ಫೇಸ್ಬುಕ್ನಲ್ಲಿ ನಕಲಿ ಖಾತೆ ಸೃಷ್ಟಿಸಿ ವಂಚನೆ: ತೀರ್ಥಹಳ್ಳಿ ಮೂಲದ ಯುವಕನ ಬಂಧನ
ಮಹಿಳೆಯ ಹೆಸರಿನಲ್ಲಿ ಖಾತೆ ಸೃಷ್ಟಿಸಿ 7.25 ಲಕ್ಷ ರೂ. ವಂಚಿಸಿದ ಆರೋಪಿ
ಸಾಂದರ್ಭಿಕ ಚಿತ್ರ
ತೀರ್ಥಹಳ್ಳಿ: ಫೇಸ್ಬುಕ್ ನಲ್ಲಿ ತಾನು ಹುಡುಗಿ ಎಂಬಂತೆ ಬಿಂಬಿಸಿಕೊಂಡಿದ್ದ ತೀರ್ಥಹಳ್ಳಿಯ ಯುವಕನೊಬ್ಬ ತುಮಕೂರು ಜಿಲ್ಲೆಯ ಶಿರಾ ಗೇಟ್ ನ ಯುವಕನೊಬ್ಬನಿಗೆ 7.25 ಲಕ್ಷ ರೂ. ವಂಚಿಸಿದ್ದಾನೆ.
ತೀರ್ಥಹಳ್ಳಿ ಯುವಕನ ವಿರುದ್ಧ ದಾಖಲಾದ ದೂರಿನನ್ವಯ ತುಮಕೂರು ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಸದ್ಯ ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ತೀರ್ಥಹಳ್ಳಿಯ 21 ವರ್ಷದ ಆರೋಪಿ, ಹುಡುಗಿ ಹೆಸರಲ್ಲಿ ಪ್ರೊಫೈಲ್ ಸೃಷ್ಟಿಸಿ, ಸಂತ್ರಸ್ತರನ್ನು ಪರಿಚಯ ಮಾಡಿಕೊಳ್ಳುತ್ತಾನೆ. ಆನಂತರ ಅವರೊಂದಿಗೆ ವಾಟ್ಸ್ಯಾಪ್ ಸಂಪರ್ಕದ ಮೂಲಕ ಇಲ್ಲದ ಸಲಿಗೆಯ ಮಾತನಾಡುತ್ತಾನೆ. ಬಳಿಕ ಗೂಗಲ್ ಪೇ, ಪೋನ್ ಪೇ ಮೂಲಕ ಹಣ ಪಡೆದು ವಂಚಿಸಿದ್ದಾನೆ.
ಪುತ್ರ ಹಣ ಕಳೆದುಕೊಂಡು ಖಿನ್ನತೆಗೆ ಒಳಗಾಗಿರುವುದನ್ನು ಗಮನಿಸಿದ ತಂದೆ, ಈ ಕುರಿತು ಕಳೆದ ಆಗಸ್ಟ್ 15 ರಂದು ಸೆನ್ ಪೊಲೀಸ್ ಠಾಣೆಗೆ ತುಮಕೂರಿನಲ್ಲಿ ದೂರು ನೀಡಿದ್ದರು. ಅದರ ಅನ್ವಯ ಪೊಲೀಸರು ಇದೀಗ ಓರ್ವ ಆರೋಪಿಯನ್ನು ಬಂಧಿಸಿದ್ದಾರೆ.
Next Story