Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಈ ಹೊತ್ತಿನ ಹೊತ್ತಿಗೆ
      • ಜನಚರಿತೆ
      • ವಿಡಂಬನೆ
      • ಜನ ಜನಿತ
      • ರಂಗ ಪ್ರಸಂಗ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಜನಮನ
      • ರಂಗದೊಳಗಿಂದ
      • ಶಂಬೂಕ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ರಂಗ ಪ್ರಸಂಗ
  5. ಹಳೆ ಕಥೆಗೆ ಹೊಸ ರೂಪ ‘ಕೋಳೂರು ಕೊಡಗೂಸು’

ಹಳೆ ಕಥೆಗೆ ಹೊಸ ರೂಪ ‘ಕೋಳೂರು ಕೊಡಗೂಸು’

ಗಣೇಶ ಅಮೀನಗಡಗಣೇಶ ಅಮೀನಗಡ15 Nov 2024 4:44 PM IST
share
ಹಳೆ ಕಥೆಗೆ ಹೊಸ ರೂಪ ‘ಕೋಳೂರು ಕೊಡಗೂಸು’
ರಚನೆ: ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ನಿರ್ದೇಶನ: ಮಹಾದೇವ ಹಡಪದ ಸಹನಿರ್ದೇಶನ: ಚಂದ್ರಶೇಖರ ಕಿಲ್ಲೇದಾರ ಸಂಗೀತ: ಮಹಾದೇವ ಹಡಪದ ಸಂಗೀತ ಸಹಕಾರ: ಎಚ್.ಎಸ್. ನಾಗರಾಜ್, ಕೆ.ದಾಕ್ಷಾಯಿಣಿ ಸಂಗೀತ ನಿರ್ವಹಣೆ: ತೇಜೇಶ್ ಕಪ್ಪಲಿ ಬೆಳಕಿನ ವಿನ್ಯಾಸ- ನಿರ್ವಹಣೆ: ಜೀವನ್ ಗೌಡ ಎನ್. ಸಾಗರ್ ದನದಮನಿ ರಂಗ ನಿರ್ವಹಣೆ: ಭಾಸ್ಕರ್ ಹಿತ್ತಲಮನಿ

ಈ ಬಾರಿಯ ಸಾಣೇಹಳ್ಳಿಯ ಶಿವಸಂಚಾರದ ಮೂರು ನಾಟಕಗಳಲ್ಲಿ ಪ್ರಮುಖವಾದುದು ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳ ‘ಕೋಳೂರು ಕೊಡಗೂಸು’ ನಾಟಕ.

ನಾಟಕದ ಕಥಾವಸ್ತು ಪೌರಾಣಿಕವೊ, ಐತಿಹಾಸಿಕವೊ ಎನ್ನುವ ಗೊಂದಲದ ನಡುವೆ ಸಾಣೇಹಳ್ಳಿ ಶ್ರೀಗಳು ಹೊಸ ರೂಪ ನೀಡಿದ್ದಾರೆ. ಇದರಿಂದ ಮೂಲಕಥೆಯಲ್ಲಿ ಬಾಲಕಿ ಕೊಡಗೂಸು ಕಲ್ಲಿನಾಥನಿಗೆ ಹಾಲು ಕುಡಿಸಿದಳು ಎನ್ನುವ ಪ್ರಸ್ತಾಪವಿದೆ. ಇದನ್ನು ನಂಬದ ಆಕೆಯ ಹೆತ್ತವರು, ನಮ್ಮೆದುರೇ ಹಾಲು ಕುಡಿಸಬೇಕು ಎಂದು ಒತ್ತಾಯಿಸುತ್ತಾರೆ. ಅಗ ಕಲ್ಲಿನಾಥನ ಪೂಜೆ ಮಾಡುವ ಕೊಡಗೂಸು ನೊರೆಹಾಲು ಕುಡಿಯೆಂದು ಒತ್ತಾಯಿಸುತ್ತಾಳೆ, ಪರಿಪರಿಯಾಗಿ ಬೇಡಿಕೊಂಡರೂ ಶಿವ ಪ್ರತ್ಯಕ್ಷನಾಗದಾಗ ಆತ್ಮಹತ್ಯೆಗೆ ಮುಂದಾಗುತ್ತಾಳೆ. ಆಗ ಶಿವ ತನ್ನೊಳಗೆ ಐಕ್ಯ ಮಾಡಿಕೊಂಡ ಎಂಬ ಐತಿಹ್ಯವಿದೆ. ಅದರೆ ಈ ನಾಟಕದ ಮೂಲಕ ಸಾಣೇಹಳ್ಳಿ ಶ್ರೀಗಳು ವೈಜ್ಞಾನಿಕ ಮನೋಭಾವದ ಜೊತೆಗೆ ಶರಣತತ್ವ ನೀಡಿ ಹೊಸ ಆಯಾಮ ಕೊಟ್ಟಿದ್ದಾರೆ.

ಅದು ಏನೆಂದರೆ; ಆಶ್ರಮದಲ್ಲಿ ವಚನಗಳ ಜೊತೆಗೆ ಮೌಢ್ಯ ಬಿಟ್ಟು ಮೌಲ್ಯಗಳನ್ನು ಕಲಿಸುವ ಶಿಕ್ಷಕ ಶಿವಪ್ರಕಾಶ್, ತನ್ನ ಶಿಷ್ಯಳಾದ ಕೊಡಗೂಸು ಬೇಸರಿಸಿಕೊಳ್ಳಬಾರದು ಎನ್ನುವ ಕಾರಣಕ್ಕೆ ಶಿವನ ಅಥವಾ ಕಲ್ಲಿನಾಥನ ಹಿಂದೆ ಕುಳಿತು ಹಾಲು ಕುಡಿಯುತ್ತಾರೆ. ಕೊನೆಗೆ ಎಲ್ಲರೂ ವಿರೋಧಿಸಿದಾಗ ಶಿವನ ವೇಷದ ಶಿಕ್ಷಕ ಶಿವಪ್ರಕಾಶ್ ಪ್ರತ್ಯಕ್ಷರಾದಾಗ ಸತ್ಯ ಗೊತ್ತಾಗುತ್ತದೆ. ಯಾವ ಕಾಲಕ್ಕೂ ದೈಹಿಕವಾಗಿ ಶಿವ ಬರುವುದಿಲ್ಲ. ಶಕ್ತಿಯೊಂದು ಇರುತ್ತದೆ. ದೈವಿಕವಾಗಿ ಒಲಿಯುವುದಿಲ್ಲ. ಶಕ್ತಿ ರೂಪದಲ್ಲಿ ಒಲಿಯುತ್ತದೆ ಎಂದು ಮನವರಿಕೆ ಮಾಡಿಕೊಡುತ್ತಾರೆ. ಕೊಡಗೂಸು ತಾಯಿ ಕಲ್ಲಿನಾಥನಿಗೆ ಹಾಲು ಕುಡಿಸುತ್ತಿರಲಿಲ್ಲ. ಮಕ್ಕಳಾದರೆ ಜೀವನಪೂರ್ತಿ ಹಾಲಿನ ನೈವೇದ್ಯ ಮಾಡಿಸುವೆ ಎಂದು ಹರಕೆ ಹೊತ್ತಿರುತ್ತಾಳೆ. ಆದರೆ ಹಾಲನ್ನು ಅನಾಥರಿಗೆ ಹಂಚುವೆ ಎಂದು ಹೇಳಿರುವುದಿಲ್ಲ. ಇದರಿಂದ ಕಲ್ಲಿನಾಥನೇ ಹಾಲು ಕುಡಿಯುತ್ತಾನೆಂದು ಕೊಡಗೂಸು ನಂಬುತ್ತಾಳೆ. ಯಾರೇ ಹೇಳಿದರೂ ನಂಬುತ್ತಿರಲಿಲ್ಲ. ಮುಗ್ಧಳಾದ ಕೊಡಗೂಸು ಕೊನೆಗೆ ತನ್ನ ಶಿಕ್ಷಕರಿಂದ ಬದಲಾಗುತ್ತಾಳೆ.

ಪೌರಾಣಿಕ ಕಥೆಯಲ್ಲಿ ಕಲ್ಲಿನಾಥನೊಂದಿಗೆ ಲಿಂಗೈಕ್ಯಳಾಗುತ್ತಾಳೆಂದು ಇದೆ. ಅದರೆ ಪಂಡಿತಾರಾಧ್ಯ ಶ್ರೀಗಳು ಪ್ರಸಕ್ತ ಬದುಕಿಗೆ ಬದಲಾಯಿಸಿ ಧರ್ಮವನ್ನು ನೋಡುವ ಬಗೆ ಹೇಗಿರಬೇಕು ಜೊತೆಗೆ ಕಲ್ಲಿನಾಥ ಹಾಲು ಕುಡಿಯಲ್ಲ ಎಂಬುದನ್ನು ಸಾಬೀತುಪಡಿಸಿದ್ದಾರೆ. ಮನುಷ್ಯರಲ್ಲಿ ಮನುಷ್ಯರನ್ನು ಕಾಣಬೇಕು, ಕಷ್ಟದಲ್ಲಿರುವವರಿಗೆ ಸ್ಪಂದಿಸುವ ಮೂಲಕ ದೇವರನ್ನು ಕಾಣಬೇಕು ಎನ್ನುವ ಸಂದೇಶವನ್ನು ನಾಟಕ ಸಾರುತ್ತದೆ. ಹೀಗೆ ತಮ್ಮ ಆಶೀರ್ವವಚನದಲ್ಲಿ ಮೌಢ್ಯ, ಕಂದಾಚಾರಗಳನ್ನು ನಂಬದೆ ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಿ, ಭಿನ್ನ ಭೇದವ ಮಾಡಬೇಡಿರಿ ಎಂದು ಸಾರುವ ಶ್ರೀಗಳು, ಈ ನಾಟಕದ ಮೂಲಕ ತಮ್ಮ ನಿಲುವನ್ನು ಮತ್ತೆ ಸಾಬೀತುಪಡಿಸಿದ್ದಾರೆ. ನಾಟಕದಲ್ಲಿ ಮುಗ್ಧಮಗುವಿನ ಸಂಕೇತದ ‘‘ಜನರು ಬದಲಾವಣೆಯಾಗದೆ ಕಲ್ಯಾಣವಾಗಲು ಸಾಧ್ಯವಿಲ್ಲ’’ ಎನ್ನುವ ಮಾತು ಉಲ್ಲೇಖನೀಯ. ಕೊನೆಗೆ ನಾಟಕವು ಎಲ್ಲರೂ ಇಷ್ಟಲಿಂಗ ದೀಕ್ಷೆ ಪಡೆಯುವುದರೊಂದಿಗೆ ಕೊನೆಗೊಳ್ಳುತ್ತದೆ. ಅದರಲ್ಲೂ ಮಂಗಳಮುಖಿಯಾದ ಚೆಲುವ ‘ನಮ್ಮಂಥವರೂ ಇಷ್ಟಲಿಂಗ ದೀಕ್ಷೆ ಪಡೆಯಬಹುದಾ?’ ಎಂದು ಕೇಳಿದಾಗ ‘ಎಲ್ಲರೂ ಪಡೆಯಬಹುದು’ ಎಂದು ಗುರುಕುಲ ಶಿಕ್ಷಕರು ಹೇಳುತ್ತಾರೆ.

ಮುಖ್ಯವಾಗಿ ಇಡೀ ನಾಟಕವು ಲವಲವಿಕೆಯಿಂದ ಇದೆ. ಸಾಲ ವಸೂಲಿ ಮಾಡುವ ಸಿದ್ಧಪ್ಪ, ಆಳು, ಮಂಗಳಮುಖಿ ಚೆಲುವ, ಕೊಡಗೂಸು ಪಾತ್ರಗಳು ಗಮನ ಸೆಳೆಯುತ್ತವೆ. ಹಾಸ್ಯ ಸನ್ನಿವೇಶಗಳು ಕಳೆಗಟ್ಟುತ್ತವೆ.

ಅದರಲ್ಲೂ ಚೆಲುವ ಪಾತ್ರದಲ್ಲಿ ಭಾಸ್ಕರ್ ಹಿತ್ತಲಮನಿ, ಸಾಹುಕಾರ ಸಿದ್ಧಪ್ಪನ ಪಾತ್ರದಲ್ಲಿ ಚಿನ್ಮಯರಾಮ ಎಸ್.ವೈ., ಆಳಿನ ಪಾತ್ರದಲ್ಲಿ ಪವನಕುಮಾರ್ ಮಿಂಚುತ್ತಾರೆ. ಹೀಗೆಯೇ ಕೊಡಗೂಸು ಪಾತ್ರದ ದಿವ್ಯಾಂಜಲಿ, ಶಿವದೇವಯ್ಯನ ಪಾತ್ರದಲ್ಲಿ ಆಕಾಶ್ ಜಿ., ಸೋಮಲೆಯಾಗಿ ರೇಷ್ಮಾ, ಅಜ್ಜಿಯಾಗಿ ಭಾಗ್ಯಮ್ಮ, ಶಿವಪ್ಪನಾಗಿ ಬಸವರಾಜ ಎಚ್., ರತ್ನಕ್ಕಳಾಗಿ ನಾಗರತ್ನ ಹಿರೇಮಠ, ಸತ್ಯಪ್ರಕಾಶನಾಗಿ ಸಂತೋಷ್ ಕಲಾಲ್, ಶಾಮ ಶಾಸ್ತ್ರಿಯಾಗಿ ಸಾಗರ್ ದನದಮನಿ, ಆಶ್ರಮದ ವಿದ್ಯಾರ್ಥಿಯಾಗಿ ಅಕ್ಷಯ್ ಎಸ್. ಹಾಗೂ ಆಶ್ರಮದ ಗುರುಗಳಾಗಿ ದಿನೇಶ ನಾಯ್ಕ ಹೀಗೆ ಎಲ್ಲರೂ ತಮ್ಮ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ. ಇವರಿಗೆ ಪೂರಕವಾಗಿ ನಾಗರಾಜ್ ಹಾಗೂ ದಾಕ್ಷಾಯಿಣಿ ಅವರು ಹಾಡಿದ ವಚನಗಳು ಮೆರುಗು ನೀಡುತ್ತವೆ.

ಗಮನಾರ್ಹ ಎಂದರೆ; ಮನೆ ಹಾಗೂ ರಸ್ತೆಗಳನ್ನು ಬಿಂಬಿಸಲು ಪರದೆಗಳನ್ನು ಬಳಸಿದ್ದು ಚೆನ್ನಾಗಿದೆ. ಜೊತೆಗೆ ಸರಳ ರಂಗಸಜ್ಜಿಕೆಯಲ್ಲಿ ದೊಡ್ಡ ಸಂದೇಶ ಸಾರುವ ನಾಟಕವಿದು. ಹಾಗೆಯೇ ಪೌರಾಣಿಕ ಕಥೆಯನ್ನು ವಾಸ್ತವಿಕ ನೆಲೆಗಟ್ಟಿನಲ್ಲಿ ಕಟ್ಟಿಕೊಟ್ಟಿದ್ದು ಮಹತ್ವವಾದುದು.

share
ಗಣೇಶ ಅಮೀನಗಡ
ಗಣೇಶ ಅಮೀನಗಡ
Next Story
X