ಸಮಸ್ತ ಮುಶಾವರ ಸದಸ್ಯ ಕಾಡೇರಿ ಮುಹಮ್ಮದ್ ಮುಸ್ಲಿಯಾರ್ ನಿಧನ
ಸಂಜೆ 4 ಗಂಟೆಗೆ ಮಲಪ್ಪುರಂನ ಆಲತ್ತೂರ್ಪಡಿ ಜುಮಾ ಮಸೀದಿಯಲ್ಲಿ ಅಂತ್ಯಕ್ರಿಯೆ
ಮಲಪ್ಪುರಂ: ಸಮಸ್ತ ಕೇರಳ ಜಂ-ಇಯ್ಯತುಲ್ ಉಲಮಾದ ಕೇಂದ್ರ ಮುಶಾವರ ಸದಸ್ಯರು ಹಾಗೂ ಖ್ಯಾತ ವಿದ್ವಾಂಸ ಕಾಡೇರಿ ಮುಹಮ್ಮದ್ ಮುಸ್ಲಿಯಾರ್ (60) ನಿಧನರಾದರು. ಹೃದಯ ಸಂಬಂಧಿ ಕಾಯಿಲೆಗೆ ಚಿಕಿತ್ಸೆ ಪಡೆಯುತ್ತಿದ್ದ ಅವರು ಇಂದು ಬೆಳಗ್ಗೆ 8 ಗಂಟೆಗೆ ಮಲಪ್ಪುರಂ ಎಂ.ಬಿ.ಎಚ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಕಾಡೇರಿ ಮುಹಮ್ಮದ್ ಮುಸ್ಲಿಯಾರ್ ಅವರು 1963 ರಲ್ಲಿ ಮಲಪ್ಪುರಂ ಜಿಲ್ಲೆಯ ಪೆರಿಂಬಳಂನಲ್ಲಿ ಕಾಡೇರಿ ಅಬ್ದುಲ್ ವಹಾಬ್ ಮುಸ್ಲಿಯಾರ್ ಮತ್ತು ಮೈಮೂನಾ ದಪತಿಯ ಮಗನಾಗಿ ಜನಿಸಿದರು. ಮೇಲ್ಮುರಿ, ಇರುಂಬುಝಿ, ಚೆಮ್ಮಂಕಡವ್, ಕೊಂಕಯಂ, ರಂಡತ್ತಾಣಿ ಮತ್ತು ಕಿಷ್ಕೆಪುರಂನಲ್ಲಿ ಅಧ್ಯಯನ ಮಾಡಿದ ನಂತರ, ತಮಿಳುನಾಡಿನ ವೆಲ್ಲೂರು ಬಖಿಯಾತು ಸ್ವಾಲಿಹಾತ್‌ನಿಂದ ಬಾಖವಿ ಪದವಿ ಪಡೆದರು.
ಕಳೆದ ಮೂರು ದಶಕಗಳಿಂದ ಮಲಪ್ಪುರಂ ಜಿಲ್ಲೆಯ ಇರುಂಬು ಚೋಳ ಎಂಬಲ್ಲಿ ಸೇವೆ ಸಲ್ಲಿಸುತ್ತಿದ್ದರು. ಕಚನಿಕಾಡ್ ನಲ್ಲೂ ದರ್ಸ್ ನಡೆಸಿದ್ದರು. ಪ್ರಸ್ತುತ ಮಂಕಡ, ಪಲ್ಲಿಪುರಂ ಮತ್ತು ಮಲಪ್ಪುರಂ ಚೆಮ್ಮಂಕಡವ್ ಖಾಝಿಯಾಗಿದ್ದರು.
ಸಮಸ್ತ ಮಲಪ್ಪುರಂ ಜಿಲ್ಲಾ ಮುಶಾವರ ಸದಸ್ಯರಾಗಿ ಮತ್ತು ಸಮಸ್ತ ಏರನಾಡ್ ತಾಲೂಕು ಅಧ್ಯಕ್ಷರಾಗಿ ಕೆಲಸ ಮಾಡಿದ ಕಾಡೇರಿ ಮುಹಮ್ಮದ್ ಮುಸ್ಲಿಯಾರ್ ಅವರು ಜನವರಿ 13, 2021 ರಂದು ಸಮಸ್ತ ಕೇಂದ್ರ ಮುಶಾವರ ಸದಸ್ಯರಾಗಿ ಆಯ್ಕೆಯಾದರು.
ಇಂದು ಸಂಜೆ 4 ಗಂಟೆಗೆ ಮಲಪ್ಪುರಂನ ಆಲತ್ತೂರ್ಪಡಿ ಜುಮಾ ಮಸೀದಿಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ. ಇವರು ಪತ್ನಿ ನಜೀರಾ, ಮಕ್ಕಾಳಾದ ಅಬ್ದುಲ್ಲಾ ಕಮಾಲ್ ದಾರಿಮಿ, ಅಬ್ದುಲ್ ವಹ್ಹಾಬ್ ಮುಸ್ಲಿಯಾರ್, ನಫೀಸತ್, ಅಬ್ದುಲ್ ಮಜೀದ್, ಅಬ್ದುಲ್ ಜಲೀಲ್ ಮತ್ತು ದಿ.ಮುಬಶ್ಶಿರಾ ಹಾಗೂ ಮೊಮ್ಮಕ್ಕಳಾದ ನಿಬ್ರಾಸುದ್ದೀನ್ ಹೈತಮಿ ಚೀಕೋಡ್ ಮತ್ತು ಫಾತಿಮಾ ನಫ್ರೀರಾ. ಮತ್ತು ಒಡಹುಟ್ಟಿದವರಾದ ಅಬ್ದುಲ್ ಶುಕೂರ್ ದಾರಿಮಿ ಮತ್ತು ಖದೀಜಾ ಇವರನ್ನು ಅಗಲಿದ್ದಾರೆ.