನಂ.19/2025 ಕಲಂ; 194 ಬಿ.ಎನ್.ಎಸ್.ಎಸ್ ರೀತ್ಯಾ ಪ್ರಕರಣ ದಾಖಲಿಸಿಕೊಂಡು ವಾರಸುದಾರರ ಪತ್ತೆಗೆ ಕೋರಲಾಗಿದೆ.
ಮೃತನ ಚಹರೆ ಪಟ್ಟಿ; ವಯಸ್ಸು ಸುಮಾರು 50 ವರ್ಷ, ಎತ್ತರ ಸುಮಾರು 5.4 ಅಡಿ, ಕಪ್ಪು ಮೈಬಣ್ಣ ಸಾಧಾರಣ ಮೈಕಟ್ಟು, ದುಂಡು ಮುಖ, ಸಣ್ಣ ಕಿವಿ, ಉದ್ದ ಮೂಗು ಬೋಳು ತಲೆ ಮತ್ತು ಬಿಳಿ ಗಡ್ಡ ಮೀಸೆ ಹೊಂದಿದ್ದು, ಒಂದು ಬಿಳಿ ಪಂಚೆ, ಒಂದು ಬಿಳಿಯ ಬಣ್ಣದ ಜುಬ್ಬಾ ಶರ್ಟು, ಒಂದು ಹಸಿರು ಬಿಳಿ ಮಿಕ್ಸ್ ಬಣ್ಣದ ಚಡ್ಡಿ ಬಟ್ಟೆಯನ್ನು ಧರಿಸಲಾಗಿದೆ. ಈ ಮೃತ ಅಪರಿಚಿತ ಮೃತನ ವಾರಸುದಾರರು ಪತ್ತೆಯಾದಲ್ಲಿ ಅಥವಾ ಈ ಮೃತನ ಹೋಲಿಕೆಯ ಗಂಡಸು ಕಾಣೆಯಾದ ಪ್ರಕರಣ ದಾಖಲಾಗಿದ್ದಲ್ಲಿ ರಾಯಚೂರು ರೈಲ್ವೇ ಪೊಲೀಸ್ ಠಾಣೆಯ ದೂರವಾಣಿ ಸಂಖ್ಯೆ: 08532- 231716 ಅಥವಾ ಮೊ.ನಂ:9480802111 ಅಥವಾ ರೈಲ್ವೆ ಪೊಲೀಸ್ ಕಂಟ್ರೋಲ್ ರೂಂ: 080-22871291ಗೆ ಸಂಪರ್ಕ ಮಾಡಬಹುದಾಗಿದೆ ಎಂದು ರಾಯಚೂರು ರೈಲ್ವೇ ಪೊಲೀಸ್ ಠಾಣೆಯ ತನಿಖಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.