ರಾಯಚೂರು | ಪೊಲೀಸರ ಕಿರುಕುಳದಿಂದ ಆತ್ಮಹತ್ಯೆ ; ಆರೋಪ
ಪತ್ನಿಯಿಂದ ದೂರು
ಸುನೀಲ್
ರಾಯಚೂರು : ಇಲ್ಲಿನ ನೇತಾಜಿನಗರ ಠಾಣೆಯ ಪೊಲೀಸರ ಕಿರುಕುಳದಿಂದ ಪತಿ ಸುನೀಲ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ನೊಂದ ಪತ್ನಿ ನಾಗವೇಣಿ ಆರೋಪಿಸಿದ್ದು, ಈ ಕುರಿತು ಅದೇ ನೇತಾಜಿನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಗಾಂಜಾ ಮಾರಾಟದ ವಿಚಾರವಾಗಿ ಸ್ಥಳೀಯ ನೇತಾಜಿನಗರದ ನಿವಾಸಿ ಸುನೀಲ್ ಅವರನ್ನು ನೇತಾಜಿನಗರ ಠಾಣೆಯ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿ ನಿರಂತರವಾಗಿ ಕಿರುಕುಳ ನೀಡುತ್ತಿದ್ದರು ಇದರಿಂದ ಬೇಸತ್ತ ಸುನೀಲ್ ಕಳೆದ ಡಿ.31, 2024ರಂದು ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದನು. ಸುಟ್ಟಗಾಯಗಳಿಂದ ನರಳುತ್ತಿದ್ದ ಸುನೀಲ್ ಅವರಿಗೆ ರಿಮ್ಸ್ ಬೋಧಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು ಆದರೆ ದುರಾದೃಷ್ಠವಷಾತ್ ಚಿಕಿತ್ಸೆ ಫಲಿಸದೇ ಮಂಗಳವಾರ ಮೃತಪಟ್ಟಿದ್ದು, ಪೊಲೀಸರ ಕಿರುಕುಳದಿಂದಲೆಯೇ ಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೃತಪಟ್ಟ ವ್ಯಕ್ತಿಯ ಪತ್ನಿ ತಿಳಿಸಿದ್ದಾರೆ.
ಈ ಸಾವಿಗೆ ಪೊಲೀಸರೇ ಕಾರಣವೆಂದು ಎಂದು ಆರೋಪಿಸಿ ನೊಂದ ಪತ್ನಿ ನೀಡಿದ ದೂರಿನ ಅನ್ವಯ ಕಲಂ 108, ಬಿಎನ್ಎಸ್ 2023 ರ ಪ್ರಕಾರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆಗೆ ಮುಂದಾಗಿದ್ದಾರೆ.