ರೈಲಿನೊಳಗೆ ಸಹಾಯಕ ಸಬ್ ಇನ್ ಸ್ಪೆಕ್ಟರ್ ಸೇರಿದಂತೆ ನಾಲ್ವರನ್ನು ಗುಂಡಿಕ್ಕಿ ಕೊಂದ ರೈಲ್ವೇ ರಕ್ಷಣಾ ಪಡೆ ಕಾನ್ ಸ್ಟೇಬಲ್
ಮುಂಬೈ: ಮಹಾರಾಷ್ಟ್ರದ ಪಾಲ್ಘರ್ ರೈಲ್ವೆ ನಿಲ್ದಾಣದ ಬಳಿ ರೈಲ್ವೇ ರಕ್ಷಣಾ ಪಡೆ (RPF) ಸಿಬ್ಬಂದಿ ಸೋಮವಾರ ಬೆಳಿಗ್ಗೆ ರೈಲಿನಲ್ಲಿದ್ದ ಸಹಾಯಕ ಸಬ್ ಇನ್ ಸ್ಪೆಕ್ಟರ್ ಸೇರಿದಂತೆ ನಾಲ್ವರನ್ನು ಗುಂಡಿಕ್ಕಿ ಕೊಂದಿದ್ದಾನೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
"ಜೈಪುರ ಎಕ್ಸ್ ಪ್ರೆಸ್ ರೈಲಿನಲ್ಲಿ (12956) ನಡೆದ ಗುಂಡಿನ ದಾಳಿಯಲ್ಲಿ ಎಎಸ್ ಐ ಸೇರಿದಂತೆ ನಾಲ್ವರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಆರೋಪಿಯನ್ನು ಬಂಧಿಸಲಾಗಿದೆ. ಡಿಸಿಪಿ ಉತ್ತರ ಜಿಆರ್ ಪಿಗೆ ಮಾಹಿತಿ ನೀಡಲಾಗಿದೆ" ಎಂದು ರೈಲ್ವೇ ರಕ್ಷಣಾ ಪಡೆ ತಿಳಿಸಿದೆ ಎಂದು ಸುದ್ದಿ ಸಂಸ್ಥೆ ಎಎನ್ಐ ತಿಳಿಸಿದೆ. .
ಆರೋಪಿ, ಆರ್ ಪಿಎಫ್ ಕಾನ್ಸ್ಟೇಬಲ್ ಚೇತನ್ ಸಿಂಗ್, ಬೆಳಿಗ್ಗೆ ಐದು ಗಂಟೆಯ ಸುಮಾರಿಗೆ ತನ್ನ ಸ್ವಯಂಚಾಲಿತ ಶಸ್ತ್ರಾಸ್ತ್ರದಿಂದ ಗುಂಡು ಹಾರಿಸಿದ್ದು, ಮತ್ತೊಬ್ಬ ಆರ್ ಪಿಎಫ್ ಸಹೋದ್ಯೋಗಿ, ಅವರ ಎಸ್ಕಾರ್ಟ್ ಡ್ಯೂಟಿ ಇನ್ ಚಾರ್ಜ್ ಎಎಸ್ ಐ ಟಿಕಾ ರಾಮ್ ಮೀನಾ ಹಾಗೂ ರೈಲಿನಲ್ಲಿ ಮುಂಬೈಗೆ ತೆರಳುತ್ತಿದ್ದ ಮೂವರು ಪ್ರಯಾಣಿಕರನ್ನು ಕೊಂದಿದ್ದಾನೆ.. ಆರೋಪಿಯನ್ನು ಶಸ್ತಾಸ್ತ್ರ ಸಮೇತ ಬಂಧಿಸಲಾಗಿದೆ. ಎಂದು ಜೈಪುರದಿಂದ ಅಧಿಕಾರಿಗಳು ತಿಳಿಸಿದ್ದಾರೆ.
ತನ್ನ ಹಿರಿಯ ಅಧಿಕಾರಿಯನ್ನು ಕೊಂದ ನಂತರ, ಕಾನ್ ಸ್ಟೆಬಲ್ ಮತ್ತೊಂದು ಬೋಗಿಗೆ ಹೋಗಿ ಮೂವರು ಪ್ರಯಾಣಿಕರನ್ನು ಗುಂಡಿಕ್ಕಿ ಕೊಂದಿದ್ದಾನೆ ಎಂದು ಅಧಿಕಾರಿಗಳನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ಪಿಟಿಐ ಹೇಳಿದೆ.
ಪಾಲ್ಘರ್ ನಿಲ್ದಾಣವನ್ನು ದಾಟಿದ ನಂತರ ಚಲಿಸುತ್ತಿರುವ ರೈಲಿನೊಳಗೆ ಆರ್ ಪಿಎಫ್ ಕಾನ್ ಸ್ಟೆಬಲ್ ಗುಂಡು ಹಾರಿಸಿ ನಾಲ್ವರನ್ನು ಗುಂಡಿಕ್ಕಿಕೊಂದ ನಂತರ ರೈಲಿನ ಚೈನ್ ಎಳೆದು ದಹಿಸರ್ ನಿಲ್ದಾಣದ ಬಳಿ ರೈಲಿನಿಂದ ಜಿಗಿದಿದ್ದಾನೆ ಎಂದು ಪಶ್ಚಿಮ ರೈಲ್ವೆ ತಿಳಿಸಿದೆ ಎಂದು ಎಎನ್ಐ ತಿಳಿಸಿದೆ.
ಸರಕಾರಿ ರೈಲ್ವೆ ಪೊಲೀಸರು ಹಾಗೂ ಆರ್ ಪಿಎಫ್ ಅಧಿಕಾರಿಗಳ ಸಹಾಯದಿಂದ ಮೀರಾ ರೋಡ್ ನಲ್ಲಿ ಪೊಲೀಸರು ಚೇತನ್ ಸಿಂಗ್ ನ್ನು ಸೆರೆ ಹಿಡಿದಿದ್ದಾರೆ. ಆರೋಪಿ ಚೇತನ್ ಸಿಂಗ್ ಉತ್ತರಪ್ರದೇಶದ ಹತ್ರಸ್ ನಿವಾಸಿಯಾಗಿದ್ದಾನೆ.