ಸೊರಬ, ಶಿರಾಳಕೊಪ್ಪ, ಆನವಟ್ಟಿಗೆ ಕುಡಿಯುವ ನೀರು ಯೋಜನೆ : ಮಧುಬಂಗಾರಪ್ಪ
ಶಿವಮೊಗ್ಗ: ಶರಾವತಿ ನದಿಯಿಂದ ಸೊರಬ, ಶಿರಾಳಕೊಪ್ಪ ಹಾಗೂ ಆನವಟ್ಟಿ ನಗರಕ್ಕೆ ಕುಡಿಯುವ ನೀರು ಕಲ್ಪಿಸುವ ಯೋಜನೆ ಜಾರಿಗೆ ಚಿಂತನೆ ನಡೆಸಲಾಗಿದೆ. ಈ ಯೋಜನೆಗೆ 600 ಕೋಟಿ ರೂ ಬಿಡುಗಡೆ ಆಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಮಧುಬಂಗಾರಪ್ಪ ಹೇಳೀದರು.
ಸೊರಬದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಈ ಯೋಜನೆ ಜಾರಿಯಿಂದ ಇಲ್ಲಿನ ಜನರ ಕುಡಿಯುವ ನೀರಿನ ಸಮಸ್ಯೆ ಬಗೆಹರಿಯಲಿದೆ. ಈ ಬಗ್ಗೆಯ ಸಂಪೂರ್ಣ ಮಾಹಿತಿ ಮುಂದಿನ ದಿನದಲ್ಲಿ ನೀಡಲಾಗುವುದು ಎಂದು ತಿಳಿಸಿದರು
ಗೃಹ ಸಚಿವ ಜಿ.ಪರಮೇಶ್ವರ್ ಅವರು ಸೊರಬಕ್ಕೆ ಬರಬೇಕಿತ್ತು. ಆದರೆ, ಹವಾಮಾನ ವೈಫರಿತ್ಯದಿಂದ ವಿಮಾನ ಲ್ಯಾಂಡ್ ಆಗದೆ ವಾಪಸ್ ಹಿಂದಿರುಗಿದೆ. ಕ್ಷೇತ್ರದ ಪ್ರಗತಿ ಪರಿಶೀಲನೆ ನಡೆಸಿದ್ದೆನೆ. ಇಲ್ಲಿ ಡೆಂಗಿ ಹೆಚ್ಚಾಗಿದೆ. ಅಲ್ಲದೆ, ಮಳೆಯ ಮಾಹಿತಿ ಕೂಡ ಪಡೆದುಕೊಂಡಿದ್ದೆನೆ. ಮಳೆಯಿಂದ ನಮ್ಮಲ್ಲಿ ಯಾವುದೇ ಅನಾಹುತ ಸಂಭವಿಸಿಲ್ಲ ಎಂದರು.
ಪ್ರಹ್ಲಾದ್ ಜೋಶಿ ಕಾನೂನು ಹೋರಾಟ ನಡೆಸಲಿ :
ಮೂಡಾ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ನೇರವಾಗಿ ಭಾಗಿಯಾಗಿದ್ದಾರೆ. ಅವರು ರಾಜೀನಾಮೆ ನೀಡಬೇಕೆಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಆಗ್ರಹಿಸಿದಕ್ಕೆ ಸಚಿವ ಮಧು ಬಂಗಾರಪ್ಪ ವಿರೋಧ ವ್ಯಕ್ತಪಡಿಸಿದರು.
ಪ್ರಹ್ಲಾದ್ ಜೋಶಿ ಹೇಳಿಕೆಗೆ ನಾನು ಉತ್ತರ ಕೊಡಲ್ಲ. ಸಿದ್ದರಾಮಯ್ಯ ಅವರೇ ಸ್ಪಷ್ಟನೆ ನೀಡಿದ್ದಾರೆ. ಕಾನೂನು ಇದೆ ಹೋರಾಟ ನಡೆಸಲಿ ಎಂದರು.