ಸಭಾಪತಿ ಕುರ್ಚಿಗೆ ಗೌರವ ಇಲ್ಲ: ಬಸವರಾಜ್ ಹೊರಟ್ಟಿ ಬೇಸರ
ಶಿವಮೊಗ್ಗ: ಇತ್ತೀಚಿನ ದಿನಗಳಲ್ಲಿ ಅಧಿವೇಶನ ಅರ್ಥ ಕಳೆದುಕೊಳ್ಳುತ್ತಿದೆ. ಈ ಹಿಂದೆ ಅಧಿವೇಶನ ಚೆನ್ನಾಗಿ ನಡೆಯುತಿತ್ತು. ಸಭಾಪತಿ ಕುರ್ಚಿಗೆ ಗೌರವ ಇತ್ತು. ಆದರೆ ಈಗ ಸಭಾಪತಿ ಕುರ್ಚಿಗೆ ಗೌರವ ಇಲ್ಲ ಎಂದು ವಿಧಾನಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಬೇಸರ ಹೊರಹಾಕಿದರು.
ಸೊರಬದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಸನ ಸಭೆಗಳು ವಿಷಯಾಧಾರಿತವಾಗಿ ನಡೆಯುತ್ತಿಲ್ಲ. ಇವರು ಅವರನ್ನು ಬೈಯುವುದು, ಅವರು ಇವರನ್ನು ಬೈಯುವುದೇ ಆಗ್ತಿದೆ. ನಾನು ಸರಿಪಡಿಸಲು ಬಹಳ ಪ್ರಯತ್ನ ಮಾಡಿದ್ದೇನೆ. ಆ ಪ್ರಯತ್ನ ಫಲಕಾರಿಯಾಗಿಲ್ಲ. ಈ ಬಗ್ಗೆ ನನಗು ಬೇಸರ ಇದೆ. ರಾಜೀನಾಮೆ ಕೊಟ್ಟು ಹೋಗೋದು ಒಳ್ಳೆಯದು ಅಂತಾ ಒಂದು ಬಾರಿ ಹೇಳಿದ್ದೆ ಎಂದರು.
ಹೊಸ ಶಾಸಕರಿಗೆ ಕಾರ್ಯಾಗಾರ ಅವಶ್ಯಕತೆ ಇದೆ. ವ್ಯವಸ್ಥೆ ಹಾಳಾಗಿ ಹೋಗಿದೆ. ವಿಧಾನ ಪರಿಷತ್ ನಲ್ಲಿ ಖಾದ್ರಿ ಶಾಮಣ್ಣ, ಮಲ್ಲಿಕಾರ್ಜುನ, ಮನ್ಸೂರು ರಂತಹ ದೊಡ್ಡ ದೊಡ್ಡ ನಾಯಕರು ಇರುತ್ತಿದ್ದರು. ಚುನಾವಣೆಯಲ್ಲಿ ಸೋತ ಎಂಪಿ, ಎಂಎಲ್ ಎ, ದೊಡ್ಡ ದೊಡ್ಡ ರಾಜಕಾರಣಿನಿಗಳು ಪರಿಷತ್ ಗೆ ಬರುತ್ತಿದ್ದಾರೆ. ಸುಧಾರಣೆ ಆಗುವ ಲಕ್ಷಣ ಕಂಡಿಲ್ಲ, ಪ್ರಯತ್ನ ಮಾಡ್ತೇವೆ ಎಂದರು.