ಚೀನಾದ ವಿರುದ್ಧ ಭಾರತ ಫುಟ್ಬಾಲ್ ತಂಡಕ್ಕೆ 1-5 ಅಂತರದ ಸೋಲು
Image: @IndianFootball
ಹೊಸದಿಲ್ಲಿ: ಏಶ್ಯನ್ ಗೇಮ್ಸ್ ಫುಟ್ಬಾಲ್ ಸ್ಪರ್ಧೆಯ ತನ್ನ ಮೊದಲ ಗ್ರೂಪ್ ಲೀಗ್ ಪಂದ್ಯದಲ್ಲಿ ಭಾರತದ ಫುಟ್ಬಾಲ್ ತಂಡ ಆತಿಥೇಯ ದೇಶ ಚೀನಾದ ವಿರುದ್ಧ 1-5 ಅಂತರದಿಂದ ಸೋಲನುಭವಿಸಿದೆ.
ಮಂಗಳವಾರ ನಡೆದ ಪಂದ್ಯದಲ್ಲಿ ಚೀನಾದ ಪರ ಜಿಯಾವೊ(17ನೇ ನಿಮಿಷ), ಡೈ ವೆಜುನ್(51ನೇ ನಿಮಿಷ), ಕ್ವಿಯಾಂಗ್ಲಾಂಗ್(72ನೇ ಹಾಗೂ 75ನೇ ನಿಮಿಷ) ಹಾಗೂ ಹಾವೊ ಫಾಂಗ್(90+2 ನಿ.)ಗೋಲು ಗಳಿಸಿದರು. ರಾಹುಲ್ ಕೆ.ಪಿ.(45+1 ನಿಮಿಷ) ಭಾರತದ ಪರ ಏಕೈಕ ಗೋಲು ಗಳಿಸಿದರು. ಭಾರತ ತಂಡವು ದ್ವಿತೀಯ ಸುತ್ತಿಗೆ ತಲುಪಲು ಬಾಂಗ್ಲಾದೇಶ ಹಾಗೂ ಮ್ಯಾನ್ಮಾರ್ ತಂಡಗಳನ್ನು ಮಣಿಸಲೇಬೇಕಾಗಿದೆ.
Next Story