ಖ್ಯಾತ ಫೋಟೋ ಜರ್ನಲಿಸ್ಟ್ ಶಿವಮೊಗ್ಗ ನಂದನ್ ನಿಧನ
ಶಿವಮೊಗ್ಗ: ಖ್ಯಾತ ಫೋಟೋ ಜರ್ನಲಿಸ್ಟ್, ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಯ ಶಿವಮೊಗ್ಗ ನಂದನ್ (57) ರವಿವಾರ ಬೆಳಗಿನ ಜಾವ ಹೃದಯಾಘಾತದಿಂದ ನಿಧನರಾಗಿದ್ದಾರೆ.
1999ರಿಂದ ಶಿವಮೊಗ್ಗದ ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆಯ ಛಾಯಾಗ್ರಾಹಕರಾಗಿ ಕೆಲಸ ನಿರ್ವಹಿಸುತ್ತಿದ್ದ ನಂದನ್, ಶಿವಮೊಗ್ಗ ನಂದನ್ ಎಂದೇ ಹೆಸರು ಪಡೆದಿದ್ದರು. ಛಾಯಾಗ್ರಹಣದಲ್ಲಿ ಸಾಕಷ್ಟು ಪ್ರಯೋಗಗಳ ಮೂಲಕ ಗಮನ ಸೆಳೆದಿದ್ದ ನಂದನ್ ಅವರು ತೆಗೆದ ಹಲವು ಛಾಯಾಚಿತ್ರಗಳು ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದಿದ್ದವು.
ರೈಲ್ವೇ ನಿಲ್ದಾಣದ ಬ್ಲಡ್ ಬ್ಯಾಂಕ್ ಬಳಿಯಿರುವ ಅವರ ಮನೆಯಲ್ಲಿ ಪಾರ್ಥಿವ ಶರೀರದ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.
ಮೃತರು ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿಯನ್ನು ಅಗಲಿದ್ದಾರೆ.
Next Story