ಶಿವಮೊಗ್ಗ: ಇಬ್ಬರಲ್ಲಿ ಮಂಗನಕಾಯಿಲೆ ಪತ್ತೆ
ಸಾಂದರ್ಭಿಕ ಚಿತ್ರ (PTI)
ಶಿವಮೊಗ್ಗ, ಜ.14: ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಯಲ್ಲಿ ಇಬ್ಬರಿಗೆ ಮಂಗನ ಕಾಯಿಲೆ ಅಥವಾ ಕ್ಯಾಸನೂರು ಫಾರೆಸ್ಟ್ ಡಿಸೀಸ್ (ಕೆಎಫ್ಡಿ) ಸೋಂಕು ತಗುಲಿರುವುದು ದೃಢಪಟ್ಟಿದೆ. ಅವರಿಬ್ಬರು ಮಣಿಪಾಲದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ.
ತೀರ್ಥಹಳ್ಳಿ ತಾಲೂಕಿನ ದೇವಂಗಿ ಭಾಗದ 63 ವರ್ಷದ ವ್ಯಕ್ತಿಗೆ ಹಾಗೂ ಚಿಕ್ಕಮಗಳೂರು ಬಾಳೆಹೊನ್ನೂರಿನ ಕಡಬಗೆರೆಯ 25 ವರ್ಷದ ಯುವಕನೋರ್ವನಲ್ಲಿ ಸೋಂಕು ಕಂಡುಬಂದಿದೆ. ಇದು ಈ ವರ್ಷದ ಮೊದಲ ಪ್ರಕರಣಗಳಾಗಿವೆ.
ಜಿಲ್ಲಾಡಳಿತಗಳು ಪಾಸಿಟಿವ್ ವರದಿಯನ್ನು ಬಿಡುಗಡೆಗೊಳಿಸಿ ಆ ಭಾಗದ ಸಾರ್ವಜನಿಕರನ್ನು ಎಚ್ಚರಿಸುವ ಕೆಲಸ ಮಾಡಬೇಕಿದೆ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
Next Story