Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಈ ಹೊತ್ತಿನ ಹೊತ್ತಿಗೆ
      • ಜನಚರಿತೆ
      • ವಿಡಂಬನೆ
      • ಜನ ಜನಿತ
      • ರಂಗ ಪ್ರಸಂಗ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಜನಮನ
      • ರಂಗದೊಳಗಿಂದ
      • ಶಂಬೂಕ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ತಾನು ಕಲಿತ ಶಾಲೆಗೆ ಮರುಜೀವ ನೀಡಿದ ರವಿ...

ತಾನು ಕಲಿತ ಶಾಲೆಗೆ ಮರುಜೀವ ನೀಡಿದ ರವಿ ಬಸ್ರೂರು

ಬಸ್ರೂರಿನ 132 ವರ್ಷಗಳ ಹಳೇ ಶಾಲೆಗೆ 25 ಲಕ್ಷ ರೂ. ವೆಚ್ಚದಲ್ಲಿ ಕಾಯಕಲ್ಪ

ನಝೀರ್ ಪೊಲ್ಯನಝೀರ್ ಪೊಲ್ಯ15 April 2024 1:16 PM IST
share
ತಾನು ಕಲಿತ ಶಾಲೆಗೆ ಮರುಜೀವ ನೀಡಿದ ರವಿ ಬಸ್ರೂರು

ಕುಂದಾಪುರ: ಸಿನೆಮಾ ರಂಗದ ಸಂಗೀತ ಕ್ಷೇತ್ರದಲ್ಲಿ ಬಹಳ ದೊಡ್ಡ ಸಾಧನೆಯೊಂದಿಗೆ ಹೆಸರು ಪಡೆದರೂ ತಾನು ಕಲಿತ ಶಾಲೆಯನ್ನು ಮರೆಯಲಿಲ್ಲ. ಶಿಥಿಲಾವಸ್ಥೆಯಲ್ಲಿದ್ದ ಶತಮಾನ ಕಂಡ ಶಾಲೆಗೆ ತನ್ನ ಸ್ವಂತ ಖರ್ಚಿನಿಂದ ಲಕ್ಷಾಂತರ ರೂ. ವ್ಯಯಿಸಿ ಮರುಜೀವ ಕೊಟ್ಟರು. ಗ್ರಾಮೀಣ ಪ್ರದೇಶದ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ಸಿಗಬೇಕೆಂಬ ಉದ್ದೇಶದಿಂದ ಶಾಲೆಗೆ ಮೂಲಭೂತ ಸೌರ್ಕಯಗಳೊಂದಿಗೆ ಹೊಸ ರೂಪ ಕೊಟ್ಟರು. ಗೌರವ ಶಿಕ್ಷಕರಿಗೆ ಸಂಬಳ ನೀಡುವುದಕ್ಕಾಗಿಯೇ ಹೊಸ ಪರಿಕಲ್ಪನೆಯನ್ನು ಹುಟ್ಟು ಹಾಕಿದರು....!

ಹೀಗೆ 132 ವರ್ಷಗಳ ಹಳೆಯ ಬಸ್ರೂರಿನ ಬಿ.ಎಂ.ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಗೆ ಕಾಯಕಲ್ಪ ನೀಡುತ್ತಿರುವ ಶಿಕ್ಷಣ ಪ್ರೇಮಿ ಖ್ಯಾತ ಸಂಗೀತ ನಿರ್ದೇಶಕ ರವಿ ಬಸ್ರೂರು.

1892ರ ನ.1ರಂದು ಎಕ್ಸುಲರಿ ಬಾಸೆಲ್ ಮಿಷನ್ ಸ್ಕೂಲ್ ಅಸೋಸಿಯೇಶನ್‌ನಿಂದ ಬಸ್ರೂರು ಬಿ.ಎಂ.ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಸ್ಥಾಪನೆಗೊಂಡಿತು. ಅಲ್ಲಿಂದ ಇಲ್ಲಿಯವರೆಗೆ ಸಹಸ್ರಾರು ಮಕ್ಕಳು ಇಲ್ಲಿ ವಿದ್ಯಾಭ್ಯಾಸ ಪಡೆದು ವಿವಿಧ ಕ್ಷೇತ್ರಗಳಲ್ಲಿ ದುಡಿಯುತ್ತಿದ್ದಾರೆ. ಪ್ರಸಕ್ತ ಈ ಶಾಲೆಯಲ್ಲಿ ಒಂದರಿಂದ ಏಳನೇ ತರಗತಿಯವರೆಗೆ 86 ಮಕ್ಕಳು ಕಲಿಯುತ್ತಿದ್ದಾರೆ.

25 ಲಕ್ಷ ರೂ. ವೆಚ್ಚದಲ್ಲಿ ಅಭಿವೃದ್ಧಿ: 132 ವರ್ಷಗಳ ಹಳೆಯ ಈ ಶಾಲಾ ಕಟ್ಟಡ ಶಿಥಿಲಾವಸ್ಥೆಯಲ್ಲಿತ್ತು. ಕೆಲವು ಗೋಡೆಗಳು ಕುಸಿಯುವ ಭೀತಿಯಲ್ಲಿದ್ದವು. ಇದನ್ನು ಕಂಡ ಈ ಶಾಲೆಯ ಹಳೆ ವಿದ್ಯಾರ್ಥಿ ಹಾಗೂ ಸಂಗೀತ ನಿರ್ದೇಶಕ ರವಿ ಬಸ್ರೂರು, ಶಾಲೆಯನ್ನು ಉಳಿಸಲು ಮುಂದಾದರು. ರವಿ ಬಸ್ರೂರು ಸುಮಾರು 25 ಲಕ್ಷ ರೂ. ವ್ಯಯಿಸಿ ಶಾಲೆಯ ಅಭಿವೃದ್ಧಿ ಕಾರ್ಯ ನಡೆಸಿದರು. ಕಳೆದ ಅಕ್ಟೋಬರ್‌ನಿಂದ ಆರಂಭಗೊಂಡ ವಿವಿಧ ಕಾಮಗಾರಿ ಮೂರು ತಿಂಗಳ ಕಾಲ ನಡೆಯಿತು. ಇದೀಗ ಈ ಶಾಲೆ ಹೊಸ ರೂಪ ಪಡೆದುಕೊಂಡಿದೆ.

‘ನಾಲ್ಕು ವರ್ಷಗಳ ಹಿಂದೆ ಈ ಶಾಲೆಯ ಅವಸ್ಥೆ ನೋಡಿದಾಗ ನಮಗೆ ಮರುಕು ಆಗುತ್ತಿತ್ತು. 132 ವರ್ಷಗಳ ಇತಿಹಾಸ ಹೊಂದಿರುವ ಹಾಗೂ ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡಿರುವ ಶಾಲೆ ಶಿಥಿಲಾವಸ್ಥೆಗೆ ತಲುಪಿ, ಬೀಳುವ ಸ್ಥಿತಿಯಲ್ಲಿತ್ತು. ಇಂತಹ ಸಮಯದಲ್ಲಿ ರವಿ ಬಸ್ರೂರು ತಾನು ಕಲಿತ ಶಾಲೆ ಎಂಬ ಅಭಿಮಾನದಿಂದ ಮುಂದೆ ಬಂದು ಮರುಜೀವ ಕೊಡುವ ಕೆಲಸ ಮಾಡಿರುವುದು ಎಲ್ಲರಿಗೂ ಮಾದರಿ’ ಎನ್ನುತ್ತಾರೆ ಹಳೆ ವಿದ್ಯಾರ್ಥಿ, ಯೋಗ ಶಿಕ್ಷಕ ಅಶೋಕ ಕೆರೆಕಟ್ಟೆ.

ಮೂಲಭೂತ ಸೌರ್ಕಯಗಳ ವ್ಯವಸ್ಥೆ

ಮೊದಲು ಈ ಶಾಲೆಯಲ್ಲಿ ಮಕ್ಕಳಿಗೆ ಕುಳಿತುಕೊಳ್ಳಲು ಸರಿಯಾದ ಬೆಂಚುಗಳ ವ್ಯವಸ್ಥೆ ಇರಲಿಲ್ಲ. ಇದನ್ನು ಕಂಡ ರವಿ ಬಸ್ರೂರು ಮಕ್ಕಳಿಗಾಗಿ ಆಧುನಿಕ ಮಾದರಿಯ ಕುರ್ಚಿಗಳ ವ್ಯವಸ್ಥೆ ಮಾಡಿ ಕೊಟ್ಟಿದ್ದಾರೆ. 40-50 ವರ್ಷ ಹಳೆ ಬಾಗಿಲನ್ನು ಬದಲಾಯಿಸಿ ಹೊಸ ಬಾಗಿಲು ಮಾಡಿಕೊಟ್ಟಿದ್ದಾರೆ ಎಂದು ಶಾಲಾ ನಿವೃತ್ತ ಮುಖ್ಯೋಪಾಧ್ಯಾಯಿನಿ ಸುವರ್ಣಲತಾ ಮಾಹಿತಿ ನೀಡಿದ್ದಾರೆ.

132 ವರ್ಷಗಳ ಹಿಂದೆ ಬ್ರಿಟಿಷರ ಕಚೇರಿ ಇತ್ತೆಂದು ಎಂದು ಹೇಳಲಾಗುವ ಹಾಲ್‌ಗೆ ಹೊಸ ರೂಪ ನೀಡಿ, ಅಲ್ಲಿ ಮಕ್ಕಳಿಗೆ ಸಾಮಾನ್ಯ ಜ್ಞಾನ ಮೂಡಿಸುವ ಉದ್ದೇಶದಿಂದ ದೇಶದ ರಾಷ್ಟ್ರಪತಿಗಳು, ಪ್ರಧಾನ ಮಂತ್ರಿಗಳ ಮಾಹಿತಿಯನ್ನು ಫೋಟೊ ಸಮೇತ ಅಳವಡಿಸಿದ್ದಾರೆ. ಹಳೆಯ ಕಟ್ಟಡ ಆಗಿರುವುದರಿಂದ ಇಲ್ಲಿನ ಗೋಡೆಗಳು ಕುಸಿಯುವ ಸ್ಥಿತಿಯಲ್ಲಿತ್ತು.

ಅದನ್ನೆಲ್ಲ ದುರಸ್ತಿ ಮಾಡಿಸಿ ಉತ್ತಮ ಭೋಜನ ಹಾಲ್ ಮಾಡಿಕೊಟ್ಟರು. ಬಾಲಕ ಮತ್ತು ಬಾಲಕಿಯರಿಗೆ ಪ್ರತ್ಯೇಕವಾದ ಅತ್ಯುತ್ತಮವಾದ ಶೌಚಾಲಯಗಳನ್ನು ನಿರ್ಮಿಸಿ ಕೊಟ್ಟಿದ್ದಾರೆ. ಅಲ್ಲದೆ ಇಲ್ಲಿಗೆ ಬಾವಿಯಿಂದ ನೇರವಾಗಿ ನೀರು ಬರುವ ವ್ಯವಸ್ಥೆ ಕೂಡ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಶಿಕ್ಷಕಿಯರ ಸಂಬಳಕ್ಕಾಗಿ ನೂತನ ಪರಿಕಲ್ಪನೆ

ಈ ಶಾಲೆಯಲ್ಲಿ ಒಟ್ಟು ಆರು ಶಿಕ್ಷಕಿಯರಿದ್ದು, ಅವರಲ್ಲಿ ಇಬ್ಬರು ಶಿಕ್ಷಕಿಯರಿಗೆ ಸರಕಾರದಿಂದ ಸಂಬಳ ದೊರೆಯುತ್ತದೆ. ಉಳಿದ ನಾಲ್ವರು ಗೌರವ ಶಿಕ್ಷಕರಿಗೆ ಹಳೆ ವಿದ್ಯಾರ್ಥಿಗಳಿಂದ ಹಣ ಸಂಗ್ರಹಿಸಿ ನೀಡಲಾಗುತ್ತಿದೆ.

ಇದನ್ನು ಮನಗಂಡ ರವಿ ಬಸ್ರೂರು, ಈ ಶಿಕ್ಷಕರಿಗೆ ಸಂಬಳ ಹೆಚ್ಚಿಸುವ ಇರಾದೆಯಿಂದ ದಾನಿಗಳಿಂದ ತಿಂಗಳಿಗೆ 100 ರೂ. ಸಂಗ್ರಹಿಸುವ ಹೊಸ ಪರಿಕಲ್ಪನೆ ಹುಟ್ಟು ಹಾಕಿದರು. ಇದಕ್ಕೆ ಉತ್ತಮ ಸ್ಪಂದನ ದೊರೆತಿದ್ದು, ಇದೀಗ 130ಕ್ಕೂ ಅಧಿಕ ಮಂದಿ ಈ ಕಾರ್ಯದಲ್ಲಿ ಕೈಜೋಡಿಸಿದ್ದಾರೆ. ಈ ಮಾರ್ಚ್‌ನಲ್ಲಿ ಆರಂಭಿಸಿರುವ ಈ ವಿನೂತನ ಯೋಜನೆ ಮುಂದಿನ ಶೈಕ್ಷಣಿಕ ವರ್ಷದಿಂದ ಜಾರಿಗೆ ತರಲು ಆಡಳಿತ ಮಂಡಳಿ ಉದ್ದೇಶಿಸಿದೆ.

ಇದರಲ್ಲಿ ಪಾರದರ್ಶಕತೆ ಕಾಪಾಡಲು ಆ್ಯಪ್‌ನ್ನು ಕೂಡ ಅಭಿವೃದ್ಧಿಪಡಿಸಲಾಗಿದೆ. ಈ ಆ್ಯಪ್ ಮೂಲಕ ಒಬ್ಬರನ್ನೊಬ್ಬರು ಅರಿತುಕೊಳ್ಳಬಹುದು. ಅಲ್ಲದೆ ಶಾಲೆಯ ಬಗ್ಗೆ ಮಾಹಿತಿ, ಫೋಟೊ ಗ್ಯಾಲರಿ, ಭವಿಷ್ಯದ ಯೋಜನೆ ಸಹಿತ ಎಲ್ಲ ವಿವರಗಳು ಇರು ತ್ತವೆ ಎಂದು ರವಿ ಬಸ್ರೂರು ಮಾಹಿತಿ ನೀಡಿದ್ದಾರೆ.

ಹಳ್ಳಿಗಳು ಉದ್ಧಾರ ಆದರೆ ನಮ್ಮ ತಾಲೂಕು, ಜಿಲ್ಲೆ, ರಾಜ್ಯ, ಮುಂದೆ ದೇಶ ಉದ್ಧಾರ ಆಗುತ್ತದೆ ಎಂಬುದನ್ನು ನಂಬಿದ್ದೇನೆ. ಅದರಂತೆ ಗ್ರಾಮೀಣ ಪ್ರದೇಶದಲ್ಲಿರುವ ಈ ಶಾಲೆಯ ಬಗ್ಗೆ ಗಮನ ಹರಿಸಿದ್ದೇನೆ. ಕೇವಲ ನಾನು ಒಬ್ಬನೇ ಮಾಡುವುದಕ್ಕಿಂತ ನನ್ನ ಜೊತೆ 100 ಕೈ ಸೇರಿದಂತೆ ತುಂಬಾ ಅನುಕೂಲ ಆಗುತ್ತದೆ ಎಂಬ ಕಾರಣಕ್ಕೆ ಎಲ್ಲರ ಬೆಂಬಲ ಪಡೆದುಕೊಳ್ಳುತ್ತಿದ್ದೇನೆ. ಇತಂಹ ಸಮಸ್ಯೆಗಳಿಗೆ ತಾತ್ಕಾಲಿಕ ಪರಿಹಾರದ ಬದಲು ಶಾಶ್ವತ ಪರಿಹಾರ ಕಂಡುಕೊಂಡರೆ ಮಾತ್ರ ಶಾಲೆಗಳನ್ನು ಉಳಿಸಲು ಸಾಧ್ಯ.

ರವಿ ಬಸ್ರೂರು, ಸಂಗೀತ ನಿರ್ದೇಶಕರು

ಉಡುಪಿ ಜಿಲ್ಲೆಯಲ್ಲಿ 132 ವರ್ಷಗಳ ಹಳೆ ಶಾಲೆಗಳು ಕೇವಲ ಬೆರಳಣಿಕೆ ಸಂಖ್ಯೆಯಲ್ಲಿ ಮಾತ್ರ ಇವೆ. ಈ ಶಾಲೆಗಳ ಪೈಕಿ ನಮ್ಮ ಶಾಲೆ ಇಷ್ಟು ವರ್ಷಗಳಾದರೂ ತನ್ನತನವನ್ನು ಉಳಿಸಿಕೊಂಡಿರುವುದಕ್ಕೆ ಇಲ್ಲಿನ ಹಳೆ ವಿದ್ಯಾರ್ಥಿಗಳೇ ಕಾರಣ. ಸರಕಾರದ ಯಾವುದೇ ಸವಲತ್ತು ಇಲ್ಲದ ಸಂದರ್ಭದಲ್ಲಿ ರವಿ ಬಸ್ರೂರು ತಾನು ಕಲಿತ ಶಾಲೆ ಎಂಬ ಅಭಿಮಾನದಿಂದ ಮುಂದೆ ಬಂದು ತುಂಬಾ ಸಹಾಯ ಮಾಡುತ್ತಿದ್ದಾರೆ.

ಸುವರ್ಣಲತಾ, ನಿವೃತ್ತ ಮುಖ್ಯೋಪಾಧ್ಯಾಯಿನಿ

ಕೈಜೋಡಿಸಿದ ತೆಲುಗು ಚಿತ್ರರಂಗ!

ತಿಂಗಳಿಗೆ 100 ರೂ. ನೀಡುವ ಯೋಜನೆಗೆ ರವಿ ಬಸ್ರೂರು ಮನವಿ ಮೇರೆಗೆ ತೆಲುಗು ಚಿತ್ರರಂಗದ ಕಲಾವಿದರು ಕೂಡ ಕೈಜೋಡಿಸಿದ್ದಾರೆ. ತೆಲುಗು ಚಿತ್ರರಂಗದಲ್ಲಿರುವ ಸಂಗೀತ ಕಲಾವಿದರಿಗೆ ನನ್ನ ಶಾಲೆಯ 100 ರೂ. ಯೋಜನೆಯ ಬಗ್ಗೆ ಮಾಹಿತಿ ನೀಡಿದ್ದೇನೆ. ಅದಕ್ಕೆ ಅವರಿಂದ ಉತ್ತಮ ಸ್ಪಂದನ ದೊರೆತಿದೆ. ಈವರೆಗೆ 22 ಮಂದಿ ತಿಂಗಳಿಗೆ 100 ರೂ.ನಂತೆ ದೇಣಿಗೆ ನೀಡಲು ಮುಂದೆ ಬಂದಿದ್ದಾರೆ. ಅದೇ ರೀತಿ ಕೆಲವರು ವರ್ಷದ ಹಣ ಒಂದೇ ಬಾರಿಗೆ ನೀಡಿದರೆ, ಇನ್ನು ಕೆಲವರು 5 ಸಾವಿರ ರೂ.ನಂತೆ ನೀಡುತ್ತಿದ್ದಾರೆ ಎಂದು ರವಿ ಬಸ್ರೂರು ತಿಳಿಸಿದ್ದಾರೆ.

share
ನಝೀರ್ ಪೊಲ್ಯ
ನಝೀರ್ ಪೊಲ್ಯ
Next Story
X