ಟ್ವಿಟರ್ ಲೋಗೋ ಬದಲಿಸುವ ಸುಳಿವು ನೀಡಿದ ಎಲಾನ್ ಮಸ್ಕ್
ವಾಷಿಂಗ್ಟನ್: ಮೈಕ್ರೋಬ್ಲಾಗಿಂಗ್ ಪ್ಲಾಟ್‌ಫಾರ್ಮ್ ಟ್ವಿಟರ್ ಗೆ ಶೀಘ್ರದಲ್ಲೇ ಹೊಸ ಲೋಗೋವನ್ನು ಪಡೆಯಲಿದೆ. ಎಲಾನ್ ಮಸ್ಕ್ ಈ ಬಗ್ಗೆ ಟ್ವೀಟ್ ಮಾಡಿದ್ದು, ಟ್ವಿಟರ್ ಲೋಗೋವನ್ನು ಬದಲಾಯಿಸುವುದಾಗಿ ಘೋಷಿಸಿದ್ದಾರೆ.
"ಶೀಘ್ರದಲ್ಲೇ ನಾವು ಟ್ವಿಟರ್ ಬ್ರ್ಯಾಂಡ್‌ಗೆ ಮತ್ತು ಕ್ರಮೇಣ ಎಲ್ಲಾ ಪಕ್ಷಿಗಳಿಗೆ ವಿದಾಯ ಹೇಳುತ್ತೇವೆ." ಎಂದು ಎಲಾನ್ ಮಸ್ಕ್ ಟ್ವೀಟ್ ಮಾಡಿದ್ದಾರೆ. ಪ್ರಸ್ತುತ ಟ್ವಿಟರ್‌ನ ಲೋಗೋವಾಗಿ ಪಕ್ಷಿ ಇದೆ.
ಎಲಾನ್ ಮಸ್ಕ್ ಅವರ ಟ್ವೀಟ್‌ಗೆ ಪರ-ವಿರೋಧ ಚರ್ಚೆಗಳು ಆರಂಭವಾಗಿದೆ. ಹಲವು ಟ್ವಿಟರ್ ಬಳಕೆದಾರರು ಲೋಗೋ ಬದಲಾಯಿಸದಂತೆ ಸೂಚಿಸಿದ್ದಾರೆ.
Next Story