ಸಿರವಾರ | ಮಯೂರ ಶಿಲೆ ನಾಡೋತ್ಸವಕ್ಕೆ ಚಾಲನೆ
ಜನಮನಸೆಳೆದ ಕಿಲಾರಿ ಎತ್ತುಗಳ ಭಾರ ಎಳೆಯುವ ಸ್ಪರ್ಧೆ

ಸಿರವಾರ : ತಾಲೂಕಿನ ನವಲಕಲ್ ಗ್ರಾಮದ ಬೃಹ್ಮ ಮಠದ ಲಿಂ.ಸೋಮಶೇಖರ ಶಿವಾಚಾರ್ಯ ಸ್ವಾಮಿ ಜಾತ್ರ ಮಹೋತ್ಸವದ ಮಯೂರ ಶಿಲೆ ನಾಡೋತ್ಸವಕ್ಕೆ ಪೀಠಾಧಿಪತಿ ಅಭಿನಯ ಸೋಮನಾಥ ಶಿವಾಚಾರ್ಯ ಸ್ವಾಮಿ ಅವರು, ಮಂಗಳವಾರ ಕಿಲಾರಿ ಎತ್ತುಗಳ ಭಾರದ ಕಲ್ಲು ಎಳೆಯುವುದಕ್ಕೆ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ಗ್ರಾಮೀಣ ಭಾಗದ ಕ್ರೀಡೆಗಳನ್ನು ಪ್ರೋತ್ಸಾಹ ನೀಡುವ ಮುಖ್ಯ ಉದ್ದೇಶದಿಂದ ಎತ್ತುಗಳನ್ನು ಬಾರದ ಕಲ್ಲುಗಳನ್ನು ಎಳೆಯುವ ಸ್ಪರ್ಧೆ, ಕಬ್ಬಡಿ ಪಂದ್ಯಾವಳಿ ಸೇರಿದಂತೆ ವಿವಿಧ ಕ್ರೀಡೆಗಳನ್ನು ಹಮ್ಮಿಕೊಳ್ಳಲಾಗಿದೆ, ಭಕ್ತರ ಸಹಕಾರ ಮತ್ತು ಕ್ರೀಡಾಪಟುಗಳು ಸಹ ಉತ್ಸಾಹದಿಂದ ಭಾಗವಹಿಸುತ್ತಿದ್ದಾರೆ ಎಂದು ಹೇಳಿದರು.
ಭಾರ ಎಳೆಯುವುದಕ್ಕೆ ಎತ್ತುಗಳನ್ನು ಹುರಿದುಂಬಿಸುತ್ತಿದ್ದ ರೀತಿ ವಿಶೇಷವಾಗಿತ್ತು. ಎತ್ತುಗಳ ಬಲವು ಅವುಗಳನ್ನು ಸಾಕಿದ ರೈತನ ಬಲಕ್ಕೆ ಸಾಕ್ಷಿ ಎಂಬಂತೆ ನೆರೆದಿದ್ದ ಕೃಷಿಕರು ಎತ್ತುಗಳ ಮಾಲಕರನ್ನೂ ತದೇಕ ಚಿತ್ತದಿಂದ ನೋಡುತ್ತಾ ಕುಳಿತಿದ್ದರು.
ಹುರುಪಿನಿಂದ ಭಾರ ಎಳೆಯುವಾಗ ಎತ್ತುಗಳನ್ನು ಬೆಳೆಸಿದ ರೈತನ ಸಾಮರ್ಥ್ಯಕ್ಕೆ ಜನರು ಬೇಷ್ ಎಂದರು.