Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಈ ಹೊತ್ತಿನ ಹೊತ್ತಿಗೆ
      • ಜನಚರಿತೆ
      • ವಿಡಂಬನೆ
      • ಜನ ಜನಿತ
      • ರಂಗ ಪ್ರಸಂಗ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಜನಮನ
      • ರಂಗದೊಳಗಿಂದ
      • ಶಂಬೂಕ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಸಂಪಾದಕೀಯ
  4. ಊಟ ಕೌರವರಲ್ಲಿ, ಪಕ್ಷ ಪಾಂಡವರಲ್ಲಿ!

ಊಟ ಕೌರವರಲ್ಲಿ, ಪಕ್ಷ ಪಾಂಡವರಲ್ಲಿ!

ವಾರ್ತಾಭಾರತಿವಾರ್ತಾಭಾರತಿ26 Oct 2024 7:14 AM IST
share
ಊಟ ಕೌರವರಲ್ಲಿ, ಪಕ್ಷ ಪಾಂಡವರಲ್ಲಿ!

ಅಧಿಕಾರದ ದುರಾಸೆಗಾಗಿ ಆಪರೇಷನ್ ಕಮಲಕ್ಕೆ ಬಲಿಯಾಗಿ ಬಿಜೆಪಿಗೆ ಸೇರ್ಪಡೆಗೊಂಡಿದ್ದ ಸಿ. ಪಿ. ಯೋಗೇಶ್ವರ್ ಇದೀಗ ದಿಢೀರ್ ಕಾಂಗ್ರೆಸ್‌ಗೆ ಪಕ್ಷಾಂತರಗೊಂಡಿರುವುದು ಚರ್ಚೆಗೆ ಕಾರಣವಾಗಿದೆ. ಈವರೆಗೆ ಬಿಜೆಪಿಯ ಸಿದ್ಧಾಂತವನ್ನು ಒಪ್ಪಿಕೊಂಡಿದ್ದ ಯೋಗೇಶ್ವರ್ ಅವರನ್ನು ಕಾಂಗ್ರೆಸ್ ಪಕ್ಷ ಸ್ವೀಕರಿಸಿರುವುದು ಎಷ್ಟು ಸರಿ? ಎಂದು ಕೆಲವರು ಪ್ರಶ್ನಿಸುತ್ತಿದ್ದಾರೆ. ಆದರೆ ಯೋಗೇಶ್ವರ್ ಅವರ ರಾಜಕೀಯ ಹೆಜ್ಜೆಗುರುತುಗಳನ್ನು ಗಮನಿಸಿದರೆ, ಅವರು ಅಧಿಕಾರದ ಬೆನ್ನು ಹತ್ತಿ ರಾಜಕೀಯ ನಡೆಸಿದವರೇ ಹೊರತು, ಯಾವುದೇ ಸಿದ್ಧಾಂತಕ್ಕೆ ಬದ್ದರಾಗಿ ರಾಜಕೀಯಕ್ಕೆ ನಡೆಸಿದವರಲ್ಲ. ಅಧಿಕಾರದಲ್ಲಿ ಪಾಲು ಪಡೆಯಲು ಅವರು ಬಿಜೆಪಿಗೆ ಪಕ್ಷಾಂತರವಾಗಿದ್ದರೇ ಹೊರತು, ಬಿಜೆಪಿ ಸಿದ್ಧಾಂತವನ್ನು ಅವರು ಎಂದಿಗೂ ಮೈಗೆ ಹಚ್ಚಿಕೊಂಡವರಲ್ಲ ಮತ್ತು ಇದೀಗ ಕಾಂಗ್ರೆಸ್ ಸೇರಿರುವುದು ಕಾಂಗ್ರೆಸ್‌ನ ಜಾತ್ಯತೀತ ಸಿದ್ಧಾಂತದ ಮೇಲಿನ ಪ್ರೀತಿಯಿಂದಲೂ ಅಲ್ಲ. ಕಾಂಗ್ರೆಸ್‌ಗೆ ಪಕ್ಷಾಂತರ ಮಾಡುವುದರಿಂದ ಸದ್ಯಕ್ಕೆ ಹೆಚ್ಚು ಲಾಭವಿದೆ ಎನ್ನುವುದನ್ನು ಕಂಡುಕೊಂಡು ಅವರು ದಿಢೀರ್ ನಿರ್ಧಾರಕ್ಕೆ ಬಂದಿದ್ದಾರೆ. ಭವಿಷ್ಯದಲ್ಲಿ ಮತ್ತೆ ಬಿಜೆಪಿಗೆ ಪಕ್ಷಾಂತರ ಮಾಡಿದರೂ ಅದರಲ್ಲಿ ಅಚ್ಚರಿಯೇನೂ ಇಲ್ಲ. ಅವರದೇನಿದ್ದರೂ ಅಧಿಕಾರ ಕೇಂದ್ರಿತ ರಾಜಕೀಯವಾಗಿದೆ. ಇದನ್ನು ಸಮಯ ಸಾಧಕ ರಾಜಕೀಯ ಎಂದೂ ಧಾರಾಳವಾಗಿ ಕರೆಯಬಹುದಾಗಿದೆ. ಅದರ ಬಗ್ಗೆಯೂ ಯೋಗೇಶ್ವರ್ ಯಾವತ್ತೂ ತಲೆಕೆಡಿಸಿಕೊಂಡವರಲ್ಲ.

ಆದರೆ ಕಾಂಗ್ರೆಸ್‌ನಲ್ಲಿದ್ದುಕೊಂಡೇ ಸಂಘಪರಿವಾರ ಮತ್ತು ಆರೆಸ್ಸೆಸ್ ಜೊತೆಗೆ ಯಾವ ಲಜ್ಜೆಯೂ ಇಲ್ಲದೆ ಕೈಜೋಡಿಸಿಕೊಂಡಿರುವ ಕಾಂಗ್ರೆಸ್‌ನ ನಾಯಕರ ಬಗ್ಗೆ ಕಾಂಗ್ರೆಸ್ ವರಿಷ್ಠರು ಯಾಕೆ ತಲೆಕೆಡಿಸಿಕೊಂಡಿಲ್ಲ ಎನ್ನುವುದು ಮಾತ್ರ ಚೋದ್ಯವಾಗಿಯೇ ಉಳಿದಿದೆ. ಹೀಗೆ ಮುಂದುವರಿದರೆ, ರಾಜ್ಯ ಕಾಂಗ್ರೆಸ್ ಆರೆಸ್ಸೆಸ್‌ನ ಇನ್ನೊಂದು ಅಧಿಕೃತ ರಾಜಕೀ ಯ ಘಟಕವಾಗಿ ರೂಪಾಂತರ ಹೊಂದುವ ದಿನ ದೂರವಿಲ್ಲ. ಬಿಜೆಪಿಯಲ್ಲಿ ಅಧಿಕಾರ ಸಿಕ್ಕಿಲ್ಲ ಎನ್ನುವ ಒಂದೇ ಕಾರಣಕ್ಕಾಗಿ ಕಾಂಗ್ರೆಸ್‌ಗೆ ಪಕ್ಷಾಂತರವಾಗಿ, ಕಾಂಗ್ರೆಸ್‌ನೊಳಗಿದ್ದು ಅಲ್ಲಿನ ಸಕಲ ಅಧಿಕಾರವನ್ನು ಅನುಭವಿಸುತ್ತಾ ಆರೆಸ್ಸೆಸ್ ಮತ್ತು ಸಂಘಪರಿವಾರಕ್ಕಾಗಿ ದುಡಿಯುವ ನಾಯಕರನ್ನು ಕಾಂಗ್ರೆಸ್ ವರಿಷ್ಠರೇ ತಮ್ಮ ಮಡಿಲಲ್ಲಿಟ್ಟು ಪೊರೆಯುತ್ತಿದ್ದಾರೆ. ಪರಿಣಾಮವಾಗಿ, ಕಾಂಗ್ರೆಸ್ ಸರಕಾರ ಅಧಿಕಾರದಲ್ಲಿದ್ದರೂ, ರಾಜ್ಯದಲ್ಲಿ ಸಂಘಪರಿವಾರದ ಅಟ್ಟಹಾಸಕ್ಕೆ ಕಡಿವಾಣ ತೊಡಿಸುವಲ್ಲಿ ಸರಕಾರ ವಿಫಲವಾಗುತ್ತಿದೆ. ಕರಾವಳಿಯಲ್ಲಿ ಸಂಘಪರಿವಾರ ಯಾವ ಭಯವೂ ಇಲ್ಲದೆ ಕೋಮು ಉದ್ದಿಗ್ಧಕಾರಿ ಕೃತ್ಯಗಳಲ್ಲಿ ತೊಡಗಿವೆ. ಯಾಕೆಂದರೆ, ಕಾಂಗ್ರೆಸ್‌ನೊಳಗಿರುವ ಆರೆಸ್ಸೆಸ್ ಚಿಂತನೆಗಳ ಹಾಲುಂಡು ಬೆಳೆದ ವಿಷದ ಹಾವುಗಳು ಇವರಿಗೆ ಬಹಿರಂಗವಾಗಿ ಧೈರ್ಯ ತುಂಬುತ್ತಿವೆ. ಇದಕ್ಕೆ ಅತ್ಯುತ್ತಮ ಉದಾಹರಣೆಯಾಗಿ ಪುತ್ತೂರಿನಲ್ಲಿ ಕಾಂಗ್ರೆಸ್ ಮುಖಂಡರು ಬಹಿರಂಗವಾಗಿ ತಮ್ಮ ನಿಷ್ಠೆಯನ್ನು ಸಂಘಪರಿವಾರ ನಾಯಕರಿಗೆ ಅರ್ಪಿಸಿ, ಕಾಂಗ್ರೆಸ್ ವರಿಷ್ಠರಿಗೆ ಸಾರ್ವಜನಿಕವಾಗಿ ಸವಾಲು ಹಾಕಿದ್ದಾರೆ. ಘಟನೆ ನಡೆದು ಮೂರು ದಿನ ಕಳೆದರೂ ಈ ಬಗ್ಗೆ ಕಾಂಗ್ರೆಸ್ ನಾಯಕರೆಂದು ಕರೆಸಿಕೊಂಡವರು ಸಣ್ಣ ಆಕ್ಷೇಪವನ್ನೂ ವ್ಯಕ್ತಪಡಿಸಿಲ್ಲ. ಇವರ ಮೌನ, ಕಾಂಗ್ರೆಸ್‌ನ ಇತರ ನಾಯಕರು ಆರೆಸೆಸ್‌ನ ಸೋದರ ಸಂಘಟನೆಗಳ ಜೊತೆಗೆ ಅಧಿಕೃತವಾಗಿ ಗುರುತಿಸಿಕೊಳ್ಳಲು ಪರೋಕ್ಷ ಕುಮ್ಮಕ್ಕನ್ನು ನೀಡಿದೆ.

ಪುತ್ತೂರು ಒಂದು ಕಾಲದಲ್ಲಿ ಶಿವರಾಮಕಾರಂತ, ಮೊಳಹಳ್ಳಿ ಶಿವರಾಯರಂತಹ ಸಾಹಿತಿಗಳು, ಸಹಕಾರಿಗಳಿಗಾಗಿ ರಾಜ್ಯಮಟ್ಟದಲ್ಲಿ ಗುರುತಿಸಲ್ಪಡುತ್ತಿತ್ತು. ಆದರೆ ಇಂದು ಸಂಘಪರಿವಾರದ ಕೃತ್ಯಗಳ ಕಾರಣದಿಂದ ಪುತ್ತೂರು ಗುರುತಿಸಲ್ಪಡುತ್ತಿರುವುದು ಕೋಮು ಉದ್ದಿಗ್ಧಕಾರಿ ಘಟನೆಗಳಿಗಾಗಿ, ಪುತ್ತೂರು ಮಾತ್ರವಲ್ಲ, ಇಡೀ ದಕ್ಷಿಣ ಕನ್ನಡ ಜಿಲ್ಲೆಯ ಹಿರಿಮೆಯನ್ನು ತಮ್ಮ ಕೋಮು ದುಷ್ಕೃತ್ಯಗಳಿಂದ ಮಣ್ಣು ಪಾಲು ಮಾಡಿದ ಹಿರಿಮೆ ಸಂಘಪರಿವಾರ ಸಂಘಟನೆಗಳಿಗೆ ಸಲ್ಲಬೇಕು. ಕಳೆದ ಬುಧವಾರ ಇದೇ ವಿಶ್ವ ಹಿಂದೂ ಪರಿಷತ್‌ ನೂತನ ಜಿಲ್ಲಾ ಕಾರ್ಯಾಲಯದ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಕಾಂಗ್ರೆಸ್‌ನ ಪುತ್ತೂರು ಶಾಸಕರಾಗಿರುವ ಅಶೋಕ್ ಕುಮಾರ್ ರೈ ಮತ್ತು ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಸಂಭ್ರಮದಿಂದ ಭಾಗವಹಿಸಿದರು ಮಾತ್ರವಲ್ಲ, ಸಾರ್ವಜನಿಕ ಕಾರ್ಯಕ್ರಮದಲ್ಲಿ ಶಾಸಕ ಅಶೋಕ್ ಕುಮಾರ್ ರೈ ಅವರು ವಿಶ್ವ ಹಿಂದೂ ಪರಿಷತ್‌ನ ನಾಯಕ ಗೋಪಾಲ್ ಜೀ ಅವರ ಪಾದಾರವಿಂದಕ್ಕೆ ಬಿದ್ದು ಕೃತಾರ್ಥರಾದರು. ವಿಶ್ವ ಹಿಂದೂ ಪರಿಷತ್ ಸಮಗ್ರ ಹಿಂದೂ ಧರ್ಮವನ್ನು ಪ್ರತಿನಿಧಿಸುವುದಿಲ್ಲ ಎನ್ನುವುದು ಈ ಕಾಂಗ್ರೆಸ್ ನಾಯಕರಿಗೆ ತಿಳಿಯದಿರುವುದೇನೂ ಅಲ್ಲ. ಅದು ಯಾವ ರೀತಿಯಲ್ಲೂ ಧಾರ್ಮಿಕ ಸಂಘಟನೆಯಲ್ಲ, ಬದಲಿಗೆ ಧಾರ್ಮಿಕ ಮುಖವಾಡವನ್ನು ಹಾಕಿರುವ ರಾಜಕೀಯ ಸಂಘಟನೆ. ಚುನಾವಣೆಯ ಸಂದರ್ಭದಲ್ಲಿ ಅದು ಯಾವ ಪಕ್ಷಕ್ಕಾಗಿ ದುಡಿಯುತ್ತದೆ ಎನ್ನುವುದು ಪುತ್ತೂರಿನ ಈ ಕಾಂಗ್ರೆಸ್‌ ನಾಯಕರಿಗೆ ತಿಳಿಯದ ವಿಷಯವೇನೂ ಅಲ್ಲ. ಹಿಂದೂ ಸಮಾಜೋತ್ಸವದ ಹೆಸರಿನಲ್ಲಿ ಈ ಸಂಘಟನೆಗಳು ಹಿಂದೂಧರ್ಮಕ್ಕೆ ಅಪಚಾರವೆಸಗಿದ್ದೇ ಹೆಚ್ಚು. ಹಿಂದೂಧರ್ಮದ ಹಿರಿಮೆ, ಮೌಲ್ಯಗಳನ್ನು ಸಮಾಜಕ್ಕೆ ಪಸರಿಸುವ ಬದಲು, ಇತರ ಧರ್ಮಗಳ ವಿರುದ್ಧ ದ್ವೇಷಗಳನ್ನು ಬಿತ್ತುವುದು ಈ ಸಂಘಟನೆಗಳ ಅಜೆಂಡಾ ಆಗಿದೆ. ವಿಎಚ್ ಪಿಯ ಹಲವು ಕಾರ್ಯಕರ್ತರ ಮೇಲೆ ಕ್ರಿಮಿನಲ್ ಮೊಕದ್ದಮೆಗಳಿವೆ. ಇದೀಗ ಪುತ್ತೂರಿನ ಕಾಂಗ್ರೆಸ್ ಶಾಸಕರೇ ಹೋಗಿ ವಿಎಚ್‌ಪಿ ನಾಯಕರ ಪಾದ ಬುಡಕ್ಕೆ ಬಿದ್ದಿರುವುದು ಪರೋಕ್ಷವಾಗಿ ಅವರ ಎಲ್ಲ ಕ್ರಿಮಿನಲ್ ಪ್ರಕರಣಗಳನ್ನು ಕಾಂಗ್ರೆಸ್ ಪಕ್ಷವೇ ಸಮರ್ಥಿಸಿದಂತಾಗಿದೆ. ಮಾನಸಿಕವಾಗಿ ನಾವು ಆರೆಸ್ಸೆಸ್ ಮತ್ತು ಸಂಘಪರಿವಾರದ ಸಿದ್ದಾಂತವನ್ನು ಬಿಡಲು ಸಿದ್ಧವಿಲ್ಲ ಎನ್ನುವುದನ್ನು ಈ ಹಾಲಿ ಮತ್ತು ಮಾಜಿ ಶಾಸಕರು ವರಿಷ್ಠರಿಗೆ ಬಹಿರಂಗವಾಗಿ ಸ್ಪಷ್ಟಪಡಿಸಿದಂತಾಗಿದೆ. ಸಂಘಪರಿವಾರದ ಪಾದ ಬುಡಕ್ಕೆ ಬೀಳುವುದೆಂದರೆ, ಪರೋಕ್ಷವಾಗಿ ಕಾಂಗ್ರೆಸ್‌ನ ಜಾತ್ಯತೀ ಮೌಲ್ಯಗಳನ್ನು ತಿರಸ್ಕರಿಸುವುದೆಂದೇ ಅರ್ಥ. ಆದರೆ ಕಾಂಗ್ರೆಸ್‌ನ ಮುಖಂಡರು ಮಾತ್ರ

ಅರ್ಥವಾಗದವರಂತೆ ನಟಿಸುತ್ತಿದ್ದಾರೆ. ಬರೇ ಅಧಿಕಾರದ ಲಾಲಸೆಯಿಂದ ಕಾಂಗ್ರೆಸ್‌ಗೆ ಸೇರ್ಪಡೆಯಾಗುವ ಬಿಜೆಪಿ ನಾಯಕರು ಒಂದೆಡೆಯಾದರೆ, 'ನಾವು ಆರೆಸ್ಸೆಸ್‌ನ ಹಾಲುಂಡು ಬೆಳೆದವರು' ಎಂದು ಬಹಿರಂಗವಾಗಿಯೇ ಘೋಷಿಸಿಕೊಂಡು ಕಾಂಗ್ರೆಸ್ ಸೇರುವ ಗುಂಪು ಇನ್ನೊಂದೆಡೆ. ಇವರು ಬಿಜೆಪಿ ಬಿಟ್ಟರೂ ಆರೆಸ್ಸೆಸ್‌ನ, ಸಂಘಪರಿವಾರದ ದ್ವೇಷ ಸಿದ್ದಾಂತದ ವಿಷದ ಹಲ್ಲನ್ನು ಒಳಗೇ ಇಟ್ಟುಕೊಂಡಿರುತ್ತಾರೆ. ಇದು ಗೊತ್ತಿದ್ದೂ ಇವರನ್ನು ಕಾಂಗ್ರೆಸ್ ಪಕ್ಷ ತನ್ನ ಮಡಿಲಲ್ಲಿಟ್ಟು ಹಾಲೆರೆಯುತ್ತಿರುವುದು ವಿಪರ್ಯಾಸವಾಗಿದೆ. ಕಾಂಗ್ರೆಸ್‌ನೊಳಗಿರುವ ಇಂತಹ ಹಲವು ಮಾಜಿ ಬಿಜೆಪಿ ನಾಯಕರ ಮೂಲಕವೇ ಸಂಘಪರಿವಾರ ತನ್ನ ಬಹುತೇಕ ಕಾರ್ಯಗಳನ್ನು ಸಾಧಿಸಿಕೊಳ್ಳುತ್ತಿವೆ. ಒಂದೆಡೆ ರಾಹುಲ್‌ ಗಾಂಧಿಯವರು ಆರೆಸ್ಸೆಸ್‌ ವಿರುದ್ಧ ಬಹಿರಂಗ ಟೀಕೆಗಳ ಸುರಿಮಳೆಯನ್ನು ಹರಿಸುತ್ತಿರುವಾಗ, ಇತ್ತ ರಾಜ್ಯದಲ್ಲಿ ಆರೆಸ್ಸೆಸನ್ನು ಎದೆಯೊಳಗಿಟ್ಟುಕೊಂಡು, ಕಾಂಗ್ರೆಸ್‌ನ ಜಾತ್ಯತೀತ ಮೌಲ್ಯಗಳನ್ನು ಒಳಗಿಂದೊಳಗೆ ದ್ವೇಷಿಸುತ್ತಾ ಅಥವಾ ಆ ಬಗ್ಗೆ ಕೀಳರಿಮೆ ಪಡುತ್ತಾ ಸಂಘಪರಿವಾರದ

ಜೊತೆಗೆ ಅನೈತಿಕ ಸಂಬಂಧ ಬೆಸೆದುಕೊಂಡ ನಾಯಕರ ಸಂಖ್ಯೆ ಬೆಳೆಯುತ್ತಿದೆ. ನಿರ್ಣಾಯಕ ಸಂದರ್ಭಗಳಲ್ಲಿ ಇವರು ಕಾಂಗ್ರೆಸ್‌ನ ಬೆನ್ನಿಗೆ ಚೂರಿ ಹಾಕುತ್ತಲೇ ಬಂದಿದ್ದಾರೆ. 'ಊಟ ಕೌರವರಲ್ಲಿ, ಪಕ್ಷ ಪಾಂಡವರಲ್ಲಿ' ಎನ್ನುವ ಗಾದೆ ಇವರಿಗೆ ಸರಿಯಾಗಿಯೇ ಅನ್ವಯಿಸುತ್ತದೆ. ಕಾಂಗ್ರೆಸ್‌ನ ಬಟ್ಟಲಲ್ಲಿ ಉಂಡು, ಆರೆಸ್ಸೆಸ್, ಸಂಘಪರಿವಾರದ ಪರವಾಗಿ ಆಯುಧ ಹಿಡಿಯುವ ಈ ನಾಯಕರನ್ನು ಗುರುತಿಸಿ ಅವರ ಸ್ಥಾನವನ್ನು ವರಿಷ್ಠರು ಖಚಿತ ಪಡಿಸದೇ ಇದ್ದಲ್ಲಿ, ಕಾಂಗ್ರೆಸ್ ಹೆಸರಿನಲ್ಲಿ ಈ ನಾಡನ್ನು ಸಂಘಪರಿವಾರ ಅಧಿಕೃತವಾಗಿ ಆಳುವ ದಿನ ದೂರವಿಲ್ಲ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X