ಮುಂಗಾರು ಋತುವಿನಲ್ಲಿ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ?: ಇಲ್ಲಿದೆ ಮಾಹಿತಿ
ಸಾಂದರ್ಭಿಕ ಚಿತ್ರ.
ಮಳೆಗಾಲದಲ್ಲಿ ಕೂಡಾ ಫಾಂಟಾ ಹಾಗೂ ಕೋಲ್ಡ್ ಕಾಫಿ ಸೇವಿಸುವ ಹವ್ಯಾಸ ಬೆಳೆಸಿಕೊಂಡಿದ್ದೀರಾ? ಹಾಗಾದರೆ ತಕ್ಷಣ ಅದನ್ನು ನಿಲ್ಲಿಸಿ. ಹೈದರಾಬಾದ್ನ ಯಶೋಧಾ ಆಸ್ಪತ್ರೆಯ ತಜ್ಞ ಡಾ.ಸೋಮನಾಥ್ ಗುಪ್ತಾ ಅವರ ಪ್ರಕಾರ, ಮಳೆಗಾಲದಲ್ಲಿ ಇಂಥ ತಣ್ಣಗಿನ ಪಾನೀಯ ಸೇವಿಸುವುದು ನಿಮ್ಮ ದೇಹದ ಸಮತೋಲನ ತಪ್ಪಲು ಕಾರಣವಾಗಿ ಹಲವು ಆರೋಗ್ಯ ಸಮಸ್ಯೆಗಳನ್ನು ಹುಟ್ಟುಹಾಕಬಹುದು.
"ಮಳೆಗಾಲದಲ್ಲಿ ತೇವಾಂಶ ಅಧಿಕವಾಗಿದ್ದು, ತಾಪಮಾನವೂ ಕಡಿಮೆ ಇರುತ್ತದೆ. ಇದು ದೇಹದ ಆಂತರಿಕ ಸಮತೋಲನಕ್ಕೆ ಸವಾಲು. ತಣ್ಣಗಿನ ಆಹಾರ ಈ ಸಮಸ್ಯೆಗಳನ್ನು ಮತ್ತಷ್ಟು ತೀವ್ರಗೊಳಿಸಿ, ಗಂಭೀರ ಆರೋಗ್ಯ ಸಮಸ್ಯೆಗಳನ್ನು ತಂದೊಡ್ಡಬಹುದು" ಎಂದು ಅವರು ಹೇಳುತ್ತಾರೆ.
ಇದು ಬ್ಯಾಕ್ಟೀರಿಯಾ ಹಾಗೂ ವೈರಸ್ಗಳು ವೇಗವಾಗಿ ಬೆಳೆಯಲು ಅನುಕೂಲಕರ ಪರಿಸರ ನಿರ್ಮಿಸುತ್ತದೆ ಎನ್ನುವುದು ಪುಣೆಯ ಡಿಪಿಯು ಖಾಸಗಿ ಆಸ್ಪತ್ರೆಯ ತಜ್ಞ ಡಾ.ಪ್ರಸಾದ್ ಕುವಳೇಕರ್ ಅವರ ಅಭಿಮತ.
ಪಿಂಪ್ರಿ ವೈದ್ಯ ಡಾ.ಅಕ್ಷಯ್ ಅನಂತ್ ಧಾಮ್ನೆ ಪ್ರಕಾರ, ತಂಪು ಆಹಾರ ಮತ್ತು ಪಾನೀಯಗಳ ಸೇವನೆ ಹೊಟ್ಟೆ ಸಂಬಂಧಿ ಸಮಸ್ಯೆಗಳಾದ ಉಬ್ಬರಿಸುವಿಕೆ, ಡಿಹೈಡ್ರೇಷನ್ ಮತ್ತು ಸೆಳೆತ, ವೈರಸ್ ಸೋಂಕು ಮತ್ತು ಅತಿಸಾರದಂಥ ಸಮಸ್ಯೆಗೂ ಕಾರಣವಾಗುತ್ತದೆ. ದೇಹದ ಪ್ರತಿರಕ್ಷಣಾ ವ್ಯವಸ್ಥೆ ದುರ್ಬಲಗೊಂಡು ಸೋಂಕುಗಳು ಹೆಚ್ಚಲು ತಂಪುಪಾನೀಯಗಳ ಸೇವನೆ ಕಾರಣವಾಗುತ್ತದೆ ಎಂದು ಅವರು ವಿವರಿಸುತ್ತಾರೆ.
ಕೃಪೆ: indianexpress.com