ರಾಯಚೂರು| ಕಲ್ಲು ಬಂಡೆ ಉರುಳಿ ಇಬ್ಬರು ಮಕ್ಕಳ ಸಹಿತ ಮೂವರು ಮೃತ್ಯು
ರಾಯಚೂರು: ಜಮೀನಿನಲ್ಲಿದ್ದ ಕಲ್ಲು ಬಂಡೆ ಉರುಳಿ ಇಬ್ಬರು ಮಕ್ಕಳ ಸಹಿತ ಮೂವರು ಸಾವನ್ನಪ್ಪಿದ ಘಟನೆ ಲಿಂಗಸಗೂರು ತಾಲ್ಲೂಕು ಗೌಡೂರ ತಾಂಡದಲ್ಲಿ ಮಂಗಳವಾರ ನಡೆದಿದೆ.
ಮೃತರನ್ನು ಮಂಜುನಾಥ(9) ವೈಶಾಲಿ (7) ಮತ್ತು ರಘು(18) ಎಂದು ಗುರುತಿಸಲಾಗಿದೆ.
ಮಕ್ಕಳು ಪಾಲಕರೊಂದಿಗೆ ಹೊಲಕ್ಕೆ ಹೋಗಿದ್ದರು. ದನ ಮೇಯಿಸುತ್ತಿದ್ದಾಗ. ಏಕಾಏಕಿ ಜಿಟಿ ಜಿಟಿ ಮಳೆ ಸುರಿದ ಕಾರಣ ಮಕ್ಕಳು ಕಲ್ಲು ಬಂಡೆಯ ಸನಿಹ ಆಸರೆಯಾಗಿ ಕುಳಿತುಕೊಂಡಿದ್ದರು. ಮಣ್ಣು ಕುಸಿದು ಬಂಡೆ ಮಕ್ಕಳ ಮೇಲೆ ಉರುಳಿದೆ. ಮಕ್ಕಳ ಚೀರಾಟ ಕೇಳಿ ಪೋಷಕರು ಬಂಡೆ ಎತ್ತಲು ಪ್ರಯತ್ನಿಸಿದರೂ ಅದು ಸಾಧ್ಯವಾಗಿಲ್ಲ. ಮಕ್ಕಳು ಕಣ್ಣೆದುರೆ ಮೃತಪಟ್ಟಿದ್ದು ಪಾಲಕರ ಆಕ್ರಂದನ ಮುಗಿಲು ಮುಟ್ಟಿತು.
ಮಂಜುನಾಥ ಹಾಗೂ ವೈಶಾಲಿ ಸ್ಥಳದಲ್ಲಿಯೇ ಸಾವನ್ನಪ್ಪಿದರೆ ರಘು ಆಸ್ಪತ್ರೆ ಕರೆದೊಯ್ಯುವಾಗ ಮಾರ್ಗ ಮಧ್ಯೆದಲ್ಲಿಯೇ ಸಾವನ್ನಪ್ಪಿದ್ದಾನೆ.
ಸ್ಥಳಕ್ಕೆ ತಹಶೀಲ್ದಾರ್ ಭೇಟಿ ನೀಡಿದ್ದಾರೆ.
(ಮೃತಪಟ್ಟವರು)
Next Story