ರಾಯಚೂರು | ಶಿಕ್ಷಣದ ಅಭಿವೃದ್ಧಿಗೆ ಶಿವದಾಸ್ ಘೋಷ್ ಅವರ ವಿಚಾರಧಾರೆಯಡಿ ಹೋರಾಟ ಮಾಡಬೇಕಿದೆ : ಪೀರ್ ಸಾಬ್
ರಾಯಚೂರು : ದೇಶದ ನವೋದಯ ಚಿಂತಕರ, ಮಹಾನ್ ಕ್ರಾಂತಿಕಾರಿಗಳ ಕನಸಿನ ಭಾರತ ನಿರ್ಮಿಸಲು, ಸ್ವಾತಂತ್ರ ಸಂಗ್ರಾಮದ ರಾಜಿ ರಹಿತ ಕ್ರಾಂತಿಕಾರಿ ಹೋರಾಟಗಾರ ಶಿವದಾಸ್ ಘೋಷ್ ಅವರ ಚಿಂತನೆಗಳನ್ನು ಬಲಪಡಿಸಬೇಕು ಎಂದು ಎಐಡಿಎಸ್ಒ ಜಿಲ್ಲಾ ಉಪಾಧ್ಯಕ್ಷ ಪೀರ್ ಸಾಬ್ ಸಲಹೆ ನೀಡಿದರು.
ಎಐಡಿಎಸ್ಒ ಜಿಲ್ಲಾ ಕಚೇರಿಯಲ್ಲಿ ಆಯೋಜಿಸಿದ್ದ 70ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶೈಕ್ಷಣಿಕ ಕ್ಷೇತ್ರದ ಬಲವರ್ಧನೆಗೆ ಎಐಡಿಎಸ್ಒ ಸಂಘಟನೆ ರಚಿಸಲಾಗಿದೆ. ಶಿಕ್ಷಣ, ಮಾನವಿಯತೆ, ಸಂಸ್ಕೃತಿ ಉಳಿಸಲು ಮಹಾನಿಯರ ವಿಚಾರಧಾರೆಯ ಆಧಾರದ ಮೇಲೆ ತಳಮಟ್ಟದ ಹೋರಾಟ ಅನಿವಾರ್ಯವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಘಟಕದ ಕಾರ್ಯದರ್ಶಿ ಬಸವರಾಜ, ಖಜಾಂಚಿ ಅಮೋಘ, ಕಾರ್ಯಕರ್ತರಾದ ವಿರೇಶ, ನಿತಿನ್, ಬಸವರಾಜ ಜಿ, ಶಿವಕುಮಾರ, ಭಾಗ್ಯಶ್ರೀ, ಕಾವ್ಯ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.
Next Story