Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಈ ಹೊತ್ತಿನ ಹೊತ್ತಿಗೆ
      • ಜನಚರಿತೆ
      • ವಿಡಂಬನೆ
      • ಜನ ಜನಿತ
      • ರಂಗ ಪ್ರಸಂಗ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಜನಮನ
      • ರಂಗದೊಳಗಿಂದ
      • ಶಂಬೂಕ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಬಿಹಾರ-ಜಾರ್ಖಂಡ್ : ಬಿಜೆಪಿಯ ಗೆಲುವಿನ...

ಬಿಹಾರ-ಜಾರ್ಖಂಡ್ : ಬಿಜೆಪಿಯ ಗೆಲುವಿನ ಓಟಕ್ಕೆ ‘ಇಂಡಿಯಾ’ ಮೈತ್ರಿಕೂಟ ತಡೆಯೊಡ್ಡಲಿದೆಯೇ?

ಹರೀಶ್ ಎಚ್.ಕೆ.ಹರೀಶ್ ಎಚ್.ಕೆ.14 Jan 2024 10:30 AM IST
share
ಬಿಹಾರ-ಜಾರ್ಖಂಡ್ : ಬಿಜೆಪಿಯ ಗೆಲುವಿನ ಓಟಕ್ಕೆ ‘ಇಂಡಿಯಾ’ ಮೈತ್ರಿಕೂಟ ತಡೆಯೊಡ್ಡಲಿದೆಯೇ?
ಬಿಹಾರ ರಾಜ್ಯದಲ್ಲಿ ಈ ಬಾರಿ ಲೋಕಸಭಾ ಚುನಾವಣೆ ಜಾತಿ ಜನಗಣತಿ ವರದಿ ಹಿನ್ನೆಲೆಯಲ್ಲಿ ಹೆಚ್ಚು ಮಹತ್ವ ಪಡೆದಿದೆ. ಬದಲಾದ ಸಮೀಕರಣಕ್ಕೆ ಕಾರಣವಾಗಿರುವ ‘ಇಂಡಿಯಾ’ ಮೈತ್ರಿಕೂಟ ಬಿಜೆಪಿಗೆ ಎದುರಾಗಲಿರುವುದು ಮತ್ತೊಂದು ಪ್ರಮುಖ ಅಂಶ. ಜಾತಿ ಲೆಕ್ಕಾಚಾರ ಹೇಗೆ ಚುನಾವಣೆಯಲ್ಲಿ ಪರಿಣಾಮ ಬೀರಲಿದೆ ಎಂಬುದು ಕುತೂಹಲದ ವಿಷಯವಾಗಿದೆ. ಇನ್ನು ಜಾರ್ಖಂಡ್ನಲ್ಲಿ ಎಲ್ಲ ಪಕ್ಷಗಳೂ ಬುಡಕಟ್ಟು ಸಮುದಾಯಗಳ ಮತಗಳನ್ನು ಸೆಳೆಯುವ ಕಸರತ್ತಿನಲ್ಲಿ ತೊಡಗಿವೆ.

13 ಕೋಟಿಗೂ ಹೆಚ್ಚು ಜನಸಂಖ್ಯೆಯಿರುವ ರಾಜ್ಯ ಬಿಹಾರ. ಇಲ್ಲಿ ಹಿಂದೂಗಳು ಒಟ್ಟು ಜನಸಂಖ್ಯೆಯ ಶೇ. 82.69ರಷ್ಟಿದ್ದರೆ, ಮುಸ್ಲಿಮರು ಶೇ.17.7ರಷ್ಟಿದ್ದಾರೆ. ಈ ರಾಜ್ಯದ ಒಟ್ಟು ಲೋಕಸಭಾ ಕ್ಷೇತ್ರಗಳು 40.

ಒಂದು ಕಾಲದಲ್ಲಿ ಕಾಂಗ್ರೆಸ್ ಪ್ರಾಬಲ್ಯವಿದ್ದ ಬಿಹಾರದಲ್ಲಿ 1989ರ ಲೋಕಸಭಾ ಚುನಾವಣೆಯ ಬಳಿಕ ಜನತಾ ದಳ ಮತ್ತು ಬಿಜೆಪಿ ಮುನ್ನೆಲೆಗೆ ಬಂದವು. 1998ರ ಚುನಾವಣೆಯಲ್ಲಿ ಬಿಜೆಪಿಗೆ ಭಾರೀ ಪೈಪೋಟಿಯೊಡ್ಡಿ ಗಮನಾರ್ಹ ಸೀಟುಗಳನ್ನು ಗೆದ್ದಿದ್ದ ಆರ್ಜೆಡಿ, 2004ರಲ್ಲಿ ಪ್ರಾಬಲ್ಯ ಮೆರೆಯಿತು. 2009ರ ಚುನಾವಣೆಯಲ್ಲಿ ಜೆಡಿಯು ಪ್ರಾಬಲ್ಯ ತೋರಿಸಿತು.

2014 ಮತ್ತು 2019ರ ಚುನಾವಣೆಗಳಲ್ಲಿ ಬಿಹಾರದಲ್ಲಿ ಮತ್ತೆ ಬಿಜೆಪಿ ಜೆಡಿಯು ಜೊತೆಯಾಗಿ ಚುನಾವಣೆ ಎದುರಿಸಿದ್ದವು. ಆದರೆ ಈ ಸಲ ‘ಇಂಡಿಯಾ’ ಒಕ್ಕೂಟ ಬಿಜೆಪಿಯನ್ನು ಎದುರಿಸಲಿರುವುದರಿಂದ, ಬಿಹಾರದ ಪ್ರಮುಖ ಪಕ್ಷಗಳಾದ ಜೆಡಿಯು ಮತ್ತು ಆರ್ಜೆಡಿ ಮತಗಳು ಒಡೆದುಹೋಗುವುದನ್ನು ತಪ್ಪಿಸಿ, ದೊಡ್ಡ ಗೆಲುವನ್ನು ದಾಖಲಿಸಬಹುದೆಂಬ ನಿರೀಕ್ಷೆಯನ್ನು ಎಲ್ಲ ಪ್ರತಿಪಕ್ಷ ನಾಯಕರು ಇಟ್ಟುಕೊಂಡಿದ್ದಾರೆ.




ಇಂಡಿಯಾ ಮೈತ್ರಿಕೂಟ ಸೀಟು ಹಂಚಿಕೆಯ ವಿಚಾರವಾಗಿ ಇನ್ನೂ ನಿರ್ಧಾರ ಕೈಗೊಳ್ಳಬೇಕಿದೆಯಾದರೂ, ಜೆಡಿಯು ಮತ್ತು ಆರ್ಜೆಡಿ ಒಟ್ಟಿಗೆ 34 ಸೀಟುಗಳನ್ನು ಬಯಸಿವೆ ಎಂಬ ವರದಿಗಳಿವೆ. ಉಳಿದ 6 ಸ್ಥಾನಗಳನ್ನು ಅವು ಮೈತ್ರಿಕೂಟದ ಪಕ್ಷಗಳಿಗೆ ಬಿಟ್ಟುಕೊಡಲು ತಯಾರಿವೆ.

ಕಳೆದ ಚುನಾವಣೆಯಲ್ಲಿ ಜೆಡಿಯು ಎನ್ಡಿಎ ಮೈತ್ರಿಕೂಟದ ಭಾಗವಾಗಿತ್ತು ಮತ್ತು ಅವೆರಡೂ ಪಕ್ಷಗಳು ತಲಾ 17 ಸ್ಥಾನಗಳಲ್ಲಿ ಸ್ಪರ್ಧಿಸಿದ್ದವು. ಬಿಜೆಪಿ ಎಲ್ಲ ಸ್ಥಾನಗಳನ್ನೂ ಗೆದ್ದಿದ್ದರೆ, ಜೆಡಿಯು ಒಂದು ಸ್ಥಾನ ಹೊರತುಪಡಿಸಿ ಉಳಿದೆಲ್ಲ ಕಡೆ ಗೆದ್ದಿತ್ತು. ಉಳಿದ 6 ಸ್ಥಾನಗಳಲ್ಲಿ ಎನ್ಡಿಎ ಮೈತ್ರಿಕೂಟದ ಮತ್ತೊಂದು ಪಕ್ಷ, ಆಗ ರಾಮ್ ವಿಲಾಸ್ ಪಾಸ್ವಾನ್ ನೇತೃತ್ವದಲ್ಲಿದ್ದ ಲೋಕ ಜನಶಕ್ತಿ ಪಾರ್ಟಿ (ಎಲ್ಜೆಪಿ) ಗೆಲುವು ಸಾಧಿಸಿತ್ತು. ಇದರೊಂದಿಗೆ ಎನ್ಡಿಎ 39 ಸ್ಥಾನಗಳನ್ನು ತನ್ನದಾಗಿಸಿಕೊಂಡಿತ್ತು. ಕಾಂಗ್ರೆಸ್ ಒಂದು ಸ್ಥಾನವನ್ನು ಗೆದ್ದರೆ, ಆರ್ಜೆಡಿ ಯಾವುದೇ ಸೀಟು ಗಳಿಸಲು ಸಾಧ್ಯವಾಗಿರಲಿಲ್ಲ.

ಆದರೆ ಕಳೆದ ವರ್ಷ ನಿತೀಶ್ ಕುಮಾರ್ ಆರ್ಜೆಡಿ ಜೊತೆ ಮೈತ್ರಿ ಮಾಡಿಕೊಂಡ ಬಳಿಕ ಸಮೀಕರಣ ಪೂರ್ತಿ ಬದಲಾಗಿದೆ.

ಈ ಬಾರಿ ಅವೆರಡೂ ಪಕ್ಷಗಳು ಜೊತೆಯಾಗಿ ಕಣಕ್ಕಿಳಿಯಲು ತಯಾರಿ ನಡೆಸಿದ್ದು, ತಲಾ 17 ಸ್ಥಾನಗಳಂತೆ ಹಂಚಿಕೊಳ್ಳಲಿವೆ ಎನ್ನಲಾಗುತ್ತಿದೆ. ಉಳಿದ 6 ಸೀಟುಗಳಲ್ಲಿ 4 ಕಾಂಗ್ರೆಸ್ಗೆ

ಮತ್ತು 2 ಸಿಪಿಐಎಂಎಲ್ಗೆ ಎಂಬುದು ಅವುಗಳ ಲೆಕ್ಕಾಚಾರ. ಆದರೆ ಕಾಂಗ್ರೆಸ್ 8 ಸ್ಥಾನಗಳಿಗೆ ಒತ್ತಾಯಿಸ ಬಹುದು ಎಂಬ ಸಾಧ್ಯತೆಯನ್ನೂ ನಿತೀಶ್ ಕುಮಾರ್ ನಿರೀಕ್ಷಿಸಿದ್ದಾರೆ.

ಯಾರು ಎಷ್ಟು ಸ್ಥಾನಗಳಲ್ಲಿ ಸ್ಪರ್ಧಿಸುತ್ತಾರೆ ಎಂಬುದಷ್ಟೇ ಮುಖ್ಯವಲ್ಲ, ಸ್ಪರ್ಧಿಸಿದ ಅಭ್ಯರ್ಥಿಗಳು ಗೆಲ್ಲಬಲ್ಲರೇ ಎಂಬುದೇ ಮುಖ್ಯವಾಗಿದೆ ಎಂದು ಅವರು ಹೇಳಿದ್ದಾರೆ. ಈ ನಡುವೆ ಕಾಂಗ್ರೆಸ್ 9 ಸೀಟುಗಳಿಗಾಗಿ ಒತ್ತಾಯಿಸಿರುವ ವರದಿಯೂ ಇದೆ.

ಕಳೆದ ಚುನಾವಣೆಯಲ್ಲಿ 9 ಸ್ಥಾನಗಳಲ್ಲಿ ಸ್ಪರ್ಧಿಸಿದ್ದ ಕಾಂಗ್ರೆಸ್ ಒಂದು ಸ್ಥಾನವನ್ನು ಮಾತ್ರ ಗೆದ್ದಿತ್ತು. ಆದರೆ ಈ ಬಾರಿ ಕಾಂಗ್ರೆಸ್ ಪ್ರಬಲವಾಗಿದೆ ಎಂಬುದು ಪಕ್ಷದ ರಾಜ್ಯ ಘಟಕದ ನಾಯಕರ ಪ್ರತಿಪಾದನೆ.

ಈ ನಡುವೆ ಮತ್ತೊಂದು ಎಡಪಕ್ಷ ಸಿಪಿಐ ಕೂಡ ಸೀಟುಗಳಿಗಾಗಿ ಬೇಡಿಕೆಯಿಟ್ಟಿದೆ. ಉತ್ತರ ಬಿಹಾರದಲ್ಲಿ ಸಿಪಿಐ ಪ್ರಭಾವ ಹೆಚ್ಚಿದೆ.

ಇನ್ನೊಂದೆಡೆ, ಬೇಡ ಸಮುದಾಯದಲ್ಲಿ ಪ್ರಭಾವ ಹೊಂದಿರುವ ವಿಕಾಸಶೀಲ ಇನ್ಸಾನ್ ಪಕ್ಷವನ್ನೂ (ವಿಐಪಿ) ಕಣಕ್ಕಿಳಿಸುವ ವಿಚಾರದಲ್ಲಿ ಮೈತ್ರಿ ಪಕ್ಷಗಳು ಮುಕ್ತವಾಗಿವೆ.

ಮುಝಪ್ಫರ್ ಪುರದಲ್ಲಿ ವಿಐಪಿ ಅಭ್ಯರ್ಥಿಗೆ ಅವಕಾಶ ನೀಡುವುದು, ಮಾದೇಪುರದಲ್ಲಿ ಕಾಂಗ್ರೆಸ್ ಕೋಟಾದಲ್ಲಿ ಮಾಜಿ ಎಂಪಿ ಪಪ್ಪು ಯಾದವ್ ಗೆ ಟಿಕೆಟ್ ನೀಡುವ ಉದ್ದೇಶ ಮೈತ್ರಿಪಕ್ಷಗಳಿಗಿದೆ. ಪಪ್ಪು ಯಾದವ್ ಪತ್ನಿ ರಂಜೀತ್ ರಂಜನ್ ಕಾಂಗ್ರೆಸ್ನ ರಾಜ್ಯಸಭಾ ಸದಸ್ಯೆಯಾಗಿದ್ದಾರೆ.

ಇನ್ನು ಬಿಜೆಪಿ ಈ ಬಾರಿ ಎಲ್ಲಾ 40 ಕ್ಷೇತ್ರಗಳನ್ನೂ ಗೆದ್ದುಬಿಡುವುದಾಗಿ ಹೇಳಿಕೊಳ್ಳುತ್ತಿರುವ ವರದಿಗಳೂ ಇವೆ.

ಕಳೆದ ಬಾರಿ ಎನ್ಡಿಎ 39 ಸೀಟುಗಳನ್ನು ಗೆದ್ದಿರುವುದನ್ನು ಉಲ್ಲೇಖಿಸಿರುವ ಅಮಿತ್ ಶಾ, ಈ ಬಾರಿ ಎಲ್ಲ ದಾಖಲೆ ಮುರಿಯುವುದಾಗಿ ಇತ್ತೀಚೆಗೆ ರ್ಯಾಲಿಯೊಂದರಲ್ಲಿ ಹೇಳಿದ್ದಾರೆ. ಅವಕಾಶವಾದಿ ಪ್ರತಿಪಕ್ಷ ಮೈತ್ರಿಕೂಟ ಅತ್ಯಂತ ಕೆಟ್ಟ ಸ್ಥಿತಿಯನ್ನು ಎದುರಿಸಲಿದೆ ಎಂದೂ ಅವರು ಹೇಳಿದ್ದಾರೆ. ನಿತೀಶ್-ಲಾಲೂ ಮೈತ್ರಿ ಹೆಚ್ಚು ದಿನಗಳದ್ದಲ್ಲ ಎಂದೂ ಶಾ ಟೀಕಿಸಿದ್ದಾರೆ. ಆದರೆ ಬಿಜೆಪಿ ಈ ಬಾರಿ ಬಿಹಾರದಲ್ಲಿ ಹೇಳ ಹೆಸರಿಲ್ಲದಂತಾಗಲಿದೆ ಎಂಬುದು ನಿತೀಶ್ ಅಭಿಪ್ರಾಯವಾಗಿದೆ.

ಈ ನಡುವೆ ಬಿಹಾರ ಸರಕಾರ ಜಾತಿ ಜನಗಣತಿ ವರದಿ ಬಿಡುಗಡೆ ಮಾಡಿರುವುದರಿಂದ, ಬಿಹಾರ ರಾಜಕೀಯದ ಸಮೀಕರಣ ರಾಷ್ಟ್ರಮಟ್ಟದಲ್ಲೂ ಪರಿಣಾಮ ಬೀರುವುದಕ್ಕೆ ಕಾರಣವಾಗಿದೆ. ಇದು ಬಿಜೆಪಿಗೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಸವಾಲಾಗಿ ಪರಿಣಮಿಸಲಿದೆ ಎಂಬ ವಿಶ್ಲೇಷಣೆಗಳಿವೆ. ಜಾತಿ ಜನಗಣತಿ ವರದಿಯ ಪರಿಣಾಮವಾಗಿ ತಾನು ನೆಚ್ಚಿರುವ ಮತಗಳು ಕೈತಪ್ಪಲಿವೆಯೇ ಎಂಬ ಆತಂಕ ಬಿಜೆಪಿಯನ್ನು ಕಾಡತೊಡಗಿದೆ.

ಬಿಹಾರದಲ್ಲಿ ಅಸ್ತಿತ್ವದಲ್ಲಿರುವ 215 ಜಾತಿಗಳು ಬರುವ ಲೋಕಸಭಾ ಚುನಾವಣೆಯಲ್ಲಿ ವಹಿಸಬಹುದಾದ ಪಾತ್ರ ಕುತೂಹಲ ಕೆರಳಿಸಿದೆ. ಎಲ್ಲಾ ರಾಜಕೀಯ ಪಕ್ಷಗಳು ವಿವಿಧ ಜಾತಿಗಳ ಓಲೈಕೆಗಾಗಿ ಪೈಪೋಟಿಗೆ ಬೀಳಲಿವೆ.

ಜಾತಿ ಆಧರಿತ ಮತಗಳನ್ನು ಸೆಳೆಯಲು ಜೆಡಿಯು ಮತ್ತು ಆರ್ಜೆಡಿ ರಣತಂತ್ರ ರೂಪಿಸಿವೆ.




ಜಾತಿ ಲೆಕ್ಕಾಚಾರವೇ ಬಿಹಾರದಲ್ಲಿ ಪ್ರಮುಖ ಅಂಶವಾಗಿದ್ದು, ಗೆಲುವಿನ ಸಾಧ್ಯತೆ ಮತ್ತು ಜಾತಿಬಲಗಳೇ ಟಿಕೆಟ್ ಹಂಚಿಕೆಗೆ ಮುಖ್ಯ ಮಾನದಂಡವಾಗಲಿವೆ.

ಈ ನಡುವೆ ಜೆಡಿಯು ಒಳಗಿನ ತಲ್ಲಣಗಳು ಆಗಾಗ ಸುದ್ದಿಯಾಗುತ್ತಿವೆ. ಆರ್ಜೆಡಿ ಜೊತೆ ಆಪ್ತರಾಗಿದ್ದಾರೆ ಎನ್ನಲಾದ ಲಲ್ಲನ್ ಸಿಂಗ್ ಅವರು ಕೆಳಗಿಳಿದು ನಿತೀಶ್ ಅವರೇ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿದ್ದಾರೆ. ಆ ಪಕ್ಷದೊಳಗೆ ನಿಜಕ್ಕೂ ಏನು ನಡೆಯುತ್ತಿದೆ ಎಂಬ ಕುತೂಹಲ ಎಲ್ಲರಿಗೂ ಇದೆ. ಏಕೆಂದರೆ, ನಿತೀಶ್ ಕುಮಾರ್ ಅವರ ಮುಂದಿನ ನಡೆ ಏನಿರಬಹುದು ಎಂದು ಊಹಿಸಲು ಯಾರಿಗೂ ಸಾಧ್ಯವಿಲ್ಲ.

ಇನ್ನು ಜಾರ್ಖಂಡ್ ವಿಷಯಕ್ಕೆ ಬರುವುದಾದರೆ 3.30 ಕೋಟಿಗೂ ಹೆಚ್ಚು ಜನರಿರುವ ರಾಜ್ಯ ಜಾರ್ಖಂಡ್ನಲ್ಲಿ ಹಿಂದೂಗಳು ಒಟ್ಟು ಜನಸಂಖ್ಯೆಯ ಶೇ.67.83ರಷ್ಟಿದ್ದರೆ, ಮುಸ್ಲಿಮರ ಸಂಖ್ಯೆ ಶೇ.14.53. ಈ ರಾಜ್ಯದ ಒಟ್ಟು ಲೋಕಸಭಾ ಕ್ಷೇತ್ರಗಳು 14.

ಇಲ್ಲಿನ ಪ್ರಮುಖ ರಾಜಕೀಯ ಪಕ್ಷಗಳೆಂದರೆ, ಬಿಜೆಪಿ, ಜಾರ್ಖಂಡ್ ಮುಕ್ತಿಮೋರ್ಚಾ (ಜೆಎಂಎಂ), ಕಾಂಗ್ರೆಸ್, ಆರ್ಜೆಡಿ, ಸಿಪಿಐಎಂಎಲ್, ಜೆಡಿಯು, ಎಜೆಎಸ್ಯು.

2004ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪ್ರಾಬಲ್ಯ ಸ್ವಲ್ಪ ಮಟ್ಟಿಗೆ ಕಂಡಿತ್ತು. ಆದರೆ ಕಳೆದ ಮೂರೂ ಚುನಾವಣೆಗಳಲ್ಲಿ ಬಿಜೆಪಿಯೇ ಹಿಡಿತ ಸಾಧಿಸಿದೆ.

ಕಳೆದ ಲೋಕಸಭಾ ಚುನಾವಣೆಯಲ್ಲಿ ಒಟ್ಟು 14 ಸ್ಥಾನಗಳಲ್ಲಿ ಬಿಜೆಪಿ 11 ಸ್ಥಾನಗಳನ್ನು ಗೆದ್ದಿತ್ತು.

ಉಳಿದಂತೆ ಆಲ್ ಜಾರ್ಖಂಡ್ ಸ್ಟೂಡೆಂಟ್ಸ್ ಯೂನಿಯನ್ (ಎಜೆಎಸ್ಯು), ಕಾಂಗ್ರೆಸ್ ಹಾಗೂ ಜೆಎಂಎಂ ತಲಾ ಒಂದು ಸ್ಥಾನದಲ್ಲಿ ಜಯ ಗಳಿಸಿದ್ದವು.

ಎಲ್ಲಾ ರಾಜಕೀಯ ಪಕ್ಷಗಳು ಕಣ್ಣಿಟ್ಟಿರುವುದು ಬುಡಕಟ್ಟು ಜನಾಂಗದ ಮತಬ್ಯಾಂಕ್ ಮೇಲೆಯೇ.

ಬಿಜೆಪಿಯು ಬಾಬುಲಾಲ್ ಮರಾಂಡಿ ಅವರನ್ನು ಪಕ್ಷದ ರಾಜ್ಯಾಧ್ಯಕ್ಷರನ್ನಾಗಿ ಮಾಡುವುದರ ಹಿಂದೆಯೂ ಬುಡಕಟ್ಟು ಮತಗಳನ್ನು ಸೆಳೆಯುವ ತಂತ್ರವೇ ಇದೆ.

ಇನ್ನು ಜಾರ್ಖಂಡ್ನಲ್ಲಿನ ಜೆಎಂಎಂ ಸರಕಾರ ರಾಜ್ಯದಾದ್ಯಂತ ಬುಡಕಟ್ಟು ಹಬ್ಬಗಳನ್ನು ದೊಡ್ಡ ಪ್ರಮಾಣದಲ್ಲಿ ಆಯೋಜಿಸುವ ಮೂಲಕ ಬುಡಕಟ್ಟು ಮತಗಳನ್ನು ಕ್ರೋಡೀಕರಿಸಲು ಶ್ರಮಿಸುತ್ತಿದೆ.

share
ಹರೀಶ್ ಎಚ್.ಕೆ.
ಹರೀಶ್ ಎಚ್.ಕೆ.
Next Story
X