ರಾಯಚೂರು | ಪ್ರತ್ಯೇಕ ಪ್ರಕರಣ : ಸಿಡಿಲು ಬಡಿದು ಇಬ್ಬರು ಮೃತ್ಯು

ಸಾಂದರ್ಭಿಕ ಚಿತ್ರ
ರಾಯಚೂರು : ಗ್ರಾಮಾಂತರ ವ್ಯಾಪ್ತಿಯ ಗ್ರಾಮಗಳಾದ ಉಡುಮಗಲ್ ಹಾಗೂ ಮರ್ಚಟ್ಹಾಳ್ ಗ್ರಾಮದಲ್ಲಿ ಸಿಡಿಲು ಬಡಿದು ಇಬ್ಬರು ಮೃತಪಟ್ಟಿರುವ ಘಟನೆ ಇಂದು ಸಂಜೆ ನಡೆದಿದೆ.
ಉಡಗಮಗಲ್ ಗ್ರಾಮದ ನಿವಾಸಿಯಾದ ಮಲ್ಲಮ್ಮ ಹೊಲದಿಂದ ಗ್ರಾಮಕ್ಕೆ ಮರಳಿ ಬರುವ ಸಂದರ್ಭದಲ್ಲಿ ಸಿಡಿಲು ಬಡಿದಿದ್ದು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಮರ್ಚಟ್ಹಾಳ್ ಗ್ರಾಮದಲ್ಲಿ ರೈತನಾದ ಹನುಮಂತ ಯಾದವ್ ದಿನ್ನಿ ರಸ್ತೆಯ ಬಳಿ ಇರುವ ಹೊಲದಲ್ಲಿ ಜೆಸಿಬಿ ಮೂಲಕ ಬದುತೆಗೆಸುವ ಕಾರ್ಯ ಮಾಡುತಿದ್ದ ವೇಳೆ ಏಕಾಏಕಿ ಗಾಳಿ, ಮಳೆ ಶುರುವಾದ ಕಾರಣಕ್ಕೆ ಮರದಡಿ ಆಶ್ರಯ ಪಡೆಯಲು ತೆರಳಿದಾಗ ಸಿಡಿಲು ಬಡಿದು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಈ ಎರಡು ಪ್ರತ್ಯೇಕ ಘಟನಾ ಸ್ಥಳಕ್ಕೆ ಯರಗೇರಾ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.
Next Story





