ʼಸ್ಮಾರ್ಟ್ ಸ್ಕಾಲರ್ ಶಿಪ್ʼ ಪರೀಕ್ಷೆಯಲ್ಲಿ ರಿಪ್ಪನ್ ಪೇಟೆ ಮದ್ರಸದ ವಿದ್ಯಾರ್ಥಿಗಳ ವಿಶೇಷ ಸಾಧನೆ

ಶಿವಮೊಗ್ಗ : ʼಇಸ್ಲಾಮಿಕ್ ಎಜುಕೇಶನಲ್ ಬೋರ್ಡ್ ಆಫ್ ಇಂಡಿಯಾʼ ದೇಶ ವಿದೇಶಗಳಲ್ಲಿ ಏಕ ಕಾಲದಲ್ಲಿ ನ.30ರ, 2024ರಂದು ನಡೆಸಿದ ಸ್ಮಾರ್ಟ್ ಸ್ಕಾಲರ್ ಶಿಪ್ ಮುಖ್ಯ ಪರೀಕ್ಷೆಯಲ್ಲಿ ರಿಪ್ಪನ್ ಪೇಟೆ ತಅಝೀಝುಲ್ ಇಸ್ಲಾಮ್ ಮದ್ರಸದ ವಿದ್ಯಾರ್ಥಿಗಳು ವಿಶೇಷ ಸಾಧನೆ ಮಾಡಿದ್ದಾರೆ
5ನೇ ತರಗತಿಯ ಫಾತಿಮಾ ಮಿಸ್ಬಾಹ್ ರಾಜ್ಯ ಮಟ್ಟದಲ್ಲಿ ದ್ವಿತೀಯ ಸ್ಥಾನ ಹಾಗೂ 6 ನೇ ತರಗತಿಯ ಮುಹಮ್ಮದ್ ಜುನೈದ್ ದ್ವಿತೀಯ ಸ್ಥಾನ ಪಡೆದು ಮದ್ರಸಕ್ಕೆ, ನಾಡಿಗೆ, ರಾಜ್ಯಕ್ಕೆ ಕೀರ್ತಿಯನ್ನು ತಂದಿದ್ದಾರೆ.
ವಿದ್ಯಾರ್ಥಿಗಳ ಈ ಸಾಧನೆಗೆ ಅಧ್ಯಾಪಕ ವೃಂದ , ಆಡಳಿತ ಸಮಿತಿ , ಎಮ್.ಜೆ.ಎಮ್, ಎಸ್.ವೈ.ಎಸ್, ಎಸ್.ಎಸ್.ಎಫ್, ಎಸ್.ಬಿ.ಎಸ್ ಹಾಗೂ ರಿಪ್ಪನ್ ಪೇಟೆಯ ಜಮಾಅತ್ ಬಾಂಧವರು ಅಭಿನಂದನೆ ಸಲ್ಲಿಸಿದ್ದಾರೆ
Next Story