ರಾಯಚೂರು | ಆಂಬುಲೆನ್ಸ್ ಗೆ ಟ್ರ್ಯಾಕ್ಟರ್ ಢಿಕ್ಕಿ : ಚಾಲಕನಿಗೆ ಗಂಭೀರ ಗಾಯ
ರಾಯಚೂರು : ದೇವದುರ್ಗ ತಾಲೂಕಿನ ಸಮುದಾಯ ಆರೋಗ್ಯ ಕೇಂದ್ರದ ಆಂಬುಲೆನ್ಸ್ ಗೆ ಕಲ್ಲು ತುಂಬಿದ ಟ್ರ್ಯಾಕ್ಟರ್ ಢಿಕ್ಕಿ ಹೊಡೆದ ಪರಿಣಾಮ ಆಂಬುಲೆನ್ಸ್ ಸಿಬ್ಬಂದಿ ಇಎಂಟಿ ಹನುಮಂತ ಮತ್ತು ಬಿ ಗಣೇಕಲ್ ಗ್ರಾಮದ ಚಾಲಕ ವಿಜಯಕುಮಾರ ಗಂಭೀರ ಗಾಯಗೊಂಡಿದ್ದಾರೆ.
ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ರಾಯಚೂರು ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.
ರಿಮ್ಸ್ ಆಸ್ಪತ್ರೆಯಲ್ಲಿ ರೋಗಿಯನ್ನು ದಾಖಲಿಸಿ ಸಿರವಾರ ಮಾರ್ಗವಾಗಿ ಅರಕೇರಾಕ್ಕೆ ತೆರಳುವಾಗ ಕ್ಯಾದೀಗೆರಾ ಕ್ರಾಸಿನಲ್ಲಿ ಘಟನೆ ನಡೆದಿದೆ.
ಘಟನೆಯ ಕುರಿತು ದೇವದುರ್ಗ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story