ರಾಯಚೂರು | ತಾಂಡೂರು-ರಾಯಚೂರು ನಡುವೆ ರೈಲು ಸಂಚಾರ ಪುನರಾರಂಭ
ರಾಯಚೂರು : ಈ ಹಿಂದೆ ತಾಂಡೂರು-ರಾಯಚೂರು ನಡುವೆ ರದ್ದಾದ ರೈಲು ಜನವರಿಯಿಂದ ಪುನರಾರಂಭಗೊಳ್ಳಲಿದೆ ಎಂದು ರೈಲ್ವೆ ಸಲಹಾ ಮಂಡಳಿ ಮಾಜಿ ಸದಸ್ಯ ಡಾ.ಬಾಬುರಾವ್ ಅವರು ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, 17664 ನಂಬರಿನ ರೈಲು ನಾಂದೇಡ್-ರಾಯಚೂರು ಎಕ್ಸ್ ಪ್ರೆಸ್ ಎನ್ಇಡಿಯಿಂದ ರಾಯಚೂರು ಜೆಸಿಒ ರವರೆಗೆ ಚಲಿಸುತ್ತದೆ. 17663 ನಂಬರಿನ ರೈಲು ರಾಯಚೂರು-ಪರ್ಭಾನಿ ಎಕ್ಸ್ ಪ್ರೆಸ್ ರೈಳು ಜನವರಿ 2 ರಿಂದ ರಾಯಚೂರಿನಿಂದ ಹೊರಡಲಿದೆ ಎಂದು ಅವರು ತಿಳಿಸಿದ್ದಾರೆ.
ಈ ಕುರಿತು ರೇಲ್ವೆ ರಾಜ್ಯ ಸಚಿವ ವಿ.ಸೋಮಣ್ಣ ಅವರಿಗೆ ಮನವಿ ಸಲ್ಲಿಸಲಾಗಿತ್ತು. ಮನವಿಗೆ ಸ್ಪಂದಿಸಿದ ಸಚಿವರು ರೈಲು ಸಂಚಾರ ಆರಂಭ ಮಾಡಿರುವುದು ಸಂತಸದ ವಿಷಯ. ಅದೇ ರೀತಿ ರಾಯಚೂರು ವಿಶಾಖಪಟ್ಟಣ ರೈಲಿನ ಬೇಡಿಕೆ ಈಡೇರಿಕೆ ಮಾಡಬೇಕೆಂದು ಮನವಿ ಮಾಡಿದ್ದಾರೆ.
Next Story