ರಾಯಚೂರು : ವರದಕ್ಷಿಣೆ ನೀಡದ್ದಕ್ಕೆ ಪತ್ನಿಯ ಕೊಲೆ; ಆರೋಪಿ ಪತಿ ಬಂಧನ
ಸಾಂದರ್ಭಿಕ ಚಿತ್ರ
ರಾಯಚೂರು : ಜಿಲ್ಲೆಯ ಸಿಂಧನೂರು ತಾಲ್ಲೂಕಿನ ಅರಗಿನಮರ ಕ್ಯಾಂಪ್ ನಲ್ಲಿ ವರದಕ್ಷಿಣೆಗಾಗಿ ಪತ್ನಿಯನ್ನು ಕೊಲೆ ಮಾಡಿದ ಘಟನೆ ನಡೆದಿದೆ.
ಆರ್.ಎಚ್.ಕ್ಯಾಂಪ್-4ರ ನಿವಾಸಿ ಧಿರೇನ್ ಸರ್ಕಾರ್ ಅವರ ಪುತ್ರಿ ಲಿಪಿ ಸರ್ಕಾರ್ ಹರ್ಷಿತಾ (23) ಕೊಲೆಯಾದ ಮಹಿಳೆ. ಪತಿ ಮಂಜುನಾಥ ರಾಜಶೇಖರ ನಾಯಕ ಕೊಲೆ ಮಾಡಿದ ಆರೋಪಿ.
ದಂಪತಿಗೆ 7 ತಿಂಗಳ ಹೆಣ್ಣು ಮಗಳಿದ್ದು, ವಿವಾಹದ ಬಳಿಕ ಕೆಲ ತಿಂಗಳು ಮಾತ್ರ ಗಂಡ-ಹೆಂಡತಿ ಅನ್ಯೋನ್ಯವಾಗಿದ್ದರು ಎನ್ನಲಾಗಿದೆ. ನಂತರ ಪತ್ನಿಗೆ ವರದಕ್ಷಿಣೆ ತರುವಂತೆ ಮಂಜುನಾಥ ಕಿರುಕುಳ ನೀಡುತ್ತಿದ್ದ. ಡಿ.18ರಂದು ಸಂಜೆ 4.30 ಗಂಟೆ ಸುಮಾರಿಗೆ ವರದಕ್ಷಿಣೆ ತರಲು ನಿರಾಕರಿಸಿದ್ದಕ್ಕಾಗಿ ಕತ್ತು ಹಿಸುಕಿ ಪತ್ನಿಯ ಕೊಲೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.
ಡಿ.19ರಂದು ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಮೃತಳ ತಂದೆ ಧೀರೇನ್ ಸರ್ಕಾರ್ ನೀಡಿದ ದೂರಿನ ಮೇರೆಗೆ ಆರೋಪಿ ಮಂಜುನಾಥನನ್ನು ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.
ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story