Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಈ ಹೊತ್ತಿನ ಹೊತ್ತಿಗೆ
      • ಜನಚರಿತೆ
      • ವಿಡಂಬನೆ
      • ಜನ ಜನಿತ
      • ರಂಗ ಪ್ರಸಂಗ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಜನಮನ
      • ರಂಗದೊಳಗಿಂದ
      • ಶಂಬೂಕ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಸಂಪಾದಕೀಯ
  4. ಕೇಂದ್ರ- ರಾಜ್ಯಗಳ ನಡುವಿನ ಸೇತುವೆಗಳು...

ಕೇಂದ್ರ- ರಾಜ್ಯಗಳ ನಡುವಿನ ಸೇತುವೆಗಳು ಇನ್ನಷ್ಟು ದುರ್ಬಲ

ವಾರ್ತಾಭಾರತಿವಾರ್ತಾಭಾರತಿ26 July 2024 9:17 AM IST
share
ಕೇಂದ್ರ- ರಾಜ್ಯಗಳ ನಡುವಿನ ಸೇತುವೆಗಳು ಇನ್ನಷ್ಟು ದುರ್ಬಲ

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

ಈ ಬಾರಿಯ ಬಜೆಟ್ ಕೇಂದ್ರ ಮತ್ತು ರಾಜ್ಯಗಳ ನಡುವಿನ ಸಂಘರ್ಷಕ್ಕೆ ತುಪ್ಪ ಸುರಿದಿದೆ. ಕೇಂದ್ರವು ನಿರ್ದಿಷ್ಟ ಕೆಲವು ರಾಜ್ಯಗಳನ್ನು ಉದ್ದೇಶಪೂರ್ವಕವಾಗಿ ನಿರ್ಲಕ್ಷಿಸುತ್ತಿದೆ ಎನ್ನುವ ಆರೋಪ ಮತ್ತೆ ಮುನ್ನೆಲೆಗೆ ಬಂದಿದ್ದು, ತಿಕ್ಕಾಟ ಇನ್ನಷ್ಟು ತೀವ್ರ ಸ್ವರೂಪವನ್ನು ಪಡೆಯುವ ಸಾಧ್ಯತೆಗಳು ಕಾಣುತ್ತಿವೆ. ತಮ್ಮ ರಾಜ್ಯಗಳನ್ನು ಬಜೆಟ್‌ನಲ್ಲಿ ಕಡೆಗಣಿಸಿದ ಕಾರಣಕ್ಕಾಗಿ, ನಾಲ್ಕು ರಾಜ್ಯಗಳು ಜು. ೨೭ರಂದು ನಡೆಯಲಿರುವ ನೀತಿ ಆಯೋಗದ ಸಭೆಯನ್ನು ಬಹಿಷ್ಕರಿಸಲು ಮುಂದಾಗಿದೆ. ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ, ತೆಲಂಗಾಣದ ಮುಖ್ಯಮಂತ್ರಿ ರೇವಂತ್ ರೆಡ್ಡಿ, ತಮಿಳುನಾಡಿನ ಮುಖ್ಯಮಂತ್ರಿ ಸ್ಟಾಲಿನ್, ಹಿಮಾಚಲ ಪ್ರದೇಶದ ಸುಖ್ವಿಂದರ್ ಸುಖು ನೀತಿ ಆಯೋಗದ ಸಭೆಯಲ್ಲಿ ಭಾಗವಹಿಸುವುದಿಲ್ಲ ಎಂದು ಈಗಾಗಲೇ ಮಾಧ್ಯಮಗಳ ಮುಂದೆ ಹೇಳಿಕೆ ನೀಡಿದ್ದಾರೆ. ಕರ್ನಾಟಕದ ಬೇಡಿಕೆಗಳನ್ನು ಕೇಂದ್ರಕ್ಕೆ ತಲುಪಿಸಲು ಬಜೆಟ್ ಪೂರ್ವದಲ್ಲಿ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ವಪಕ್ಷ ಸಭೆಯನ್ನು ನಡೆಸಿದ್ದರು. ಈ ಸಭೆಯಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಕೇಂದ್ರ ಸಚಿವ ಕುಮಾರಸ್ವಾಮಿ ಸೇರಿದಂತೆ ಬಿಜೆಪಿಯ ಹಲವು ನಾಯಕರು ಭಾಗವಹಿಸಿದ್ದರು. ಮಾತ್ರವಲ್ಲ, ಕೇಂದ್ರದಲ್ಲಿ ಕರ್ನಾಟಕದ ಅಗತ್ಯಗಳನ್ನು ಎತ್ತಿ ಹಿಡಿಯುವ ಬದ್ಧತೆಯನ್ನು ಸಭೆಯಲ್ಲಿ ಪ್ರದರ್ಶಿಸಿದ್ದರು. ಇಷ್ಟಾಗಿಯೂ ಬಜೆಟ್‌ನಲ್ಲಿ ಕರ್ನಾಟಕವನ್ನು ನಿರ್ಲಕ್ಷಿಸಲಾಗಿದೆ. ‘ನೀತಿ ಆಯೋಗಕ್ಕೆ ಇಡೀ ದೇಶವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವ ಸ್ಪಷ್ಟ ನೀತಿಯೇ ಇಲ್ಲದೆ ಇರುವುದರಿಂದ, ನೀತಿ ಆಯೋಗದ ಸಭೆ ಯಾಕೆ ಭಾಗವಹಿಸಬೇಕು?’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಳಿದ್ದಾರೆ.

ಕೇಂದ್ರವು ಈಗಾಗಲೇ ನೀಡಿರುವ ಭರವಸೆಯನ್ನು ಬಜೆಟ್‌ನಲ್ಲಿ ನೀಡಲು ವಿಫಲವಾಗಿದೆ. ಕರ್ನಾಟಕದಲ್ಲಿ ಭದ್ರಾ ಯೋಜನೆಗಾಗಿ ೫,೩೦೦ ಕೋಟಿ ರೂ. ಅನುದಾನ ನೀಡುವುದಾಗಿ ವಿತ್ತ ಸಚಿವರು ಭರವಸೆ ನೀಡಿದ್ದರು. ಆದರೆ ಅದನ್ನು ಬಜೆಟ್‌ನಲ್ಲಿ ಈಡೇರಿಸಿಲ್ಲ ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ. ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಪೂರಕ ಅನುದಾನ, ಮಹಾದಾಯಿ ಯೋಜನೆ, ಮೇಕೆದಾಟು ಯೋಜನೆ, ಕೃಷ್ಣಾ ಮೇಲ್ದಂಡೆ ಯೋಜನೆ ಇವೆಲ್ಲದರ ಬಗ್ಗೆ ಬಜೆಟ್ ಮೌನವಾಗಿದೆ. ೧೫ನೇ ಹಣಕಾಸು ಆಯೋಗದ ಶಿಫಾರಸಿನಂತೆ ಪೆರಿಫೆರಲ್ ರಸ್ತೆ ನಿರ್ಮಾಣ, ಕೆರೆಗಳ ಅಭಿವೃದ್ಧಿ, ಬೆಂಗಳೂರು ನಗರಾಭಿವೃದ್ಧಿ ಯೋಜನೆಗಳಿಗೆ ಒಟ್ಟು ೧೧,೪೮೫ ಕೋಟಿ ರೂ. ಅನುದಾನವನ್ನು ನೀಡುವಂತೆ ಕೋರಲಾಗಿತ್ತು. ರಾಯಚೂರಿನಲ್ಲಿ ಏಮ್ಸ್ ಸ್ಥಾಪಿಸುವ ಬೇಡಿಕೆಯನ್ನೂ ಕೇಂದ್ರದ ಮುಂದೆ ಇಡಲಾಗಿತ್ತು. ಆದರೆ ಸರ್ವ ಪಕ್ಷ ಸಭೆಯು ಮುಂದಿಟ್ಟ ಎಲ್ಲ ಬೇಡಿಕೆಗಳನ್ನೂ ಬಜೆಟ್ ಸಂಪೂರ್ಣ ನಿರ್ಲಕ್ಷಿಸಿದೆ. ಕೇಂದ್ರ ಸಚಿವರಾಗಿರುವ ಕುಮಾರಸ್ವಾಮಿಯವರು ಬಜೆಟ್‌ಗೆ ಭೋಪರಾಕ್ ಹಾಕಿದ್ದಾರೆ. ರಾಜ್ಯಗಳಿಗೆ ೫೦ ವರ್ಷಗಳ ಬಡ್ಡಿರಹಿತ ಸಾಲ ನೀಡುವ ಘೋಷಣೆಯನ್ನೇ ಅಮೃತಕಾಲದ ಕೊಡುಗೆಯೆಂದು ಅವರು ಸಂಭ್ರಮಿಸಿದ್ದಾರೆ. ರಾಜ್ಯಗಳು ಕಟ್ಟಿದ ತೆರಿಗೆಯನ್ನು ಮರಳಿ ರಾಜ್ಯಕ್ಕೆ ಸಾಲವಾಗಿ ನೀಡುವುದೇ ಅವರ ಪ್ರಕಾರ ಕೇಂದ್ರ ಮಾಡುತ್ತಿರುವ ಮಹದುಪಕಾರವಾಗಿದೆ. ಈ ಹಿಂದಿನ ಬಜೆಟ್‌ನಲ್ಲಿ ರಾಜ್ಯಕ್ಕೆ ನೀಡಿದ ಭರವಸೆಗಳನ್ನೂ ಕೇಂದ್ರ ಈಡೇರಿಸಿಲ್ಲ.

ಕಳೆದ ಬಾರಿ ‘ಡಬಲ್ ಇಂಜಿನ್’ ಸರಕಾರ ಇರುವಾಗಲೂ ಕರ್ನಾಟಕಕ್ಕೆ ಯಾವುದೇ ಪ್ರಯೋಜನವಾಗಿರಲಿಲ್ಲ. ಕರ್ನಾಟಕವನ್ನು ೨೦ಕ್ಕೂ ಅಧಿಕ ಬಿಜೆಪಿ ಸಂಸದರು ಪ್ರತಿನಿಧಿಸಿದ್ದರು. ಮಾತ್ರವಲ್ಲ, ರಾಜ್ಯದಲ್ಲಿ ಬಿಜೆಪಿ ಸರಕಾರ ಅಸ್ತಿತ್ವದಲ್ಲಿತ್ತು. ಕರ್ನಾಟಕದ ಹಿತಾಸಕ್ತಿಯನ್ನು ಸಾಧಿಸಿಕೊಳ್ಳಲು ಬಿಜೆಪಿಗೆ ಎಲ್ಲ ಅವಕಾಶಗಳೂ ಇದ್ದವು. ಆದರೆ ಕರ್ನಾಟಕದ ಪರವಾಗಿ ಧ್ವನಿಯೆತ್ತುವ ಧೈರ್ಯವನ್ನು ಯಾವ ಬಿಜೆಪಿ ಸಂಸದರೂ ತೋರಿಸಲಿಲ್ಲ. ಕರ್ನಾಟಕಕ್ಕೆ ಸಿಗಬೇಕಾದ ಅನುದಾನಕ್ಕೆ ಒತ್ತಡ ಹಾಕಿದರೆ ಎಲ್ಲಿ ಮೋದಿ, ಅಮಿತ್ ಶಾ ಅವರ ಕೋಪಕ್ಕೆ ಗುರಿಯಾಗಬೇಕಾಗುತ್ತದೋ ಎನ್ನುವ ಭಯದಲ್ಲಿ , ಕೇಂದ್ರದ ಜೀತದಾಳುಗಳಾಗಿ ಕಾರ್ಯನಿರ್ವಹಿಸಿದರು. ಕರ್ನಾಟಕಕ್ಕೆ ಕೇಂದ್ರ ಮಾಡುತ್ತಿರುವ ಅನ್ಯಾಯಗಳನ್ನು ಬಿಜೆಪಿ ಸಂಸದರೇ ಬಹಿರಂಗವಾಗಿ ಸಮರ್ಥಿಸಿ ಕೇಂದ್ರದ ಹಿತಾಸಕ್ತಿಯನ್ನು ಎತ್ತಿ ಹಿಡಿದರು. ಮೋದಿಯ ಹೆಸರಿನಲ್ಲಿ ಗೆದ್ದು ಬಂದಿರುವ ಈ ಸಂಸದರು ಸಹಜವಾಗಿಯೇ ಕರ್ನಾಟಕದ ಹಿತಾಸಕ್ತಿಯನ್ನು ಮರೆತರು. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ೧೭ ಸ್ಥಾನಗಳನ್ನು ತನ್ನದಾಗಿಸಿಕೊಂಡಿದೆ. ಕೆಲವು ಕ್ಷೇತ್ರಗಳನ್ನು ಕಳೆದುಕೊಂಡಿದೆ. ಆದರೆ, ಬಿಜೆಪಿಯ ಮಿತ್ರ ಪಕ್ಷ ಜೆಡಿಎಸ್‌ನಿಂದ ಕುಮಾರಸ್ವಾಮಿ ಸಂಸದರಾಗಿ, ಸಚಿವರಾಗಿರುವುದರಿಂದ ಅವರು ಖಂಡಿತವಾಗಿಯೂ ರಾಜ್ಯದ ಪರವಾಗಿ ಧ್ವನಿಯೆತ್ತುತ್ತಾರೆ ಎಂದು ಜನರು ಭಾವಿಸಿದ್ದರು. ಕರ್ನಾಟಕದಿಂದ ನಾಲ್ಕು ಮಂದಿ ಕೇಂದ್ರ ಸಚಿವರಾಗಿ ಆಯ್ಕೆಯಾಗಿದ್ದಾರೆ. ಕುಮಾರಸ್ವಾಮಿಯವರು ಕೇಂದ್ರದಲ್ಲಿ ಅತ್ಯುತ್ತಮ ಖಾತೆಯನ್ನು ತನ್ನದಾಗಿಸಿಕೊಂಡಿದ್ದಾರೆ. ಆದರೆ ಇವೆಲ್ಲದರಿಂದ ಕರ್ನಾಟಕಕ್ಕೆ ಯಾವುದೇ ಸಹಾಯವಾಗಲಿಲ್ಲ. ಕೇಂದ್ರದ ತಾರತಮ್ಯ ನೀತಿಯನ್ನು ಉಳಿದೆಲ್ಲ ರಾಜ್ಯಗಳು ದೊಡ್ಡ ಸ್ವರದಲ್ಲಿ ಆಕ್ಷೇಪಿಸುತ್ತಿರುವಾಗ, ಕರ್ನಾಟಕಕ್ಕಾಗಿರುವ ಅನ್ಯಾಯವನ್ನೇ ಉಡುಗೊರೆಗಳೆಂಬಂತೆ ಬಿಜೆಪಿ ಮತ್ತು ಜೆಡಿಎಸ್ ಮುಖಂಡರು ಶ್ಲಾಘಿಸುತ್ತಿರುವುದು ಅತ್ಯಂತ ವಿಷಾದನೀಯವಾಗಿದೆ.

ಈ ಬಾರಿ ಬಿಹಾರ-ಆಂಧ್ರದೊಳಗೆ ಭಾರತವಿದೆಯೆ ಎಂಬ ಪ್ರಶ್ನೆ ಎದ್ದಿದೆ. ಚಂದ್ರಬಾಬು ನಾಯ್ಡು ಮತ್ತು ನಿತೀಶ್ ಕುಮಾರ್ ಬೆಂಬಲದ ಬಲದಲ್ಲಿ ಬಿಜೆಪಿ ಕೇಂದ್ರದಲ್ಲಿ ಅಧಿಕಾರ ಹಿಡಿದಿರುವುದರಿಂದ ಬಿಹಾರ ಮತ್ತು ಆಂಧ್ರವನ್ನು ಸಂತೃಪ್ತಿ ಪಡಿಸಿದರೆ ಇಡೀ ಭಾರತವನ್ನು ಸಂತೃಪ್ತಿ ಪಡಿಸಿದಂತೆ ಎಂದು ಪ್ರಧಾನಿ ಮೋದಿಯವರು ಭಾವಿಸಿದ್ದಾರೆ. ಅಭಿವೃದ್ಧಿಯನ್ನು ದೃಷ್ಟಿಯಲ್ಲಿಟ್ಟು ಬಿಹಾರ ಮತ್ತು ಆಂಧ್ರಕ್ಕೆ ಬಜೆಟ್‌ನಲ್ಲಿ ವಿಶೇಷ ನೆರವನ್ನು ನೀಡುವುದು ತಪ್ಪೇನೂ ಅಲ್ಲ. ಬಿಹಾರವಂತೂ ಇತ್ತೀಚಿನ ದಿನಗಳಲ್ಲಿ ಕಳಪೆ ಅಭಿವೃದ್ಧಿಗಾಗಿ ಸುದ್ದಿಯಲ್ಲಿದೆ. ಸೇತುವೆಗಳು ಒಂದರ ಹಿಂದೆ ಒಂದರಂತೆ ಕುಸಿದು ಬಿಹಾರದ ಅಭಿವೃದ್ಧ್ದಿಯ ಚಿತ್ರಣವನ್ನು ದೇಶದ ಮುಂದಿಡುತ್ತಿದೆ. ಭ್ರಷ್ಟಾಚಾರ ಬಿಹಾರದಲ್ಲಿ ಯಾವ ಪ್ರಮಾಣದಲ್ಲಿದೆ ಮತ್ತು ಅಲ್ಲಿನ ಅಭಿವೃದ್ಧಿ ಕಾಮಗಾರಿಯಲ್ಲಿ ಅದು ಯಾವ ರೀತಿ ಪ್ರಭಾವವನ್ನು ಬೀರಿದೆ ಎನ್ನುವುದನ್ನು ಹೇಳುತ್ತಿದೆ. ಆದರೆ ಕೇಂದ್ರವನ್ನು ಬೆಸೆದುಕೊಂಡ ಬಿಹಾರ-ಆಂಧ್ರ ಮೈತ್ರಿ ಸೇತುವೆಗಳಿಗೆ ಈ ಬಾರಿ ಬಜೆಟ್ ಆದ್ಯತೆ ನೀಡಿದೆ. ಬಜೆಟ್‌ನಲ್ಲಿ ಮಿತ್ರರ ಬೇಡಿಕೆಗಳನ್ನು ನಿರ್ಲಕ್ಷಿಸಿದ್ದೇ ಆಗಿದ್ದರೆ, ಈ ಸೇತುವೆಗೂ ಬಿಹಾರದ ಇತರ ಸೇತುವೆಗಳಿಗೆ ಒದಗಿದ ಗತಿಯಾಗಿ ಬಿಡುತ್ತಿತ್ತು. ಬಿಹಾರ, ಆಂಧ್ರಗಳ ಜೊತೆಗಿನ ಕೇಂದ್ರದ ಮೈತ್ರಿ ಸೇತುವೆಯನ್ನು ಭದ್ರಗೊಳಿಸುವ ಪ್ರಯತ್ನದಲ್ಲಿ ಇತರ ರಾಜ್ಯಗಳ ನಡುವಿನ ಕೇಂದ್ರದ ಸೇತುವೆಗಳು ಇನ್ನಷ್ಟು ದುರ್ಬಲವಾಗಿರುವುದನ್ನು ಪ್ರಧಾನಿ ನಿರ್ಲಕ್ಷಿಸಿದ್ದಾರೆ. ಇದು ಭವಿಷ್ಯದಲ್ಲಿ ಒಕ್ಕೂಟ ವ್ಯವಸ್ಥೆಯ ಮೇಲೆ ಇನ್ನಷ್ಟು ದುಷ್ಪರಿಣಾಮಗಳನ್ನು ಬೀರಲಿದೆ.

ಜಾರ್ಖಂಡ್, ದಿಲ್ಲಿ, ಪಶ್ಚಿಮಬಂಗಾಳ, ಮಹಾರಾಷ್ಟ್ರ, ಕರ್ನಾಟಕ, ಕೇರಳ, ತಮಿಳು ನಾಡು ಹೀಗೆ ದೇಶದ ಬಹುತೇಕ ರಾಜ್ಯಗಳು ಬಜೆಟ್ ತಾರತಮ್ಯವನ್ನು ಬಹಿರಂಗವಾಗಿಯೇ ಪ್ರಶ್ನಿಸಿದೆ. ಜಿಎಸ್‌ಟಿ ಜಾರಿಯಾದ ದಿನಗಳಿಂದ ರಾಜ್ಯಗಳು ತಮಗೆ ಸಿಗಬೇಕಾದ ತಮ್ಮದೇ ತೆರಿಗೆಯ ಹಣಕ್ಕಾಗಿ ಕೇಂದ್ರದ ಮುಂದೆ ಭಿಕ್ಷುಕರಂತೆ ಕೈ ಚಾಚಬೇಕಾಗಿದೆ. ರಾಜ್ಯಕ್ಕೆ ಸಲ್ಲಬೇಕಾದ ಹಣವನ್ನು ನೀಡದೆಯೇ, ಬೇಕಾದರೆ ಸಾಲ ಪಡೆಯಿರಿ ಎನ್ನುತ್ತಿದೆ. ಯಾವುದೇ ಯೋಜನೆಗಳನ್ನು ರೂಪಿಸಬೇಕಾದರೂ, ಯಾವುದೇ ಜನಪರವಾದ ಕಾರ್ಯಕ್ರಮಗಳನ್ನು ಹಾಕಿಕೊಳ್ಳಬೇಕಾದರೂ ರಾಜ್ಯ ಸರಕಾರಗಳು ಕೇಂದ್ರದ ಅನುಮತಿಯನ್ನು ಪಡೆಯಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಕೇಂದ್ರವಂತೂ ಬಡವರನ್ನು, ರೈತರನ್ನು, ಕಾರ್ಮಿಕರನ್ನು ಸಂಪೂರ್ಣವಾಗಿ ಮರೆತು ಕಾರ್ಪೊರೇಟ್ ದೊರೆಗಳಿಗೆ ಮಣೆ ಹಾಕಿದೆ. ಇತ್ತ ರಾಜ್ಯಗಳು ಹಾಕಿಕೊಂಡ ಜನಪರ ಕಾರ್ಯಕ್ರಮಗಳಿಗೆ ಕೇಂದ್ರ ಅಡ್ಡಗಾಲು ಹಾಕುತ್ತಿದೆ. ಈ ಬಾರಿಯ ಬಜೆಟ್ ಮೂಲಕ, ರಾಜ್ಯಗಳ ಮೇಲಿನ ಮೂಗುದಾರವನ್ನು ಕೇಂದ್ರ ಇನ್ನಷ್ಟು ಬಿಗಿಯಾಗಿಸಿದೆ. ಇದು ಒಕ್ಕೂಟ ವ್ಯವಸ್ಥೆಯ ಒಟ್ಟು ಸ್ವರೂಪಕ್ಕೆ ಭಾರೀ ಧಕ್ಕೆಯನ್ನು ತಂದಿದೆ. ಮುಂದಿನ ದಿನಗಳಲ್ಲಿ, ಕೇಂದ್ರ-ರಾಜ್ಯಗಳ ನಡುವಿನ ಈ ಸಂಘರ್ಷ ಇನ್ನಷ್ಟು ಭೀಕರ ರೂಪವನ್ನು ಪಡೆಯಬಹುದು. ಕರ್ನಾಟಕವೂ ತನ್ನ ಹಕ್ಕುಗಳಿಗಾಗಿ ನ್ಯಾಯಾಲಯದ ಮೊರೆ ಹೋಗಬೇಕಾಗಬಹುದು. ಪ್ರತಿಭಟನೆಗಳನ್ನು ನಡೆಸುವ, ಬಹಿಷ್ಕಾರಗಳನ್ನು ಹೇರುವ ಸ್ಥಿತಿ ನಿರ್ಮಾಣವಾಗಬಹುದು. ಬಿಜೆಪಿ ಮತ್ತು ಜೆಡಿಎಸ್ ಸಂಸದರು ಈ ಸಂದರ್ಭದಲ್ಲಿ ಯಾರ ಪರವಾಗಿ ನಿಲ್ಲುತ್ತಾರೆ? ಕನ್ನಡದ ಹಿತಾಸಕ್ತಿಯ ಪರವಾಗಿಯೋ ಅಥವಾ ದಿಲ್ಲಿಯ ಸರ್ವಾಧಿಕಾರದ ಪರವಾಗಿಯೋ? ಎನ್ನುವ ಪ್ರಶ್ನೆಯ ಮೇಲೆ ರಾಜ್ಯದ ಭವಿಷ್ಯ ನಿಂತಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X