ಸಿರವಾರ ಪಟ್ಟಣದಿಂದ ರಾಯಚೂರು ನಗರಕ್ಕೆ ಮುಂಜಾನೆ ಬಸ್ ವ್ಯವಸ್ಥೆ ಕಲ್ಪಿಸುವಂತೆ ಮನವಿ

ಸಿರವಾರ : ಸಿರವಾರ ಪಟ್ಟಣವು ಸಾವಿರಾರು ಜನಸಂಖ್ಯೆ ಹೊಂದಿದ್ದು, ಪಟ್ಟಣದ ಸುತ್ತಮುತ್ತಲಿನಿಂದ ಅನೇಕರು ರಾಯಚೂರು ಪಟ್ಟಣಕ್ಕೆ ತಮ್ಮ ವೈಯಕ್ತಿಕ ಕೆಲಸದ ನಿಮಿತ್ತವಾಗಿ ಬೆಳಿಗ್ಗೆ 5ರಿಂದ 6ಗಂಟೆಗೆ ಸಿರವಾರ ಪಟ್ಟಣದಿಂದ ರಾಯಚೂರು ನಗರಕ್ಕೆ ಬೆಳಿಗ್ಗೆಯಿಂದ ಬಸ್ ಸಾರಿಗೆ ವ್ಯವಸ್ಥೆ ಕಲ್ಪಿಸುವಂತೆ ತಹಶೀಲ್ದಾರರಿಗೆ ಮನವಿ ಪತ್ರ ನೀಡಿ ಒತ್ತಾಯಿಸಿದರು.
ಬೆಳಿಗ್ಗೆ ಸಮಯದಲ್ಲಿ ಬಸ್ಸಿಲ್ಲದೆ ಜನರು ಪರದಾಡುವಂತಾಗಿದ್ದು, ಅದರಲ್ಲೂ ಸಣ್ಣ-ಪುಟ್ಟ ವ್ಯಾಪಾರಸ್ಥರು, ಆಸ್ಪತ್ರೆಗೆ ಹೋಗುವವರು, ದೂರದ ಊರುಗಳಿಗೆ ಹೋಗಬೇಕಾದರೆ ಬಸ್ಸಿನ ಅನಾನುಕೂಲದಿಂದ ಸಂಕಷ್ಟಕ್ಕೆ ಸಿಲುಕುತ್ತಾರೆ. ತಡರಾತ್ರಿಯಲ್ಲಿ ಬಸ್ ಇಲ್ಲದೇ ಬಸ್ ನಿಲ್ದಾಣದಲ್ಲಿ ಇರುವವರು ಆನೇಕರಿಗೆ ಮುಂಜಾನೆ ಸಮಯದಲ್ಲಿ ಬಸ್ ವ್ಯವಸ್ಥೆ ಬಹಳ ಮುಖ್ಯವಾಗಿದೆ ಎಂದರು
ಅದ್ದರಿಂದ ಕೂಡಲೇ ಮನವಿಗೆ ಸ್ಪಂದಿಸಿ ಸಿರವಾರ ಪಟ್ಟಣದಿಂದ ಜಿಲ್ಲಾ ಕೇಂದ್ರಕ್ಕೆ ಮುಂಜಾನೆ 5 ಗಂಟೆಗೆ ಬಸ್ ಸಂಚಾರಕ್ಕೆ ತಮ್ಮ ಇಲಾಖೆಯಿಂದ ಸಾರಿಗೆ ಇಲಾಖೆಗೆ ಪತ್ರ ಬರೆದು ಇರುವ ಸಮಸ್ಯೆಯನ್ನು ಸರಿಪಡಿಸಬೇಕು. ಇದನ್ನು ನಿರ್ಲಕ್ಷ್ಯ ಭಾವನೆ ಹೊಂದಿದ ಪಕ್ಷದಲ್ಲಿ ತಮ್ಮ ಇಲಾಖೆಯ ಮುಂದೆ ಸಾರ್ವಜನಿಕರೊಂದಿಗೆ ಹೋರಾಟ ಮಾಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಕುಮಾರ ಭಜಂತ್ರಿ, ಮತ್ತಿತರರು ಇದ್ದರು.